ಕೆಯ್ಯೂರು: ರಸ್ತೆಗೆ ವಾಲಿ ನಿಂತಿವೆ ಒಣಗಿದ ಮರಗಳು
Team Udayavani, Apr 25, 2019, 6:00 AM IST
ರಸ್ತೆಯ ಅಂಚಿನಲ್ಲೇ ಇರುವ ಮರಗಳು ರಸ್ತೆಯತ್ತ ವಾಲಿರುವುದು.
ಕೆಯ್ಯೂರು: ಪುತ್ತೂರು ತಾಲೂಕಿನ ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕೆಯ್ಯೂರು ಗ್ರಾಮದ ಕೈಕಂಬದಿಂದ ಕೆಯ್ಯೂರು ಶಾಲೆ ತನಕ ಸಂಚರಿಸುವುದೆಂದರೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಪ್ರಾಣ ಭೀತಿ ಇದೆ. ಕಾರಣ ರಸ್ತೆಯ ಒಂದು ಬದಿಯಲ್ಲಿ ಆಳೆತ್ತರದ ಅಕೇಶಿಯಾ ಮರಗಳು ಒಣಗಿ ರಸ್ತೆಗೆ ಬಾಗಿ ನಿಂತಿರುವುದು. ಸ್ಥಳೀಯ ಗ್ರಾ.ಪಂ. ಸಾಮಾನ್ಯ ಸಭೆ, ಗ್ರಾಮಸಭೆಯ ನಿರ್ಣಯ ಮೇರೆಗೆ ಸ್ಥಳಕ್ಕೆ ಬಂದ ಇಲಾಖೆಯ ಸಿಬಂದಿ, ಎರಡು ಮರ ಕಡಿದು ತೆರಳಿದ್ದಾರೆ. ಉಳಿದ ಮರಗಳನ್ನು ಕಡಿಯದೆ ಬಿಟ್ಟು ಹೋಗಿದ್ದಾರೆ.
ಒಣಗಿದ ಸಾಲು ಮರಗಳು
ಪುತ್ತೂರು-ಕುಂಬ್ರ-ಕೆಯ್ಯೂರು-ಬೆಳ್ಳಾರೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಲು ಅವಕಾಶ ಇರುವುದರಿಂದ ಇಲ್ಲಿ ವಾಹನ ಓಡಾಟವೂ ಅಧಿಕವಾಗಿರುತ್ತದೆ. ಕೆಎಸ್ಸಾರ್ಟಿಸಿ ಬಸ್, ಟೂರಿಸ್ಟ್ ಕಾರುಗಳು ದಿನಂಪ್ರತಿ ಸಾಗುತ್ತವೆ. ದೇರ್ಲ, ಅರಿಕ್ಕಿಲ, ಕಣಿಯಾರು ಮೊದಲಾದ ಭಾಗದಿಂದ ನೂರಾರು ಮಕ್ಕಳು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಈ ರಸ್ತೆ ಬದಿಯಲ್ಲೇ ನಡೆದುಕೊಂಡು ಸಂಚರಿಸುತ್ತಾರೆ. ಒಣಗಿದ ಅಕೇಶಿಯಾ ಜಾತಿಗೆ ಸೇರಿದ ಮರಗಳು ರಸ್ತೆಯ ಅಂಚಿಗೆ ವಾಲಿದ್ದು, ಅರ್ಧ ಕಿ.ಮೀ. ದೂರಕ್ಕೂ ಅಧಿಕ ಪ್ರದೇಶದಲ್ಲಿ ಇಂತಹ ಮರಗಳು ಇವೆ. ಮರಗಳು ರಸ್ತೆ ಅಂಚಿಗೆ ರೆಂಬೆ-ಕೊಂಬೆ ಹರಡಿದ್ದು, ಮುರಿದು ಬೀಳುವ ಸ್ಥಿತಿಯಲ್ಲಿದೆ.
ಹೊಣೆ ಯಾರು?
ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗಿನ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆ ಇಲ್ಲಿ ಅಕೇಶಿಯಾ ಗಿಡಗಳನ್ನು ನೆಟ್ಟಿದೆ. ರಸ್ತೆ ಬದಿಯಿಂದ ಐದಾರು ಮೀಟರ್ ಒಳಗಿನ ತನಕ ಗಿಡ ನೆಟ್ಟು ಅನಂತರ ಕಟಾವು ಮಾಡಲಾಗುತ್ತದೆ. ಅರಿಕ್ಕಿಲ ತಿರುವಿನಿಂದ ಕೈಕಂಬ-ಕೆಯ್ಯೂರು ಪ್ರಾಥಮಿಕ ಶಾಲೆ ಮುಂಭಾಗದ ತನಕ ಅಕೇಶಿಯಾ ಮರಗಳು ಹಬ್ಬಿವೆ. ನೆಟ್ಟು ಆಳೆತ್ತರಕ್ಕೆ ಬೆಳೆದು, ಒಣಗಿ ನಿಂತರೂ ಕಡಿಯುವವರು ಇಲ್ಲ. ಹಾಗಾಗಿ ರಸ್ತೆಯಲ್ಲಿ ಸಾಗುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನುತ್ತದೆ ಇಲ್ಲಿನ ಚಿತ್ರಣ.
ಇಲಾಖೆಗಳ ನಡುವೆಯೇ ಗೊಂದಲ
ತಾಲೂಕಿನ ರಸ್ತೆ ಬದಿಗಳಲ್ಲಿ ಇರುವ ಮರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಮಧ್ಯೆ ಗೊಂದಲ ಇದೆ. ಕಡಿಯುವುದು ನಮ್ಮ ಕರ್ತವ್ಯ ಅಲ್ಲ, ನೆಡುವುದು ಮಾತ್ರ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ. ಮರ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಪಿಡಬ್ಯುಡಿ ಇಲಾಖೆ ರಸ್ತೆ ಬದಿಗಳಲ್ಲಿನ ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ಮಾತ್ರ ನಮಗೆ ತೆರವು ಮಾಡಲು ಅಧಿಕಾರ ಇರುವುದು. ಅದೇ ತರಹ ಮರ ಬಿದ್ದ ಮೇಲೆ ಅದನ್ನು ತೆರವು ಮಾಡಬೇಕಾದದ್ದು ಇಲಾಖೆಯ ಜವಾಬ್ದಾರಿ. ಅದಕ್ಕೆ ಲೋಕೋಪಯೋಗಿ ಇಲಾಖೆ ಹೊಣೆ ಅಲ್ಲ ಎನ್ನುತ್ತಾರೆ ಪಿಡಬ್ಲೂಡಿ ಅಧಿಕಾರಿಗಳು. ಇಲಾಖೆಗಳ ಜಂಜಾಟದ ಮಧ್ಯೆ ಅನಾಹುತ ಸಂಭವಿಸಿದರೆ ಹೊಣೆ ಯಾರು?
ಅಪಾಯಕಾರಿ ವಿದ್ಯುತ್ ತಂತಿಗಳು
ಮರದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ಮರ ಬಿದ್ದಲ್ಲಿ ವಿದ್ಯುತ್ ತಂತಿಗಳ ಮೇಲೆಯೇ ಬೀಳುತ್ತದೆ. ಇದರಿಂದ ನೂರಾರು ಮನೆಯ ವಿದ್ಯುತ್ ಪರಿಕರಗಳು ಹಾನಿಗೀಡಾಗುವ ಸಾಧ್ಯತೆ ಇದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆಗೆ ಮುಂದಾಗಬೇಕಿದ್ದರೂ, ಆ ಕೆಲಸ ಆಗಿಲ್ಲ. ಮಳೆಗಾಲದ ಅಪಾಯ ಎದುರಿಸಲು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದರೂ, ಪಾಲನೆಯಾಗಿಲ್ಲ.
ಸ್ಪಂದನೆ ಇಲ್ಲ
ಈಗಾಗಲೇ ಹಲವು ಗ್ರಾಮಸಭೆಗಳಲ್ಲಿ ಮನವಿ ಮಾಡಿದ್ದೇವೆ. ನಮ್ಮ ಗ್ರಾ.ಪಂ.ನಿಂದ ಅರ್ಜಿಗಳನ್ನು ಕಳಿಸಿದ್ದರೂ ಸ್ವಂದನೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮಳೆಗಾಲ ಆರಂಭ ಅಗುವ ಮೊದಲು ಒಣಗಿದ ಮರಗಳನ್ನು ಕಡಿದರೆ ಸಂಭಾವ್ಯ ಅಪಾಯ ತಪ್ಪಿಸಬಹುದು.
- ಸುಬ್ರಹ್ಮಣ್ಯ ಕೆ.ಎಂ., ಕೆಯ್ಯೂರು ಗ್ರಾ.ಪಂ. ಪಿಡಿಒ
ಗಿಡ ನೆಡುವ ಕೆಲಸ ಮಾತ್ರ ನಮ್ಮದು
ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ನಮ್ಮದು. ಅದು ದೊಡ್ಡ ಮರ ಆಗಿ ಒಣಗಿದ ಮೇಲೆ ಕಡಿಯುವ ಹಕ್ಕು ನಮಗಿಲ್ಲ. ಈಗಾಗಲೇ ಅರ್ಜಿ ಕೊಟ್ಟಿದ್ದಾರಾದರೂ, ಅದನ್ನು ಕಡಿಯುವ ಕೆಲಸ ಪುತ್ತೂರು ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಬಹುದು.
– ವಿದ್ಯಾರಾಣಿ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ
ಗೋಪಾಲಕೃಷ್ಣ ಸಂತೋಷ್ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.