ಕುಡಿಯುವ ನೀರಿನ ಸಮಸ್ಯೆ: ಮಹಿಳೆಯರ ಆಕ್ರೋಶ
Team Udayavani, May 6, 2019, 6:30 AM IST
ಎಡಪದವು: ಕುಪ್ಪೆಪದವು ಪೇಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇದರಿಂದ ರೋಸಿಹೋದ ಮಹಿಳೆಯರು ಕುಪ್ಪೆಪದವು ಗ್ರಾ.ಪಂ.ಗೆ ಬಂದಿದ್ದ ಮಂಗಳೂರು ತಾ.ಪಂ.ಕಾರ್ಯ ನಿರ್ವಹಣಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ರವಿವಾರ ನಡೆದಿದೆ.
ಮಂಗಳೂರು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯವರು ರ ವಿ ವಾರ ಪಂ.ಗೆ ಭೇಟಿ ನೀಡಿ ಮಹಿಳೆಯರನ್ನು ಸಮಾ ಧಾನಪಡಿಸಿ, ನೀರು ಸರಬರಾಜು ಮಾಡುವ ಬಗ್ಗೆ ಭರವಸೆ ನೀಡಿದ ಬಳಿಕ ಮಹಿಳೆಯರು ವಾಪಾಸ್ ತೆರಳಿದರು.
2 ತಿಂಗಳುಗಳಿಂದ ಸಮಸ್ಯೆ
ಕುಪ್ಪೆಪದವು ಪೇಟೆಗೆ ನೀರು ಸರಬರಾಜು ಮಾಡುವ ಮಾಣಿಪಳ್ಳ ಎಂಬಲ್ಲಿಯ ಕೊಳವೆ ಬಾವಿಯ ಪಂಪ್ 2 ತಿಂಗಳಿನಿಂದ ಕೆಟ್ಟು ಹೋಗಿದ್ದು, ದುರಸ್ತಿಗಾಗಿ ಖಾಸಗಿಯ ವರಿಗೆ ಹೇಳಲಾಗಿತ್ತು. ಈ ಬಗ್ಗೆ ಗ್ರಾ.ಪಂ. ಪತ್ರವೊಂದನ್ನು ದುರಸ್ತಿದಾರರಿಗೆ ಬರೆದಿದ್ದು, ಈ ಪತ್ರವನ್ನು ಸಂಬಂಧಪಟ್ಟವರಿಗೆ ಪಿಡಿಒ ತಲುಪಿಸಲು ವಿಳಂಬ ಮಾಡಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಪಂ. ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ, ಸದಸ್ಯರಾದ ಅಬೂಬಕ್ಕರ್ ಕಲ್ಲಾಡಿ, ಷರೀಫ್ ಕಜೆ ಪಿಡಿಒ ವಿರುದ್ಧ ಕಾರ್ಯನಿರ್ವಹಣಾಧಿ ಕಾರಿಗೆ ದೂರು ನೀಡಿದರು.
ಕುಡಿಯುವ ನೀರು ಸರಬರಾಜಿಗೆ ತತ್‌ಕ್ಷಣ ಕ್ರಮ ಕೈಗೊಳ್ಳುವ ಕುರಿತಂತೆ ಕಾರ್ಯ ನಿರ್ವಹಣಾ ಧಿಕಾರಿಯವರು ಭರವಸೆ ನೀಡಿದ ಅನಂತರ ಮಹಿಳೆಯರು ಅಲ್ಲಿಂದ ಹಿಂದಕ್ಕೆ ತೆರಳಿದರು.
ಪಿಡಿಒ ವರ್ಗಾಯಿಸಲು ಒತ್ತಾಯ
ಅನಂತರ ಡಿ.ಪಿ. ಹಮ್ಮಬ್ಬ, ಅಬೂಬಕ್ಕರ್ ಕಲ್ಲಾಡಿ ಮತ್ತು ಷರೀಫ್ ಕಜೆ ಅವರು ಕಾರ್ಯ ನಿರ್ವಹಣಾಧಿಕಾರಿಯೊಂದಿಗೆ ಮಾತನಾಡಿ, ಪಂಚಾಯತ್ ಸದಸ್ಯರ ಸೂಚನೆಗಳನ್ನು ಪಾಲಿಸದ, ಸದಸ್ಯರಿಗೆ ಗೌರವ ಕೊಡದ ಇಂಥ ಪಿಡಿಒ ನಮಗೆ ಬೇಡ. ಇವರನ್ನು ವರ್ಗಾಯಿಸಿ ಬೇರೆ ಪಿಡಿಒ ಅವರನ್ನು ಇಲ್ಲಿಗೆ ನಿಯೋಜಿಸಿ ಎಂದು ಒತ್ತಾಯಿಸಿದರು. ಪಿಡಿಒನ ಅವರನ್ನು ವರ್ಗಾಯಿಸದಿದ್ದರೆ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಸದಸ್ಯ ಅಬೂಬಕ್ಕರ್ ಕಲ್ಲಾಡಿ ಎಚ್ಚರಿಸಿದ್ದಾರೆ. ಪಂ.ಹಿರಿಯ ಸದಸ್ಯ ಹಿರಣ್ಯಕ್ಷ ಕೋಟ್ಯಾನ್ ಈ ವೇಳೆ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.