ಭೂ ದಾಖಲೆಗಳ ಗಣಕೀಕರಣಕ್ಕೆ ಚಾಲನೆ
Team Udayavani, Nov 5, 2017, 3:11 PM IST
ಪುತ್ತೂರು: ತಾಲೂಕಿನಲ್ಲಿರುವ ಭೂಮಿಗಳ ದಾಖಲೆಗಳ ಗಣಕೀಕರಣಕ್ಕೆ ಭೂ ದಾಖಲೆಗಳ ಇಲಾಖೆ ಮುಂದಾಗುವ ಮೂಲಕ ಗಮನ ಸೆಳೆದಿದೆ. ಪ್ರಾರಂಭದಲ್ಲಿ ಭೂಮಿಯ ಆಕಾರ ಬಂದ್ ಗಣಕೀಕರಣಕ್ಕೆ ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ನ. 4ರಂದು
ಪುತ್ತೂರು ಭೂ ದಾಖಲೆಗಳ ಇಲಾಖೆಯಲ್ಲಿಯೂ ಚಾಲನೆ ನೀಡಲಾಯಿತು.
ಪ್ರಾರಂಭದಲ್ಲಿ ಕಡತಗಳಲ್ಲಿ ಇರುವ ಭೂಮಿಯ ದಾಖಲೆಗಳ ಭಾವಚಿತ್ರ ತೆಗೆದು ಅವುಗಳ ಸಿಡಿ ಮಾಡಿ ದಾಖಲೆ ಭದ್ರಪಡಿಸಲಾಗುವುದು. ಸಿಡಿಯ ಒಂದು ಪ್ರತಿಯನ್ನು ಇಲಾಖೆಗೆ ಕಳುಹಿಸಲಾಗುವುದು. ಬಳಿಕ ಆಕಾರ ಬಂದ್ನಲ್ಲಿರುವ ಜಮೀನು ವಿಧಗಳು, ಸರ್ವೆ ನಂಬರ್, ವಿಸ್ತೀರ್ಣ ಹಾಗೂ ನಿಗದಿಪಡಿಸಿದ ದರಗಳು ಸೇರಿದಂತೆ ಒಟ್ಟು 29 ಕಾಲಂಗಳನ್ನು ಕಂಪ್ಯೂಟರ್ ಸಾಫ್ಟ್ವೇರ್ ಮೂಲಕ ದಾಖಲೀಕರಣ ಮಾಡಲಾಗುತ್ತದೆ. ಅನಂತರ ಕಂಪ್ಯೂಟರ್ ನಲ್ಲಿ ದಾಖಲಾಗಿರುವ ಆಕಾರ ಬಂದ್ನ ಮಾಹಿತಿಗಳಿಗೂ ಹಾಗೂ ಸಿಡಿಯಲ್ಲಿರುವ ಮಾಹಿತಿ ಗಳನ್ನು ತಾಳೆ ಮಾಡಿ ತಪಾಸಣೆ ನಡೆಸಲಾಗುವುದು.
ಮಂಗಳೂರಿನ ಇನೊಧೀಟ್ರಾಕ್ ಕಂಪನಿಗೆ ಗಣಕೀಕರಣದ ಗುತ್ತಿಗೆ ನೀಡಲಾಗಿದೆ. ಎಂಟು ಕಂಪ್ಯೂಟರ್ ಹಾಗೂ ಸಿಬಂದಿಯಿಂದ ಗಣಕೀಕರಣದ ಕಾರ್ಯ ನಡೆಯಲಿದೆ ಎಂದು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಬೈರಪ್ಪ ತಿಳಿಸಿದ್ದಾರೆ. ಮೇಲ್ವಿಚಾರಕ ಮಂಜುನಾಥ ಹಾಗೂ ಸಿಬಂದಿಗಳು ಮತ್ತು ಇನೊಧೀಟ್ರಾಕಿನ ಮುಖ್ಯಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.