ಮೊದಲ ಸುತ್ತಿನ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
Team Udayavani, Jan 29, 2018, 9:24 AM IST
ಮಹಾನಗರ: ಪೋಲಿಯೋ ರೋಗ ನಿರ್ಮೂಲನ ಕಾರ್ಯಕ್ರಮದಡಿ 2018ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತಿಗೆ ಜ. 28ರಂದು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಚಾಲನೆ ನೀಡಿದರು.
ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ 5 ವರ್ಷದೊಳಗಿನ 1,59,017 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಇದಕ್ಕೆಂದು ಜಿಲ್ಲೆ, ಹಳ್ಳಿ, ಪಟ್ಟಣ ಸೇರಿದಂತೆ ಒಟ್ಟು 925 ಬೂತ್‌ಗಳನ್ನು ತೆರೆಯಲಾಗಿತ್ತು. 1,671 ತಂಡಗಳು, 3,806 ಲಸಿಕಾ ಕಾರ್ಯಕರ್ತರು, 191 ಮೇಲ್ವಿಚಾರಕರು, 9 ಸಂಚಾರಿ ತಂಡ, 26 ಟ್ರಾನ್ಸಿಸ್ಟ್ ಟೀಂ ಕೆಲಸ ನಿರ್ವಹಿಸಿದ್ದಾರೆ.
ಮಂಗಳೂರು ದ. ಕ್ಷೇತ್ರ ಶಾಸಕ ಜೆ.ಆರ್. ಲೋಬೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಡಿಎಂಒ ಡಾ| ಸುನಿತಾ, ನೋಡೆಲ್ ಅಧಿಕಾರಿ ಡಾ| ಸತೀಶ್ಚಂದ್ರ, ಪಾಲಿಕೆ ಆರೋಗ್ಯಾಧಿಕಾರಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.
ಇನೂ ಮಾ. 11
ಎರಡನೇ ಸುತ್ತಿನ ಪೋಲಿಯೋ ಲಸಿಕೆ ಕಾರ್ಯಕ್ರಮ ಮಾ. 11ರಂದು ನಡೆಯಲಿದೆ .
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.