ಡ್ರೋನ್ ಮೇಲೆ ಕಣ್ಗಾವಲು ಬಿಗಿ: ಪರವಾನಿಗೆ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ
Team Udayavani, Dec 6, 2022, 7:45 AM IST
ಮಂಗಳೂರು: ಅನಧಿಕೃತ ಡ್ರೋನ್‌ಗಳ ಬಳಕೆಗೆ ಕಡಿವಾಣ ಹಾಕಲು ಮಂಗಳೂರು ಪೊಲೀಸರು ಮುಂದಾಗಿದ್ದು ಡ್ರೋನ್ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಸಿದ್ಧತೆ ನಡೆಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕೆಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ತೈಲ ಸಂಗ್ರಹ ಕೇಂದ್ರ, ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಪ್ರಮುಖ ಸೂಕ್ಷ್ಮ ತಾಣಗಳು ಇರುವುದರಿಂದ ಹಾಗೂ ಇತ್ತೀಚೆಗೆ ಕುಕ್ಕರ್ ಬಾಂಬ್ ಸ್ಫೋಟದ ಸಂದರ್ಭ ಬೆದರಿಕೆಯ ಸಂದೇಶಗಳು ಹರಿದಾಡಿದ ಹಿನ್ನೆಲೆಯಲ್ಲಿ ಭದ್ರತೆ
ಯನ್ನು ದೃಢಪಡಿಸುವ ಉದ್ದೇಶದಿಂದ ಕೇಂದ್ರ ನಾಗರಿಕ ವಿಮಾನ ಯಾನ ನಿರ್ದೇಶನಾಲಯ (ಡಿಜಿಸಿಎ) ರೂಪಿಸಿರುವ “ಡ್ರೋನ್ ನಿಯಮ-2021′ ರಂತೆ ಕ್ರಮಕ್ಕೆ ಮುಂದಾಗಿದ್ದಾರೆ.
ನಿಯಮವೇನು?
ನಿಯಮದಂತೆ ನ್ಯಾನೋ ಡ್ರೋನ್ (250 ಗ್ರಾಂ ವರೆಗಿನ ತೂಕ) ಹೊರತು ಉಳಿದೆಲ್ಲಾ ಡ್ರೋನ್‌ಗಳಿಗೆ ಡಿಜಿಸಿಎಯಿಂದ ಅನುಮತಿ ಕಡ್ಡಾಯ. ಡಿಜಿಸಿಎ ಅವರಿಂದ ಪಡೆದ ಯುಐಎನ್/ಯುಎಒಪಿಯ ಪ್ರತಿ, ಡ್ರೋನ್‌ನ ನಿರ್ದಿಷ್ಟ ಮಾಹಿತಿ, ಆಪರೇಟರ್‌ಗಳ ತರಬೇತಿ ಪ್ರಮಾಣಪತ್ರ, ಭೂಮಿ/ಆಸ್ತಿ ಮಾಲಕರ ಅನುಮತಿ ಪತ್ರ (ಡ್ರೋನ್ ಅನ್ನು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಲು ಬಳಸುವ ಪ್ರದೇಶಕ್ಕೆ ಮಾತ್ರ), ಡ್ರೋನ್ ಹಾರಿಸುವಾಗ ಏನಾದರೂ ಘಟನೆ/ಅಪಘಾತ ಸಂಭವಿಸಿದರೆ ಮೂರನೇ ವ್ಯಕ್ತಿಗೆ ಆಗುವ ಹಾನಿಯನ್ನು ಭರಿಸುವ ವಿಮೆ, ಮಾನ್ಯವಿರುವ ಪಿಪಿಸಿ ಮೊದಲಾದ ದಾಖಲೆಗಳನ್ನು ಪೊಲೀಸ್ ಕಮಿಷನರೆಟ್ ಕಚೇರಿ ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳ ಕಚೇರಿಗೆ ನೀಡಬೇಕು. ಡ್ರೋನ್ ಹಾರಿಸಲು ಸೂಕ್ತ ಕಾರಣ ಹಾಗೂ ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕು. ಅನುಮತಿ ಇಲ್ಲದೆ ಹಾರಿಸಿದರೆ ಏರ್‌ಕ್ರಾಫ್ಟ್ ಆ್ಯಕ್ಟ್ 1934ನ ಸೆಕ್ಷನ್ 10,11,11 ಎ ಮತ್ತು ಡ್ರೋನ್ ನಿಯಮಗಳು 2021ರ ನಿಯಮ 49 ಮತ್ತು 50ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.
ಇಬ್ಬರಲ್ಲಷ್ಟೇ ಪರವಾನಿಗೆ!
ಕಮಿಷನರೆಟ್ ವ್ಯಾಪ್ತಿಯಲ್ಲಿ ಇದುವರೆಗೆ ನಿಯಮಾನುಸಾರ ಪರವಾನಿಗೆ ಪಡೆದಿರುವವರು ಇಬ್ಬರು ಮಾತ್ರ. ಡಿಜಿಸಿಎಯ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿಯೇ ಅಗತ್ಯ ದಾಖಲೆ, ಮಾಹಿತಿಯನ್ನು ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬಹುದಾಗಿದೆ.
ಕಡಿವಾಣ ಏಕೆ?
ಡ್ರೋನ್‌ಗಳನ್ನು ರಕ್ಷಣೆ, ಕಾನೂನು ಸುವ್ಯವಸ್ಥೆ, ಕೃಷಿ, ಗಣಿಗಾರಿಕೆ, ಸರ್ವೆಲೆನ್ಸ್, ತುರ್ತು ಕಾರ್ಯಾಚರಣೆ ಮೊದಲಾದವುಗಳಿಗೆ ಬಳಸಲಾಗು ತ್ತದೆ. ಕೆಲವೊಮ್ಮೆ ಇವುಗಳ ದುರುಪ ಯೋಗದ ಸಾಧ್ಯತೆ ಇರುವುದರಿಂದ ಮತ್ತು ಭದ್ರತೆಗೆ ಸವಾಲು ಎದುರಾಗುವ ಅಪಾಯ ಇರುವುದರಿಂದ ಡಿಜಿಸಿಎ ನಿಯಮಾವಳಿ ರೂಪಿಸಿದೆ.
ಬಳಕೆಯಲ್ಲಿರುವ ಡ್ರೋನ್‌ಗಳು
– 250 ಗ್ರಾಂ ವರೆಗಿನ ತೂಕದ್ದು
– 250 ಗ್ರಾಂನಿಂದ 2 ಕೆಜಿಯದ್ದು
– 2 ಕೆಜಿಗಿಂತ 25 ಕೆಜಿ ವರೆಗಿನ ತೂಕದ್ದು
– 25 ಕೆಜಿಗಿಂತ 150 ಕೆಜಿ ವರೆಗಿನ ತೂಕದ್ದು
ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮದುವೆ, ಪ್ರತಿಭಟನೆ, ವಿಐಪಿ ಕಾರ್ಯಕ್ರಮಗಳಲ್ಲಿ ಅವ್ಯಾಹತ ವಾಗಿ ಡ್ರೋನ್‌ಗಳ ಬಳಕೆ ಕಂಡು ಬಂದಿದೆ. ಆರಂಭದಲ್ಲಿ ಡ್ರೋನ್ ಹಾರಾಟ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಬಳಿಕ ನಿಯಮ ಉಲ್ಲಂಘಿಸುವವರ ಡ್ರೋನ್‌ಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
– ಅನ್ಶುಕುಮಾರ್, ಮಂಗಳೂರು ಡಿಸಿಪಿ
– ಎನ್. ಶಶಿಕುಮಾರ್, ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.