ಎತ್ತಿನಹೊಳೆ : ತುಮಕೂರು ಜಿಲ್ಲೆಯಲ್ಲೇ 5,360 ಎಕರೆ ಮುಳುಗಡೆ


Team Udayavani, Jun 3, 2017, 12:41 PM IST

ettinahole.jpg

ಉಳಿದ 6 ಜಿಲ್ಲೆಗಳ ಕಥೆಯೇನು?

ಮಂಗಳೂರು: ಎತ್ತಿನಹೊಳೆ ನೀರಾವರಿ ಯೋಜನೆಗೆ ಪಶ್ಚಿಮ ಘಟ್ಟ ಹಾಗೂ ಬಯಲು ಸೀಮೆ ಗ್ರಾಮಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ಎಷ್ಟು ಸಾವಿರ ಎಕರೆ ಜಮೀನು ಬೇಕು ಹಾಗೂ ಎಷ್ಟು ಗ್ರಾಮಗಳ ಜನರು ಮನೆ-ಮಠ ಕಳೆದುಕೊಳ್ಳುತ್ತಾರೆ ಎಂಬುದನ್ನು ಸರಕಾರ ಬಹಳ ಗುಟ್ಟಾಗಿ ಇರಿಸಿದೆ. 

ಏಕೆಂದರೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಕೇವಲ ಪಶ್ಚಿಮಘಟ್ಟದಲ್ಲಿ ಮಾತ್ರವಲ್ಲ ಬಯಲು ಸೀಮೆಯ ಜಿಲ್ಲೆಗಳಲ್ಲಿಯೂ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗುವ ಭೀತಿ ಎದುರಾಗಿದೆ. ಇದಕ್ಕೆ ಐದು ದಿನಗಳ ಹಿಂದೆಯಷ್ಟೇ, ಸರಕಾರ ಎತ್ತಿನಹೊಳೆ ಯೋಜನೆ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ಕುರಿತು ಹೊರಡಿಸಿರುವ ಆದೇಶವೇ ಸಾಕ್ಷಿ. ಸರಕಾರದ ಈ ಆದೇಶದ ಪ್ರಕಾರ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 5.78 ಟಿಎಂಸಿ ಪ್ರಮಾಣದ ಕುಡಿಯುವ ನೀರು ಸಂಗ್ರಹಿಸಲು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರಗೊಂಡಲು ಗ್ರಾಮದಲ್ಲಿ ಜಲಾಶಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಇಲ್ಲಿನ 27 ಗ್ರಾಮಗಳಲ್ಲಿನ ಒಟ್ಟು 5,360 ಎಕರೆ ಜಮೀನು ಭೂಸ್ವಾಧೀನಪಡಿಸಬೇಕಾಗಿದೆ. ಈ 27 ಗ್ರಾಮಗಳಲ್ಲಿ ಕೊರಟಗೆರೆ ತಾಲೂಕಿನ 16 ಗ್ರಾಮಗಳ ಪೈಕಿ 5 ವಸತಿ ಗ್ರಾಮಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಸಂಬಂಧಿಸಿದ 11 ಗ್ರಾಮಗಳ ಪೈಕಿ 2 ವಸತಿ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಲಿವೆ. 

ಗಮನಾರ್ಹ ಅಂಶವೆಂದರೆ, ಎತ್ತಿನಹೊಳೆ ಯೋಜನಾ ವರದಿಯಲ್ಲಿ ಈ ಹಿಂದೆ ಎಲ್ಲಿಯೂ ಬಯಲು ಸೀಮೆಯಲ್ಲಿ ರೈತರ ಫಲವತ್ತಾದ ಕೃಷಿಭೂಮಿ ಮುಳುಗಡೆಯಾಗುತ್ತದೆ ಎಂದು ಹೇಳಿರಲಿಲ್ಲ. ಆದರೆ, ಇದೀಗ,ಪಶ್ಚಿಮಘಟ್ಟದಲ್ಲಿ ಎತ್ತಿನಹೊಳೆ ಡ್ಯಾಂ ನಿರ್ಮಾಣ ಕಾರ್ಯ ಶುರುವಾಗುತ್ತಿದ್ದಂತೆ, ಬಯಲು ಸೀಮೆಯ ಒಂದೊಂದು ಜಿಲ್ಲೆಯಲ್ಲಿಯೂ ಸಾವಿರಾರು ಎಕರೆ ಭೂಮಿ ಗುರುತಿಸಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹೊರಟಿದೆ. ಎತ್ತಿನಹೊಳೆ ವಿಚಾರದಲ್ಲಿ ತುಮಕೂರು ಜಿಲ್ಲೆಯೊಂದರಲ್ಲೇ ಕೇವಲ 5 ಟಿಎಂಸಿ ನೀರು ಸಂಗ್ರಹಕ್ಕೆ ಸುಮಾರು ಐದೂವರೆ ಸಾವಿರ ಎಕರೆ ಜಮೀನು ಮುಳುಗಡೆಯಾಗುತ್ತದೆ. ಹಾಗಾದರೆ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಉಳಿದ ಬಯಲು ಸೀಮೆ ಜಿಲ್ಲೆಗಳ ರೈತರ ಗತಿಯೇನು? ಆ ಜಿಲ್ಲೆಗಳಲ್ಲಿ ಒಟ್ಟು ಎಷ್ಟು ಸಾವಿರ ಎಕರೆ ರೈತರ ಭೂಮಿ ಮುಳುಗಡೆಯಾಗುತ್ತದೆ ? ಏಕೆಂದರೆ, ಸರಕಾರ ಹೇಳಿದಂತೆ ಎತ್ತಿನಹೊಳೆ ಯೋಜನೆಯಡಿ ಬಯಲು ಸೀಮೆಯ ಏಳು ಜಿಲ್ಲೆಗಳನ್ನು ಗುರಿಯಾಗಿಸಿ ಸರಬರಾಜು ಆಗುವ ಒಟ್ಟು ನೀರಿನ ಪ್ರಮಾಣ 24 ಟಿಎಂಸಿ.!

ಒಂದೆಡೆ, ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ನೂರಾರು ಎಕರೆ ಭೂಮಿ ಎತ್ತಿನಹೊಳೆ ಯೋಜನೆಗೆ ಆಹುತಿಯಾಗಿದೆ. ಅದೇ ರೀತಿ, ಪೈಪ್‌ಲೈನ್‌ ಹಾದು ಹೋಗುವ ಹಾಗೂ ನೀರಿನ ಪಂಪ್‌ಹೌಸ್‌ ನಿರ್ಮಾಣಗೊಳ್ಳುತ್ತಿರುವ ಸಕಲೇಶಪುರ ತಾಲೂಕು ಒಂದರಲ್ಲೇ ಸಾವಿರಾರು ಎಕರೆ ಕೃಷಿಭೂಮಿ ನಾಶವಾಗುತ್ತಿದೆ. ಹಾಗಾದರೆ, ಈ ಎತ್ತಿನಹೊಳೆ ನೀರನ್ನು ಸಕಲೇಶಪುರದ ದೊಡ್ಡನಗರ ಎಂಬ ಗ್ರಾಮದಿಂದ ಬಯಲು ಸೀಮೆ ವರೆಗೆ 274 ಕಿ. ಮೀ. ದೂರಕ್ಕೆ ಕಾಲುವೆ ನಿರ್ಮಿಸಲು ಇನ್ನೆಷ್ಟು ಸಾವಿರ ರೈತರ ಜಮೀನು ಬೇಕಾಗುತ್ತದೆ. ಅಷ್ಟೇ ಆಗಿದ್ದರೆ, ಪರವಾಗಿಲ್ಲ, ಎತ್ತಿನಹೊಳೆ ಹರಿಯ
ಬಹುದಾದ 24 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೂ ಬಯಲು ಸೀಮೆಯಲ್ಲಿಯೂ ಸಾವಿರಾರು ಎಕರೆ ಜಮೀನಿನ ಅಗತ್ಯವಿದೆ. ಹಾಗಾದರೆ, ಎತ್ತಿನಹೊಳೆ ಯೋಜನೆಗೆ ಮುಳುಗಡೆಯಾಗುವ ಅಥವಾ ಸ್ವಾಧೀನಪಡಿಸಬೇಕಾದ ಒಟ್ಟು ಎಷ್ಟು ಸಾವಿರ ಭೂಮಿ ಬೇಕು. ಇದರಿಂದ ಮನೆ-ಮಠ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸುವುದು ಎಲ್ಲಿ ಹಾಗೂ ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡಬೇಕಾಗುವ ಪರಿಹಾರ ಮೊತ್ತ ಎಷ್ಟು? ಇದೆಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಇನ್ನೆಷ್ಟು ವರ್ಷಗಳು ಬೇಕು? ಅದೆಲ್ಲಕ್ಕಿಂತ ಮುಖ್ಯವಾಗಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿಗೆ ಖರ್ಚು ಆಗುವ ಒಟ್ಟು ಯೋಜನಾ ವೆಚ್ಚ ಎಷ್ಟು? ಸರಕಾರದ ಬಳಿ ಇಲ್ಲಿನ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಬದಲಿಗೆ, ಎತ್ತಿನಹೊಳೆ ಡ್ಯಾಂ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಒಂದು ವರ್ಷದೊಳಗೆ ಬಯಲು ಸೀಮೆಗೆ ನೀರು ಪೂರೈಸುವುದಾಗಿ ಬಯಲು ಸೀಮೆ ಜನರನ್ನು ನಂಬಿಸುತ್ತಿರುವುದು ದುರಂತ. 

ನದಿಯ ಮೇಲೆ ನದಿ…!
ನೈಸರ್ಗಿಕವಾಗಿ ಹರಿಯುವ ನದಿಯ ಮೇಲೆ ಮತ್ತೂಂದು ನದಿ ದಾಟಿಸಿದ ನಿದರ್ಶನ ಎಲ್ಲಾದರೂ ಇರಬಹುದೇ? ಹಾಗಾದರೆ, ಇಂಥದೊಂದು ವಿನೂತನ ಪ್ರಯತ್ನ ಇದೀಗ ಎತ್ತಿನಹೊಳೆ ನೀರಾವರಿ ಯೋಜನೆಯಡಿ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿದೆ. ಕಾವೇರಿ ನದಿಯ ಮುಖ್ಯ ಉಪನದಿ ಹೇಮಾವತಿ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ
ಘಟ್ಟದ ಶ್ರೇಣಿಯಲ್ಲಿ ಉಗಮಿಸುತ್ತದೆ. ಬಳಿಕ ಸಕಲೇಶಪುರದ ಮೂಲಕ ಸಾಗುವ ಈ ನದಿಯ ಮೇಲೆಯೇ ನೇತ್ರಾವತಿಯ ಮೂಲವಾಗಿರುವ ಎತ್ತಿನಹೊಳೆ ನೀರು ಸರಬರಾಜು ಆಗಲಿದೆ. ಇದಕ್ಕಾಗಿ ಹೆಬ್ಬಸಾಲೆಯಲ್ಲಿ ಬೃಹತ್‌ ಸೇತುವೆ ನಿರ್ಮಾಣ ಭರದಿಂದ ಸಾಗಿದ್ದು, ಹೇಮಾವತಿ ನದಿ ನೀರಿನ ಚಲನೆಯನ್ನು ಸ್ವಲ್ಪ ಮಟ್ಟಿಗೆ ತಿರುಗಿಸಲಾಗಿದೆ. ಇದಕ್ಕಾಗಿ ಬೃಹತ್‌ ಗಾತ್ರದ 4 ಕ್ರೇನ್‌ಗಳು ಹೇಮಾವತಿ ನದಿಯಲ್ಲಿ ಕೆಲಸ ನಡೆಸುತ್ತಿವೆ. ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದರ ಮೇಲೆ ನಾಲ್ಕು ಲೈನ್‌ನ ಬೃಹತ್‌ ಪೈಪ್‌ಗ್ಳು ಹಾದು ಹೋಗಲಿವೆ.

ಎತ್ತಿನಹೊಳೆಯಿಂದ ಬರುವ ನೀರು ಈ ನಾಲ್ಕು ಪೈಪ್‌ಗಳ ಮೂಲಕ ಹರಿದು ದೊಡ್ಡನಾಗರದಲ್ಲಿರುವ ಸಂಗ್ರಹ ಜಾಗಕ್ಕೆ ಹೋಗುತ್ತದೆ. ಅಲ್ಲಿ ನೀರಿನ ಸಂಗ್ರಹದ ದೊಡ್ಡ ತೊಟ್ಟಿಯ ಕೆಲಸವೂ ಪ್ರಗತಿಯಲ್ಲಿದೆ. 

7 ಜಿಲ್ಲೆ-527 ಕೆರೆ; 24 ಟಿಎಂಸಿ ನೀರು…!
ಎತ್ತಿನಹೊಳೆ ಯೋಜನೆಯ ಮೂಲಕ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಇರಿಸಲಾಗಿದೆ. ಹೇಸರಘಟ್ಟ ಹಾಗೂ ತಿಪ್ಪೆಗೊಂಡನಹಳ್ಳಿ ಜಲಾಶಯಗಳಿಗೆ ಕುಡಿಯುವ ನೀರಿನ ಕೊರತೆಯನ್ನು ಭಾಗಶಃ ಸರಿದೂಗಿಸುವುದು ಹಾಗೂ 527 ಕೆರೆಗಳಿಗೆ ಭಾಗಶಃ ತುಂಬಿಸಿ ಅವುಗಳ ಅಂತರ್ಜಲ ಅಭಿವೃದ್ಧಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ. 7 ಜಿಲ್ಲೆಗಳ 29 ತಾಲೂಕಿನ 6557 ಗ್ರಾಮಗಳಿಂದ ಸುಮಾರು 68.35 ಲಕ್ಷ ಜನರಿಗೆ ಕುಡಿಯುವ ನೀರಿಗಾಗಿ 15.029 ಟಿಎಂಸಿ, 527 ಕೆರೆಗಳನ್ನು ತುಂಬಿಸಲು 8.967 ಟಿಎಂಸಿ ಸೇರಿದಂತೆ 24 ಟಿಎಂಸಿ ನೀರು ಈ ಮೂಲಕ ಸಿಗಲಿದೆ ಎಂಬುದು ಸರಕಾರದ ಲೆಕ್ಕಾಚಾರ. ಆದರೆ ಎತ್ತಿನಹೊಳೆ ಯೋಜನೆಯಿಂದ ಅಧಿಕೃತವಾಗಿ ಎಷ್ಟು ನೀರು ಸಿಗಲಿದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕು.

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.