ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ


Team Udayavani, Oct 24, 2021, 6:10 AM IST

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ಬೆಳ್ತಂಗಡಿ: ತಾಲೂಕು ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಗಿ ಹಾದು ಹೋಗುವ ಬಹುಕಾಲದ ಬೇಡಿಕೆಯ ದಿಡುಪೆ-ಎಳನೀರು-ಸಂಸೆ ರಸ್ತೆ ನಿರ್ಮಾಣಕ್ಕೆ ಸರ್ವೇ ಕಾರ್ಯ ನಡೆಯುತ್ತಿದ್ದು, ಬಹುತೇಕ ಮುಕ್ತಾಯದ ಹಂತದಲ್ಲಿದೆ.

ಅನೇಕ ವರ್ಷಗಳ ಹೋರಾಟದ ಫಲವಾಗಿ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗವು ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯ ಪಾಲಕ ಅಭಿಯಂತರಿಗೆ ಸರ್ವೇ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದು, ವನ್ಯಜೀವಿ ಮೀಸಲು ಅರಣ್ಯಕ್ಕೊಳಪಟ್ಟಿರುವ 6 ಕಿ.ಮೀ. ಮತ್ತು ಕಂದಾಯ ಇಲಾಖೆಗೆ ಒಳಪಟ್ಟಿರುವ 9 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೇ ನಡೆಯುತ್ತಿದೆ.

ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ರಸ್ತೆ
ಬ್ರಿಟಿಷ್‌ ಸರಕಾರ 1939ರಲ್ಲಿ ನಡೆಸಿದ್ದ ಅರಣ್ಯ ಸರ್ವೇಯಂತೆ ಜನ – ಜಾನುವಾರುಗಳ ಕಾಲ್ನಡಿಗೆಗೆಂದು ಕಾಲು ದಾರಿಯನ್ನಷ್ಟೇ ಕಲ್ಪಿಸಿತ್ತು. ಅದರಂತೆ 6 ಕಿ.ಮೀ. ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಸರ್ವಋತು ಕಾಂಕ್ರೀಟ್‌ ಅಥವಾ ಡಾಮರು ರಸ್ತೆ, ಉಳಿದ 9 ಕಿ.ಮೀ.ಯಲ್ಲಿ 12 ಅಡಿ ಅಗಲದ ರಸ್ತೆ ನಿರ್ಮಿಸುವಂತೆ ಯೋಜನೆ ರೂಪಿಸಲಾಗಿದೆ.

ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ಮುಕ್ತಾಯ ಹಂತದಲ್ಲಿದೆ. ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು.

ಇದನ್ನೂ ಓದಿ:ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಜೀವಮಾನದ ಸಂಪರ್ಕ ರಸ್ತೆ
ದಿಡುಪೆ-ಸಂಸೆ ರಸ್ತೆಯಾದಲ್ಲಿ ಪರ್ಯಾಯ ರಸ್ತೆಯ ಜತೆಗೆ ಅತೀ ಕಡಿಮೆ ಅಂದಾಜು 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶ ಕ್ರಮಿಸುವ ಅಂತರ ವಾಗಲಿದೆ. ನೂತನ ರಸ್ತೆಗೆ ಯಾವುದೇ ದೊಡ್ಡ ಸೇತುವೆಗಳ ಆವಶ್ಯಕತೆಯಿಲ್ಲ. ಕಾಂಕ್ರೀಟ್‌ ಮೋರಿಗಳಷ್ಟೇ ಸಾಕು. ರಸ್ತೆ ನಿರ್ಮಾಣ ವಾದಲ್ಲಿ ರಾಷ್ಟ್ರೀಯ ಹೆದ್ದಾರಿ-73 ಚಾರ್ಮಾಡಿ ಘಾಟಿ ರಸ್ತೆಗೆ ಪರ್ಯಾಯವಾಗಲಿದೆ. ಅಷ್ಟೇ ಅಲ್ಲದೆ 500ಕ್ಕೂ ಅಧಿಕ ಜನಸಂಖ್ಯೆ ಯಿರುವ ಎಳನೀರು ಪ್ರದೇಶದ ಜನರಿಗೆ ಆರೋಗ್ಯ, ಶಿಕ್ಷಣ ಇತ್ಯಾದಿಗಾಗಿ ತಾಲೂಕು ಕೇಂದ್ರ ನಿಕಟವಾಗಲಿದೆ. ಜತೆಗೆ ಅದು ಅಲ್ಲಿನ ಜನತೆಗೆ ಜೀವಮಾನದ ಸಂಪರ್ಕ ರಸ್ತೆಯಾಗಲಿದೆ.

ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ಮುಕ್ತಾಯ ಹಂತದಲ್ಲಿದೆ. ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು..
– ಶಿವಪ್ರಸಾದ್‌ ಅಜಿಲ,
ಸಹಾಯಕ ಕಾರ್ಯಪಾಲಕ ಅಭಿಯಂತ,
ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ

ಟಾಪ್ ನ್ಯೂಸ್

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

3

Bantwal: ಬಿ.ಸಿ.ರೋಡ್‌ನ‌ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ

2

Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್‌ ಪ್ಲ್ಯಾನ್‌

1

Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.