ವ್ಯವಸ್ಥೆಯ ಕೊರತೆಯಿಂದ ನೀರಿನ ಸಮಸ್ಯೆ
Team Udayavani, Mar 20, 2018, 7:11 PM IST
ಬಜಪೆ: ಇಲ್ಲಿನ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನ ಮಸೀದಿಯ ಹಿಂಬದಿಯ ಪ್ರದೇಶದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಕೆಲವು ಮನೆಗಳಿಗೆ ನೀರು ತರಿಸಲಾಗಿತ್ತು. ಈ ಬಾರಿಯೂ ಕೆಲವರು ನೀರಿಲ್ಲ ಎಂದು ದೂರಿದ್ದಾರೆ. ಈ ವಾರ್ಡ್‌ನಲ್ಲಿ 6 ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ರೋಜಿ ಮಥಾಯಸ್, ಜಾಕೋಬ್ ಪಿರೇರಾ, ಶಾಹಿನ್, ಮನ್ಸೂರ್ ಅಲಿ, ಸಹನಾಝ್, ಸಿರಾಜ್ ಹುಸೇನ್.
ವಾರ್ಡ್ ಪ್ರದೇಶದ ಹೆಸರು
ಪೊಲೀಸ್ ಸ್ಟೇಶನ್, ಪೊಲೀಸ್ ಕ್ವಾರ್ಟಸ್, ಮೆನೇಜಸ್ ಕಾಂಪೌಂಡ್, ಹಳೆ ಕಾನ್ವೆಂಟ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಮಸೀದಿ ಬಳಿ, ಪಿ.ಎಚ್.ಉಮರ್ ರಸ್ತೆ, ಮಡೆಂಜಿ ಪಳ್ಳ, ಜರಿನಗರ, ತಾರಿಕಂಬ್ಲ.
ಎರಡನೇ ವಾರ್ಡ್
ಮಾರ್ನಿಂಗ್ ಸ್ಟಾರ್ ಶಾಲೆ ಬಳಿ, ಮುರನಗರ ರೇಗೋ ಗಾರ್ಡ್‌ನ್ ಬಳಿ, ತಾರಿಕಂಬ್ಲ ಬಳಿ 50ಸಾವಿರ ಲೀಟರ್ ಸಾಮರ್ಥ್ಯದ ಒಟ್ಟು 3 ಒವರ್‌ಹೆಡ್ ಟ್ಯಾಂಕ್ ಈ ವಾರ್ಡ್‌ನಲ್ಲಿದೆ. ತಾರಿಕಂಬ್ಲದಲ್ಲಿ ಒಂದು ಕೈ ಪಂಪಿನ ಕೊಳವೆ ಬಾವಿ ಉಪಯೋಗದಲ್ಲಿದೆ. ಈ ವಾರ್ಡ್‌ನಲ್ಲಿ ಪೊಲೀಸ್ ಠಾಣೆ, ಪ್ರಾಥಮಿಕ ಶಾಲೆ, ಮಸೀದಿ, ಮೆಸ್ಕಾಂ ಕಚೇರಿ, ಅಂಗನವಾಡಿ ಕೇಂದ್ರಗಳಿವೆ.
ಪೈಪು ಲೈನ್‌ಗಳು ಇರುವ ಪ್ರದೇಶ
14ನೇಹಣಕಾಸು ಯೋಜನೆಯಡಿ ಯಲ್ಲಿ 69,933 ರೂ. ಅನುದಾನದಲ್ಲಿ ಮೆನೇಜಸ್ ಕಂಪೌಂಡಿನಿಂದ ಹೊಸ ಪೈಪ್‌ಲೈನ್ ವಿಸ್ತರಣೆ ಕಾಮಗಾರಿ ಈ ಬಾರಿ ನಡೆದಿದೆ. ಪೊಲೀಸ್ ಸ್ಟೇಶನ್ ನಿಂದ ಚರ್ಚ್ ಜಂಕ್ಷನ್, ಬಜಪೆ ಪೇಟೆಯಿಂದ ಮಸೀದಿಯಾಗಿ ಮಾರ್ನಿಂಗ್ ಸ್ಟಾರ್ ಶಾಲೆಯವರೆಗೆ ಹಾದು ಹೋಗುತ್ತದೆ. ಶಾಲೆಯಿಂದ ಮುರ ಕ್ರಾಸ್, ಮುರ ಕ್ರಾಸ್‌ನಿಂದ ಹಳೆ ಕಾನ್ವೆಂಟ್ ರಸ್ತೆ ಮನೆಗಳಿಗೆ, ಮನೇಜಸ್ ಕಾಂಪೌಂಡ್, ಪಿ.ಎಚ್.ಉಮರ್‌ರಸ್ತೆ, ಮಡೆಂಜಿ ಪಲ್ಲ, ಜರಿನಗರ, ಮೆಸ್ಕಾಂ ಕಚೇರಿ ಹಿಂದುಗಡೆ, ತಾರಿಕಂಬ್ಲ ಪ್ರದೇಶಗಳಲ್ಲಿ ಪಂಚಾಯತ್‌ನ ನೀರಿನ ಪೈಪುಗಳು ಹಾದು ಹೋಗಿವೆ.
ಮಸೀದಿ ಬಳಿ ನೀರಿನ ಸಮಸ್ಯೆ
ವಾರ್ಡ್‌ನ ಮಸೀದಿಯ ಬಳಿ ಸಮಿತಿಯಿಂದ ನೀರು ಸರಬರಾಜಿನ ವ್ಯವಸ್ಥೆಯ ನಿರ್ವಹಣೆ ನೋಡಿಕೊಳ್ಳಲಾಗುತ್ತಿದ್ದು, ನೀರಿನ ಅಭಾವ ಕಂಡು ಬಂದಿದೆ. ಈ ಪ್ರದೇಶದಲ್ಲಿ 26ಮನೆಗಳಿವೆ. ಕೆಲವರು ನೀರಿನ ಮೊತ್ತವನ್ನು ಬಾಕಿ ಇರಿಸಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯತ್ ತಿಳಿಸಿದೆ.
ಟ್ಯಾಂಕ್ ನೀರು ಪೋಲು
ಕೆಲವೆಡೆ ನೀರು ಟ್ಯಾಂಕಿನಲ್ಲಿ ತುಂಬಿ ಹರಿದು ಹೋಗಿ ಪೋಲಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಕೆಲವರು ಸಮಿತಿ ಬೇಕು ಎಂದರೆ ಇನ್ನು ಕೆಲವರು ಬೇಡ ಅನ್ನುತ್ತಿದ್ದಾರೆ. ಈ ಬಗ್ಗೆ ಪಂಚಾಯತ್ 2 ಬಾರಿ ಸಭೆ ಕರೆದಿದ್ದರೂ ಗೊಂದಲ ಮಾತ್ರ ಹಾಗೇ ಇದೆ.
ನೀರಿಗಾಗಿ ಪಂಚಾಯತ್ ಖರ್ಚು
ಈ ಬಾರಿ ಚೆಕ್ ಪೋಸ್ಟ್ ಬಳಿ ಕೊಳವೆಬಾವಿಗೆ ಹೊಸ ಪಂಪ್‌ಸೆಟ್ ಅಳವಡಿಸಲಾಗಿದೆ. ಒಟ್ಟು ವಾರ್ಡ್ ನಲ್ಲಿ ನೀರಿನ ವ್ಯವಸ್ಥೆಗಾಗಿ 80 ಸಾವಿರ ರೂ. ತನಕ ಪಂಚಾಯತ್ ಖರ್ಚು ಮಾಡಿದೆ. ಹಳೆ ಕಾನ್ವೆಂಟ್ ರಸ್ತೆ ಪ್ರದೇಶದಲ್ಲಿ ಸಮಿತಿಯ ವತಿಯಿಂದ ನೀರು ಸರಬರಾಜಿನ ನಿರ್ವಹಣೆ ನೋಡಿಕೊಳ್ಳಲಾಗಿತ್ತು. ಈಗ ಸಮಿತಿ ಅದನ್ನು
ಪಂಚಾಯತ್‌ಗೆ ಹಸ್ತಾಂತರಿಸಿದೆ.
ವ್ಯವಸ್ಥೆಯಲ್ಲಿ ಗೊಂದಲ
ಇಲ್ಲಿ ನೀರಿನ ಸಮಸ್ಯೆ ಇಲ್ಲ. ಒಟ್ಟು ವ್ಯವಸ್ಥೆಯ ಬಗ್ಗೆ ಗೊಂದಲ ಇದೆ. ಮಳವೂರು ವೆಂಟೆಡ್ ಡ್ಯಾಂ ನೀರು ಸಮರ್ಪಕವಾಗಿ ಬರುತ್ತಿಲ್ಲ ಇದರಿಂದ ಕೊಳವೆ ಬಾವಿಯ ನೀರನ್ನು ಹೆಚ್ಚಾಗಿ ಬಳಸಲಾಗುತ್ತದೆ.
– ರೋಜಿ ಮಥಾಯಸ್, ಗ್ರಾ.ಪಂ. ಅಧ್ಯಕ್ಷರು
ಕೊಳವೆ ಬಾವಿ ನೀರು
ಈಗಾ ದಿನಲೂ ಕೊಳವೆ ಬಾವಿ ಮೂಲಕ ನೀರು ಸರಬರಾಜು ಆಗುತ್ತಿದೆ. ಕಳೆದ ಬಾರಿ ಎಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಇತ್ತು. ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿತ್ತು. ಬೇಸಗೆ ಬಂದಾಗ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಇಲ್ಲಿಗೆ ಮರವೂರು ವೆಂಟಡ್ ಡ್ಯಾಂ ನೀರು ಸರಬರಾಜು ಆದರೆ ಉತ್ತಮ.
– ಅಬ್ದುಲ್ ಅಜೀಜ್, ಸ್ಥಳೀಯರು
ಬೇಸಗೆಯ ಆರಂಭದಲ್ಲಿದ್ದೇವೆ. ಆದರೆ ಈಗಲೇ ಅದರ ತಾಪ ಏರತೊಡಗಿದೆ. ಹಲವು ಊರುಗಳಲ್ಲಿ ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ. ಮಂಗಳೂರು ಗ್ರಾಮೀಣ ಭಾಗದ ಹಲವು ಪ್ರದೇಶಗಳ ಲೇಖನಗಳು ಮೂಡಿಬರಲಿವೆ. ನಿಮ್ಮ ಭಾಗದಲ್ಲೂ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು. ವಾಟ್ಸಪ್ ನಂಬರ್ 7618774529
— ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.