ಡಾಮರು, ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ
Team Udayavani, Feb 14, 2018, 1:36 PM IST
ಮೂಲ್ಕಿ : ದೇಶದ ಜನರ ಹಿತಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ನಮ್ಮ ಜನರು ಬ್ರಿಟಿಷರ ಕಪಿ ಮುಷ್ಟಿಯಿಂದ
ಹೊರಬರಬೇಕು, ಸ್ವತಂತ್ರವಾಗಿ ತಮ್ಮ ಬದುಕು ನಡೆಸಬೇಕು ಎಂಬ ಕಾಳಜಿಯಿಂದ ಉಪ್ಪಿಕಳ ರಾಮರಾವ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಿ ಬ್ರಿಟಿಷರಿಂದ ಕಷ್ಟವನ್ನು ಅನುಭವಿಸಿರುವ ಫಲವಾಗಿ ನಾವು ಇಂದು ಸುಖವಾಗಿ ಬಾಳುವಂತಾಗಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ರಾಜ್ಯದ ಮೀನುಗಾರಿಕೆ ಇಲಾಖೆಯ 1.53 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಲಿರುವ ಸ್ವಾತಂತ್ರ್ಯ ಹೋರಾಟಗಾರ ಕಕ್ವ ಉಪ್ಪಿಕಳ ರಾಮರಾವ್ ರಸ್ತೆಗೆ ಡಾಮರೀಕರಣ ಮತ್ತು ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಸಚಿವನಾಗಿ ನಾನು ನನ್ನ ಕ್ಷೇತ್ರದ ಜನತೆಯ ಕ್ಷೇಮವನ್ನು ಬಯಸುವಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮೀನುಗಾರಿಕಾ ಮಂತ್ರಿಯಾಗಿದ್ದಾಗ ಮೂಲ್ಕಿಯ ನದಿ ಮತ್ತು ಸಮುದ್ರ ಕಿನಾರೆಯ ಜನರ ಉಪಯೋಗಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸುವಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೊಟ್ಟಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಇಲಾಖೆಯಿಂದ ಯೋಜನೆಗೆ ಹಣ ಬಿಡುಗಡೆಯಾಗಿದೆ. ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಇನ್ನು ಇಲ್ಲಿಯ ಕಾಮಗಾರಿಯ ಗುಣಮಟ್ಟದಲ್ಲಿ ಗುತ್ತಿಗೆದಾರರು ಯಾವುದೇ ರಾಜಿ ಮಾಡಿಕೊಳ್ಳಬಾರದು. ಅಗತ್ಯ ಬಿದ್ದರೆ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತರುವಂತೆ ತಿಳಿಸಿದರು.
ಅತಿಕಾರಿ ಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ ವಸಂತ್, ಉಪಾಧ್ಯಕ್ಷ ದೆಪ್ಪುಣಿ ಗುತ್ತು ಕಿಶೋರ್ ಶೆಟ್ಟಿ, ಮಾಜಿ ಸದಸ್ಯರಾದ ದೊಂಬ ಕೋಟ್ಯಾನ್, ಸಂಜೀವ ಕೋಟ್ಯಾನ್, ಎಂಜಿನಿಯರ್ ಪ್ರಜ್ವಲ್, ಜಿಲ್ಲಾ ಯುವ ಕಾಂಗ್ರೆಸ್‌ಅಧ್ಯಕ್ಷ
ಮಿಥುನ್ ರೈ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಮೂಡಾ ಸದಸ್ಯ ಎಚ್. ವಸಂತ್
ಬೆರ್ನಾಡ್, ಸ್ಥಳೀಯರಾದ ಬರ್ಕೆ ತೋಟ ಗಂಗಾಧರ ಶೆಟ್ಟಿ, ದಯಾನಂದ ಕೋಟ್ಯಾನ್‌ಮಟ್ಟು, ಅಬ್ದುಲ್ ಅಜೀಜ್,
ಮೂಲ್ಕಿ ನ.ಪಂ. ಸದಸ್ಯರಾದ ಬಿ.ಎಂ. ಆಸೀಫ್, ಪುತ್ತು ಬಾವಾ, ಬಶೀರ್ ಕುಳಾಯಿ, ಇತರ ಮುಖಂಡರಾದ
ಉತ್ತಮ್, ಧರ್ಮಾನಂದ, ರಾಜೇಶ್ ಭಟ್, ಕುಟ್ಟಿ ಪಂಬದ, ಕೆ.ಎನ್. ಕೋಟ್ಯಾನ್, ಸಮೀರ್ ಎ.ಎಚ್., ದೇವಪ್ರಸಾದ್ ಕೆಂಪು ಗುಡ್ಡೆ, ಜನಾರ್ದನ್ ಬಂಗೇರ, ವಸಂತ ಸುವರ್ಣ, ಪುಷ್ಪರಾಜ, ಅಣ್ಣು ಕೋಟ್ಯಾನ್ ಮೊಲೊಟ್ಟು ಮತ್ತು ಕಕ್ವ ಕೋಡªಬ್ಬು ದೈವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪಂ. ಸದಸ್ಯ ಮನೋಹರ್ ಕೋಟ್ಯಾನ್ ಸ್ವಾಗತಿಸಿ, ಧನಂಜಯ ಕೋಟ್ಯಾನ್ ಮಟ್ಟು ವಂದಿಸಿದರು.
ಕಾಮಗಾರಿಗೆ ಚಾಲನೆ
ಸ್ವಾತಂತ್ರ್ಯ ಹೋರಾಟಗಾರ ಉಪ್ಪಿಕಳ ರಾಮರಾವ್ ಅವರ ಪುತ್ರ ರವಿರಾಜ್ ಭಟ್ ಅವರು ತೆಂಗಿನ ಕಾಯಿಯನ್ನು
ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.