ಖಾಕಿ ಧರಿಸಿ ಸಮುದ್ರ ತೀರದಲ್ಲಿ ಕರ್ತವ್ಯ
Team Udayavani, Jun 15, 2019, 5:00 AM IST
ಮಹಾನಗರ: ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡುವುದರೊಂದಿಗೆ ಜೀವರಕ್ಷಣೆಗಾಗಿ ಜಿಲ್ಲೆಯ 60 ಮಂದಿ ಗೃಹ ರಕ್ಷಕರು ಕಾರ್ಯೋನ್ಮುಖರಾಗಿದ್ದಾರೆ. ಸಮುದ್ರ ತೀರ ಪ್ರದೇಶಗಳಲ್ಲಿ “ಲಾಠಿಯೊಂದಿಗೆ ಖಾಕಿ’ ಹೆಸರಿನಲ್ಲಿ 24 ಮಂದಿ ಗೃಹ ರಕ್ಷ ಕರು ಜೀವರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ದೂರದೂರುಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಮುದ್ರದಲ್ಲಿನ ಅಪಾಯದ ಮುನ್ಸೂಚನೆ ಇರುವುದಿಲ್ಲ. ಕೆಲವೊಮ್ಮೆ ಸಮುದ್ರ ನೀರು ನೋಡಿದಾಗ ಈಜಾ ಡಲು ಇಳಿದು ಜೀವಕ್ಕೇ ಕುತ್ತು ತಂದುಕೊಳ್ಳುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತದೆ. ಈಗಾಗಲೇ ಕಡಲಬ್ಬರವೂ ಜಾಸ್ತಿಯಾಗಿದ್ದು, ಯಾವುದೇ ದುರ್ಘಟನೆಗಳು ನಡೆಯ ದಂತೆ ತಡೆಯಲು ಪ್ರವಾಸಿಗರಿಗೆ ಸೂಕ್ತ ಎಚ್ಚರಿಕೆ ನೀಡಲು 25 ಮಂದಿ ಗೃಹರಕ್ಷಕರನ್ನು ಎಂಟು ಬೀಚ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದರಂತೆ ಪಣಂಬೂರು, ತಣ್ಣೀರು ಬಾವಿ, ಫಾತಿಮಾ ಬೀಚ್, ಸೋಮೆಶ್ವರ, ಉಳ್ಳಾಲ, ಸುರ ತ್ಕಲ್‌ನ ಎರಡು ಬೀಚ್, ಸಸಿ ಹಿತ್ಲು ಬೀಚ್‌ಗಳಲ್ಲಿ ಬೀಚ್‌ಗೆ ತಲಾ ಮೂವರಂತೆ ಒಟ್ಟು 24 ಮಂದಿ ಗೃಹ ರಕ್ಷಕರು ಜೂನ್ 1ರಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಅಗಸ್ಟ್ 31ರ ವರೆಗೆ ಬೀಚ್ ಗಾರ್ಡ್‌ಗಳಾಗಿ ಕೆಲಸ ಮಾಡಲಿದ್ದಾರೆ.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಸಲಹೆ ಮೇರೆಗೆ ಗೃಹ ರಕ್ಷಕರು ಜೀವರಕ್ಷಕರಾಗಿ ಕೆಲಸ ಮಾಡುತ್ತಿ ದ್ದಾರೆ. ಜಿಲ್ಲಾಡಳಿತದಿಂದ ಟೆಂಟ್, ಮೈಕ್ ವ್ಯವಸ್ಥೆ, ರೈನ್ ಕೋಟ್, ಚಯರ್ ಮತ್ತು ಬೋಟ್‌ಗಳನ್ನು ಗೃಹರಕ್ಷಕರಿಗೆ ನೀಡಲಾಗುತ್ತದೆ.
ಕಳೆದ ವರ್ಷದ ಮಹಾಮಳೆಗೆ ಜೋಡುಪಾಲದಲ್ಲಿ ಸಂಭವಿಸಿದ ದುರಂತ ಇನ್ನೂ ಮರೆಯಾಗಿಲ್ಲ. ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಗೃಹ ರಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಜೋಡುಪಾಲ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಸ್ನಾನಘಟ್ಟ, ಕಡಬ, ಬಂಟ್ವಾಳ, ಬೆಳ್ತಂಗಡಿ ಯಲ್ಲಿ ಒಟ್ಟು 25 ಮಂದಿ ಗೃಹರಕ್ಷಕರನ್ನು ನಿಯೋಜಿಸಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಆಗಮಿಸಿದ ಎನ್‌ಡಿಆರ್‌ಎಫ್ ತಂಡದೊಂದಿಗೆ ಓರ್ವ ಗೃಹ ರಕ್ಷಕನನ್ನು ನಿಯೋಜಿಸಲಾಗಿದೆ. ಹತ್ತು ಮಂದಿ ಮೇರಿಹಿಲ್ ಗೃಹರಕ್ಷಕ ದಳ ಕಚೇರಿಯಲ್ಲಿಯೇ ಸೇವಾನಿರತ ರಾಗಿದ್ದು, ನಗರದಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ತುರ್ತು ಪರಿ ಸ್ಥಿತಿ ಯಿಂದ ಜನರನ್ನು ರಕ್ಷಿಸಲು ಸಿದ್ಧರಾಗಿದ್ದಾರೆ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ್ ಚೂಂತಾರು ತಿಳಿಸಿದ್ದಾರೆ.
ಫಲಕ ಅಳವಡಿಕೆ
ಗೃಹರಕ್ಷಕರು ಕಾರ್ಯನಿರ್ವ ಹಿಸುತ್ತಿ ರುವ ಎಲ್ಲ ಎಂಟು ಬೀಚ್‌ಗಳ ಬದಿಯಲ್ಲಿ “ಅಪಾಯ ವಲಯ; ಮುಂದೆ ಹೋಗ ಬೇಡಿ’ ಎಂಬ ಫಲಕಗಳನ್ನು ಈಗಗಾಲೇ ಅಳವಡಿ ಸಲಾಗಿದೆ. ಖಾಕಿ ಧರಿಸಿ ಲಾಠಿ ಹಿಡಿದು ಇಲ್ಲಿ ಗೃಹರಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಗೃಹರಕ್ಷಕರಿಗೆ ಈ ಹೊಣೆಗಾರಿಕೆ ಕಳೆದ ವರ್ಷದಿಂದ ಆರಂಭವಾಗಿದ್ದು, ಕಳೆದ ವರ್ಷ ಬೀಚ್‌ಗೆ ತಲಾ ಇಬ್ಬರಂತೆ 16 ಮಂದಿ ಗೃಹರಕ್ಷಕರು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಯಾವುದೇ ದುರ್ಘಟನೆ ಹಿಂದಿನ ಮಳೆಗಾಲದ ವೇಳೆ ನಡೆದಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.