ನಿಷೇಧಿತ ಇ- ಸಿಗರೇಟ್ ಹತ್ತಿಕ್ಕುವವರಿಲ್ಲ ! ಗ್ರಾಮೀಣ ಪ್ರದೇಶದಲ್ಲೂ ಮಾರಾಟ ಅವ್ಯಾಹತ!
Team Udayavani, Mar 29, 2023, 7:40 AM IST
ಇ- ಸಿಗರೇಟ್ ಅಪಾಯಕಾರಿ ಮಾದಕ ವಸ್ತುಗಳ ಜಗತ್ತಿಗೆ ಕರೆದೊಯ್ಯುವಂಥದ್ದು. ಮಂಗಳೂರು ನಗರ ಸೇರಿದಂತೆ ಹಲವೆಡೆ ಇವುಗಳ ಅವ್ಯಾಹತವಾಗಿ ಮಾರಾಟವಾಗುತ್ತಿದೆ. ಇದು ನಿಷೇಧಿತ ವಸ್ತುವಾಗಿದ್ದರೂ ಯುವಜನರಿಗೆ ಲಭ್ಯವಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.
ಮಂಗಳೂರು: ಡ್ರಗ್ಸ್ ಚಟಕ್ಕೆ ಬೀಳಿಸುವ ಇ-ಸಿಗರೇಟ್ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಸೇರಿದ್ದರೂ ಜಿಲ್ಲೆಯಲ್ಲಿ ಯುವಜನರ ಕೈಗೆ ನಿರಾಂತಕವಾಗಿ ಲಭ್ಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಉಪ್ಪಿನಂಗಡಿಯ ಅಂಗಡಿಯೊಂದರಲ್ಲಿ ಪೊಲೀಸರಿಗೆ ನಿಷೇಧಿತ ಇ- ಸಿಗರೇಟುಗಳು ಸಿಕ್ಕಿದ್ದು ಸದ್ಯ ಕಳವಳಕ್ಕೆ ಕಾರಣ.
ದ.ಕ. ಜಿಲ್ಲಾ ಪೊಲೀಸ್ ಘಟಕದ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನದ ಅಂಗವಾಗಿ ಶಾಲಾ, ಕಾಲೇಜುಗಳ ಸುತ್ತ ಇರುವ ಗೂಡಂಗಡಿ, ಹೊಟೇಲ್‌ಗಳು, ಕಿರಾಣಿ ಅಂಗಡಿ ಸೇರಿದಂತೆ ಹಲವು ಅಂಗಡಿ ಮುಂಗಟ್ಟುಗಳಿಗೆ ಪೊಲೀಸರು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಈ ಸಂದರ್ಭ ಉಪ್ಪಿನಂಗಡಿಯ ಮೊಬೈಲ್ ಅಂಗಡಿಯೊಂದರಲ್ಲಿ 52 ನಿಷೇಧಿತ ಇ- ಸಿಗರೇಟ್‌ಗಳು ಸಿಕ್ಕಿದ್ದವು. ಕೋಟಾ³ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಂಗಡಿ ಮಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು.
ಆಗ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇ ಸಿಗರೇಟ್ ಮಾರಾಟವಾಗುತ್ತಿರುವುದರ ಹಿಂದಿನ ಹಿನ್ನೆಲೆ ಬೆಳಕಿಗೆ ಬಂದಿತು.
2019ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರವು ಆರೋಗ್ಯದ ದೃಷ್ಟಿಯಿಂದ ಇ- ಸಿಗರೇಟ್ ನಿಷೇಧಿಸಿತ್ತು. ಸಾಮಾನ್ಯವಾಗಿ ಸಿಗರೇಟ್‌ಗಳು ಉರಿಯುವಾಗ ಹೊಗೆ ಬಿಡುತ್ತವೆ. ಆದರೆ ಇ-ಸಿಗರೇಟ್ ಹಾಗಲ್ಲ. ಇದು ಸಿಗರೇಟ್ ಒಳಗಿನ ಬ್ಯಾಟರಿಗೆ ಅಳವಡಿಸಲಾದ ಕಾಯಿಲ್‌ನಿಂದ ಬೆಂಕಿ ಹತ್ತಿಕೊಂಡು ದ್ರವ ರೂಪದಲ್ಲಿರುವ ನಿಕೋಟಿನ್ ಹೊಗೆಯ ರೂಪದಲ್ಲಿ ಹೊರಸೂಸತೊಡಗುತ್ತದೆ. ಇದು ಸಾಮಾನ್ಯ ಸಿಗರೇಟ್‌ನ ಹೊಗೆಗಿಂತ ಶೇ. 20ರಷ್ಟು ಹೆಚ್ಚು ದಟ್ಟವಾಗಿರುತ್ತದೆ. ವಿಶೇಷವೆಂದರೆ, ಸಿಗರೇಟ್ ಸ್ವಾಭಾವಿಕ ತಂಬಾಕಿನ ವಾಸನೆಯನ್ನು ಹೊಂದಿದ್ದರೆ, ಇ- ಸಿಗರೇಟ್ ನಾನಾ ರೀತಿಯ ಸುಗಂಧ ದ್ರವ್ಯಗಳ ಪರಿಮಳದಲ್ಲಿ (ಚಾಕೋಲೆಟ್, ವೆನಿಲ್ಲಾ, ಸ್ಟ್ರಾಬೆರಿ ಇತ್ಯಾದಿ) ಲಭ್ಯ. ಆದರೆ ಈ ನಿಕೋಟಿನ್ ಸಾಮಾನ್ಯ ಸಿಗರೇಟ್‌ಗಿಂತಲೂ ವೇಗವಾಗಿ ವ್ಯಸನಿಯನ್ನಾಗಿಸುತ್ತದೆ.
ಯುವಜನರನ್ನು ಅತಿಯಾಗಿ ಆಕರ್ಷಿಸುವ ಇ- ಸಿಗರೇಟ್ ವ್ಯಸನ ಇತರ ಅಪಾಯಕಾರಿ ನಿಷೇಧಿತ ಮಾದಕ ವಸ್ತುಗಳತ್ತ ಕೊಂಡೊಯ್ಯುತ್ತದೆ. ಇದೇ ಇ- ಸಿಗರೇಟ್ ನಿಷೇಧಕ್ಕೆ ಪ್ರಮುಖ ಕಾರಣ ಎನ್ನುವುದು ತಜ್ಞರ ಅಭಿಪ್ರಾಯ.
ದುಬಾರಿ ಬೆಲೆಯಲ್ಲಿ ಮಾರಾಟವಾಗುವ ಇ- ಸಿಗರೇಟ್, ನಗರ ಪ್ರದೇಶದಲ್ಲಿಯಂತೂ ಜನನಿಬಿಡ, ಆಯಕಟ್ಟಿನ ಪ್ರದೇಶಗಳ ಅಂಗಡಿ ಮುಂಗಟ್ಟುಗಳಲ್ಲೇ ಎಗ್ಗಿಲ್ಲದೆ ಮಾರಾಟವಾಗುತ್ತದೆ. ಯುವ ಜನತೆಯೇ ಇದರ ಗ್ರಾಹಕರು. ಆದ ಕಾರಣ ಇಲಾಖೆಗಳು ಈ ಬಗ್ಗೆ ಕಟ್ಟನಿಟ್ಟಿನ ಕ್ರಮ ಕೈಗೊಂಡು ಡ್ರಗ್ಸ್ ವ್ಯಸನಕ್ಕೆ ತುತ್ತಾಗುವ ಯುವ ಸಮುದಾಯವನ್ನು ರಕ್ಷಿಸಬೇಕಿದೆ.
ದ.ಕ. ಪೊಲೀಸ್ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಮಾದಕ ದ್ರವ್ಯಗಳ ಸಾಗಣೆ-ಮಾರಾಟ ಜಾಲದ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ನಾಲ್ಕೈದು ದಿನಗಳ ಹಿಂದೆ ನಡೆದ ವಿಶೇಷ ದಾಳಿಯಲ್ಲಿ ಮೊಬೈಲ್ ಅಂಗಡಿಯೊಂದರಿಂದ 52 ಇ- ಸಿಗರೇಟ್‌ಗಳು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ವಹಿಸಲಾಗಿದೆ. ಇದಲ್ಲದೆ ಎರಡು ವಾರಗಳಿಂದೀಚೆಗೆ ಪೊಲೀಸರ ಕಾರ್ಯಾಚರಣೆಯ ಸಂದರ್ಭ 7 ಕೆಜಿ ಗಾಂಜಾ, ಸಿಂಥೆಟಿಕ್ ಡ್ರಗ್ ಆದ 75 ಗ್ರಾಂ ಎಂಡಿಎಂ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು.
– ಡಾ| ವಿಕ್ರಮ್ ಅಮಟೆ, ಪೊಲೀಸ್ ವರಿಷ್ಠಾಧಿಕಾರಿ, ದ.ಕ.
ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಇ- ಸಿಗರೇಟ್ ಮಾರಾಟದ ಬಗ್ಗೆಯೂ ಇಲಾಖೆಗೆ ಮಾಹಿತಿ ಬಂದಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ವಹಿಸಲಾಗುವುದು. ವಿಶೇಷ ಡ್ರೈವ್ ಬಗ್ಗೆಯೂ ಚಿಂತಿಸಲಾಗುವುದು.
– ಕುಲ್‌ದೀಪ್ ಕುಮಾರ್ ಜೈನ್, ಪೊಲೀಸ್ ಆಯುಕ್ತರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.