ಇ-ಕೆವೈಸಿ ಪ್ರಕ್ರಿಯೆ: ಜ.10ರಿಂದ ಪುನರಾರಂಭ
2.76 ಲಕ್ಷ ಕುಟುಂಬಗಳು ಬಯೋಮೆಟ್ರಿಕ್ ನೀಡಲು ಬಾಕಿ
Team Udayavani, Jan 8, 2020, 6:06 AM IST
ಮಹಾನಗರ: ಸರ್ವರ್ ಸಮಸ್ಯೆ ಹಾಗೂ ಹೆಚ್ಚುವರಿ ಸರ್ವರ್‌ಗಳ ಜೋಡಣೆ ಕಾರಣದಿಂದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆಯು ಜ. 10ರಂದು ಮಂಗಳೂರು ಸಹಿತ ದ.ಕ. ಜಿಲ್ಲಾದ್ಯಂತ ಪುನರಾರಂಭವಾಗಲಿದೆ.
ಪಡಿತರ ಚೀಟಿಗೆ ಆಧಾರ್ ಜೋಡಣೆ ಸಹಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣ ಗೊಳಿಸುವುದಕ್ಕೆ ಅರ್ಹ ಫಲಾ ನುಭವಿಗಳಿಗೆ ಈ ಹಿಂದೆ ಜ. 31ರ ಅಂತಿಮ ಗಡುವು ನೀಡಲಾಗಿತ್ತು. ಆದರೆ, ದ.ಕ. ಜಿಲ್ಲೆಯಲ್ಲಿ ಶೇ.60ಕ್ಕೂ ಹೆಚ್ಚು ಕುಟುಂಬ ಇನ್ನೂ ಇ-ಕೆವೈಸಿ ಮಾಡಲು ಬಾಕಿಯಿದೆ. ಅಲ್ಲದೆ, ಅಂತಿಮ ಗಡುವು ಸಮೀಪಿ ಸುತ್ತಿದ್ದಂತೆ ಇ-ಕೆವೈಸಿ ಪ್ರಕ್ರಿಯೆಗೆ ಫಲಾನುಭವಿಗಳ ಒತ್ತಡ ಜಾಸ್ತಿಯಾದ ಕಾರಣದಿಂದಲೂ ಸರ್ವರ್ ಸಮಸ್ಯೆ ಎದುರಾಗಿತ್ತು. ಈ ಎಲ್ಲ ಕಾರಣಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೆಚ್ಚುವರಿ ಸರ್ವರ್ ಜೋಡಣೆ ಕಾರಣ ನೀಡಿ ರಾಜ್ಯಾದ್ಯಂತ ಜ. 5ರಿಂದ 7ರ ವರೆಗೆ ಇ-ಕೆವೈಸಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಅಲ್ಲದೆ, ಈ ಇ-ಕೆವೈಸಿ ಪ್ರಕ್ರಿಯೆ ಗಡುವು ಅನ್ನು ಮಾ. 31ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ರಾಜ್ಯಾದ್ಯಂತ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಪಡಿತರ ಚೀಟಿ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಪಡಿತರ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್‌ಗೆ ಆಧಾರ್ ಜೋಡಿಸುವ ಇ- ಕೆವೈಸಿ ನಿಯಮವನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಾರಿಗೆ ತಂದಿತ್ತು. ವರ್ಷಗಳಿಂದೀಚೆಗೆ ಕಾರ್ಡ್ ಮಾಡಿಸಿ ಕೊಂಡ ವರನ್ನು ಹೊರತು ಪಡಿಸಿ, ಉಳಿದ ಎಲ್ಲ ಪಡಿತರ ಚೀಟಿದಾರರಿಗೆ ಬಯೋ ಮೆಟ್ರಿಕ್ ಮೂಲಕ ಇ- ಕೆವೈಸಿ ಪ್ರಕ್ರಿಯೆ ಮಾಡಲು ಇಲಾಖೆ ಜ. 31ರ ಗಡುವು ನೀಡಿತ್ತು. ಗಡುವು ಸಮೀಪಿ ಸುತ್ತಿರುವವರೆಗೂ ಬಯೋಮೆಟ್ರಿಕ್‌ಗೆ ಬಾರದ ಜನ, ಏಕಾ ಏಕೀ ಬರತೊಡಗಿದ್ದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಹೆಚ್ಚುವರಿ ಸರ್ವರ್‌ಗಳ ಜೋಡಣೆ ಮಾಡುವುದಕ್ಕೆ ಸರಕಾರ ತೀರ್ಮಾನಿಸಿತ್ತು. ಅಧಿಕಾರಿಗಳ ಪ್ರಕಾರ, ಜ. 10ರಿಂದ ಇ-ಕೆವೈಸಿ ಪುನರಾರಂಭವಾಗಲಿದೆ.
ನ್ಯಾಯಬೆಲೆ ಅಂಗಡಿಯಲ್ಲೇ ಪ್ರಕ್ರಿಯೆ
ಇ-ಕೆವೈಸಿ ಪ್ರಕ್ರಿಯೆಯನ್ನು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲೇ ಮಾಡಬೇಕು. ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರೂ ಬಯೋಮೆಟ್ರಿಕ್ ನೀಡಬೇಕಾಗುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕು. ಉಳಿದವರು ಆಧಾರ್ ಕಾರ್ಡ್ ಪ್ರತಿಯನ್ನು ಬಯೋಮೆಟ್ರಿಕ್ ವೇಳೆ ನೀಡಬೇಕು. ಈ ನಿಯಮಕ್ಕೆ ಒಳಪಡದವರ ರೇಷನ್ ವಿತರಣೆಯನ್ನು ಗಡುವು ಮೀರಿದ ನಂತರ ತಡೆ ಹಿಡಿಯಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದೊಂದು ವರ್ಷಗಳಿಂದೀಚೆಗೆ ರೇಷನ್ ಕಾರ್ಡ್ ಮಾಡಿಸಿಕೊಂಡವರು ಇ-ಕೆವೈಸಿ ಮಾಡುವ ಅಗತ್ಯವಿಲ್ಲ. ಅವರ ವಿವರಗಳು ಸ್ವಯಂಚಾಲಿತವಾಗಿ ಅಪ್ಲೋಡ್ ಆಗಿರುತ್ತದೆ. ಆದರೆ, ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಖಚಿತಪಡಿಸಿಕೊಳ್ಳಬೇಕು.
2,76,196 ಕುಟುಂಬ ಬಾಕಿ
ಜಿಲ್ಲೆಯಲ್ಲಿ ಶನಿವಾರದವರೆಗೆ ಸುಮಾರು ಶೇ. 38.76ರಷ್ಟು ಕುಟುಂಬಗಳ ಸದಸ್ಯರು ಬಯೋಮೆಟ್ರಿಕ್ ನೀಡಿದ್ದರು. ಒಟ್ಟು 4,30,665 ಕುಟುಂಬಗಳ ಪೈಕಿ ಪ್ರಸ್ತುತ 1,54,469 ಮಂದಿಯಷ್ಟೇ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 23,209 ಅಂತ್ಯೋದಯ ಕುಟುಂಬಗಳ ಪೈಕಿ 4,311 ಕುಟುಂಬ, 2,48,385 ಬಿಪಿಎಲ್ ಕುಟುಂಬಗಳ ಪೈಕಿ 1,08,840 ಕುಟುಂಬ ಮತ್ತು 1,59,061 ಎಪಿಎಲ್ ಕುಟುಂಬಗಳ ಪೈಕಿ 41,318 ಕುಟುಂಬ ಇ-ಕೆವೈಸಿ ಪ್ರಕ್ರಿಯೆಯಡಿ ಬಯೋಮೆಟ್ರಿಕ್ ನೀಡಿವೆ.
ತಾಲೂಕುವಾರು ವಿವರ
ಬೆಳ್ತಂಗಡಿಯಲ್ಲಿ 3,362 ಅಂತ್ಯೋದಯ ಕುಟುಂಬಗಳ ಪೈಕಿ 611 ಕುಟುಂಬ, 44,755 ಬಿಪಿಎಲ್ ಕುಟುಂಬಗಳ ಪೈಕಿ 17,743 ಕುಟುಂಬ, 13,205 ಎಪಿಎಲ್ ಕುಟುಂಬಗಳ ಪೈಕಿ 4,001 ಕುಟುಂಬ; ಬಂಟ್ವಾಳದ 5,978 ಅಂತ್ಯೋದಯ ಕುಟುಂಬಗಳ ಪೈಕಿ 1,359 ಕುಟುಂಬ, 55,841 ಬಿಪಿಎಲ್ ಕುಟುಂಬಗಳ ಪೈಕಿ 24,607 ಕುಟುಂಬ, 22,013 ಎಪಿಎಲ್ ಕುಟುಂಬಗಳ ಪೈಕಿ 5,367 ಕುಟುಂಬ; ಮಂಗಳೂರಿನಲ್ಲಿ 8,316 ಅಂತ್ಯೋದಯ ಕುಟುಂಬಗಳ ಪೈಕಿ 1,146 ಕುಟುಂಬ, 88,185 ಬಿಪಿಎಲ್ ಕುಟುಂಬ ಗಳ ಪೈಕಿ 39,091 ಕುಟುಂಬ, 87,254 ಎಪಿಎಲ್ ಕುಟು ಂಬಗಳ ಪೈಕಿ 21,841 ಕುಟುಂಬ; ಪುತ್ತೂರಿನಲ್ಲಿ 3,999 ಅಂತ್ಯೋ ದಯ ಕುಟುಂಬಗಳ ಪೈಕಿ 857 ಕುಟುಂಬ, 40,440 ಬಿಪಿಎಲ್ ಕುಟುಂಬಗಳ ಪೈಕಿ 19,117 ಕುಟುಂಬ, 25,692 ಎಪಿಎಲ್ ಕುಟುಂಬಗಳ ಪೈಕಿ 6,808 ಕುಟುಂಬ; ಸುಳ್ಯದಲ್ಲಿ 1,554 ಅಂತ್ಯೋದಯ ಕುಟುಂಬಗಳ ಪೈಕಿ 338 ಮಂದಿ, 19,164 ಬಿಪಿ ಎಲ್ ಕುಟುಂಬಗಳ ಪೈಕಿ 8,282 ಕುಟುಂಬ, 10,897 ಎಪಿಎಲ್ ಕುಟುಂಬಗಳ ಪೈಕಿ 30,301 ಕುಟುಂಬ ಇ-ಕೆವೈಸಿ ಮಾಡಿಸಿಕೊಂಡಿವೆ.
ಬಯೋಮೆಟ್ರಿಕ್ ಮಾಡಿಸಿಕೊಳ್ಳಿ
ಕಳೆದೊಂದು ವರ್ಷಗಳಿಂದ ಪಡಿತರ ಚೀಟಿಗೆ ಅರ್ಜಿ ಹಾಕುವಾಗಲೇ ಬಯೋ ಮೆಟ್ರಿಕ್ ಕಡ್ಡಾಯ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಅಂಥಹವರು ಮತ್ತೆ ಬಯೋಮೆಟ್ರಿಕ್ ಕೊಡಬೇಕಾಗಿಲ್ಲ. ಆದರೆ, ಹಿಂದೆ ಚೀಟಿ ಮಾಡಿಸಿ ಕೊಂಡವರು ಕಡ್ಡಾಯವಾಗಿ ಬಯೋ ಮೆಟ್ರಿಕ್ ಕೊಡಲೇಬೇಕು. ಜನ ಇದರ ಆವಶ್ಯಕತೆ ಅರಿತು ಮಾ. 31ರೊಳಗೆ ಬಯೋಮೆಟ್ರಿಕ್ ಮಾಡಿಸಿಕೊಳ್ಳಬೇಕು.
- ಡಾ| ಮಂಜುನಾಥನ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.