ಫೆ. 18-25ರ ವರೆಗೆ ನಾಗಮಂಡಲ
Team Udayavani, Feb 17, 2018, 4:57 PM IST
ಮಾಣಿಲ : ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಅಷ್ಟಪವಿತ್ರ ನಾಗಮಂಡಲ ಫೆ. 18ರಿಂದ 25ರ ವರೆಗೆ ನಡೆಯಲಿದೆ. ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀನಿವಾಸ ಕಲ್ಯಾಣ, ಭಜನೆ, ಮಹಿಳಾ ಸಮಾವೇಶ, ಯಕ್ಷಗಾನ, ನೇಮ ನಡೆಯಲಿದೆ. ನಾಗ, ಭೂಮಿ, ನಾಗಮಂಡಲ ಒಂದಕ್ಕೊಂದು ಪೂರಕವಾಗಿದ್ದು, ಸಮಾಜದಲ್ಲಿ ಋಣಾತ್ಮಕ ಪ್ರಕ್ರಿಯೆಯನ್ನು ಹೋಗಲಾಡಿಸಿ, ಧನಾತ್ಮಕ ಚಿಂತನೆ ಮೂಡಿಸುವುದಕ್ಕೆ ಪ್ರೇರಣೆಯಾಗಲಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಮಾಣಿಲ ಶ್ರೀಧಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಕೃಷಿ, ಅರಣ್ಯ ಸಂರಕ್ಷಣೆ ಸಂದೇಶವನ್ನು ಈ ಮೂಲಕ ನೀಡಬಹುದಾಗಿದೆ. ಪ್ರಾಕೃತಿಕ ಅಸಮತೋಲನ, ಸಾಮಾಜಿಕ ತೊಂದರೆ ನಿವಾರಿಸಲು, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಇಂಥ ಧಾರ್ಮಿಕ ಕಾರ್ಯ ಅಗತ್ಯ. ಮಾನವ ಬದುಕಿಗೂ ಕೃಷಿಗೂ ನಾಗನಿಗೂ ವಿಭಿನ್ನವಾದ ಬಂಧವಿದೆ. ಸಮೃದ್ಧಿ, ಸದ್ಬುದ್ಧಿ, ಸಂತೃಪ್ತಿಯ ಜೀವನಕ್ಕೆ ಚೇತೋಹಾರಿಯಾಗಲಿದೆ ಎಂದರು.
ಹಸಿರುವಾಣಿ ಹೊರೆಕಾಣಿಕೆ, ಸ್ವರ್ಣ ಮಂಟಪ ಮೆರವಣಿಗೆ
ಫೆ. 18ರಂದು ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ವರ್ಣ ಮಂಟಪ ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.
ನಾಡಿನ ಅಭ್ಯುದಯಕ್ಕಾಗಿ ನಾಗಮಂಡಲ
ಕ್ಷೇತ್ರದ ಟ್ರಸ್ಟಿ, ನಾಗಮಂಡಲ ಸಮಿತಿ ಗೌರವ ಸಲಹೆಗಾರ ತಾರಾನಾಥ ಕೊಟ್ಟಾರಿ ಮಾತನಾಡಿ, ಯಜ್ಞ- ಯಾಗಾದಿಗಳಿಗೆ ಅತ್ಯಂತ ಶ್ರೇಷ್ಠವಾದ ಮಾಣಿಲ ಕ್ಷೇತ್ರದಲ್ಲಿ ಸ್ವಾಮೀಜಿ ಅವರು ಜನರ ಕಷ್ಟಗಳಿಗೆ ಸ್ಪಂದಿಸುತ್ತ ದಾನ, ಧರ್ಮಗಳಿಂದ ಸಮಾಜದ ಶ್ರೇಯಸ್ಸಿಗೆ ಕಾರಣರಾಗಿದ್ದಾರೆ. ಅದೇ ರೀತಿಯಲ್ಲಿ ನಾಗಮಂಡಲವು ನಾಡಿನ ಅಭ್ಯುದಯಕ್ಕಾಗಿ ಏರ್ಪಡಿಸಲಾಗಿದೆ. ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಮಹಿಳಾ ಸೇವಾ ಸಮಿತಿ, ವಿವಿಧ ಸಂಘ -ಸಂಸ್ಥೆಗಳು ಸಹಕಾರ ನೀಡುತ್ತಿವೆ. ಭಕ್ತರು ತಂಡೋಪತಂಡವಾಗಿ ಆಗಮಿಸಿ, ಶ್ರಮದಾನ ಸೇವೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗಮಂಡಲ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ, ಪ್ರಚಾರ ಸಮಿತಿ ಸಂಚಾಲಕ ಪುಷ್ಪರಾಜ ಶೆಟ್ಟಿ ಬಿ.ಸಿ. ರೋಡ್, ವ್ಯವಸ್ಥಾಪಕ ವಿಟ್ಠಲ ಶೆಟ್ಟಿ ಸುಣ್ಣಂಬಳ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸುಣ್ಣಂಬಳ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.