Easter ಕರಾವಳಿಯಾದ್ಯಂತ ಕ್ರೈಸ್ತರಿಂದ ಈಸ್ಟರ್ ಜಾಗರಣೆ
ಕ್ರಿಸ್ತರ ಪುನರುತ್ಥಾನದ ಸ್ಮರಣೆ, ಬಲಿಪೂಜೆ, ಪ್ರಾರ್ಥನೆ
Team Udayavani, Mar 31, 2024, 6:03 AM IST
ಮಂಗಳೂರು: ಯೇಸು ಕ್ರಿಸ್ತರ ಪುನರುತ್ಥಾನದ ಸ್ಮರಣೆಯ ಈಸ್ಟರ್ ಹಬ್ಬವನ್ನು ಕರಾವಳಿಯ ಕ್ರೈಸ್ತರು ರವಿವಾರ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಿಸಲು ಮುಂದಾಗಿದ್ದಾರೆ. ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ ನಡೆಸಲಾಯಿತು. ಪ್ರಾರ್ಥನೆ, ಬಲಿಪೂಜೆಯಲ್ಲಿ ಕ್ರೈಸ್ತರು ಭಾಗವಹಿಸಿದರು.
ಕರಾವಳಿಯ ವಿವಿಧ ಚರ್ಚ್‌ಗಳಲ್ಲಿ ಶನಿವಾರ ಸಂಜೆಯ ವೇಳೆ ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು (ಬೆಂಕಿ) ಆಶೀರ್ವಚನ ನೆರವೇರತು. ಪವಿತ್ರ ಸಂಸ್ಕಾರಕ್ಕೆ ಬಳಸುವ ಪವಿತ್ರ ಜಲದ ಆಶೀರ್ವಾದ ನಡೆಯಿತು. ಬಲಿಪೂಜೆಯ ವಿಧಿಗಳು ಸಾಗಿದವು. ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಮತ್ತು ಪ್ರಾರ್ಥನಾ ಮಂದಿರ ಗಳಲ್ಲಿ ಶನಿವಾರ ರಾತ್ರಿ ಈಸ್ಟರ್ ಜಾಗರಣೆ ಕಾರ್ಯಕ್ರಮಗಳು ಜರಗಿತು.
ಮಂಗಳೂರಿನ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈಸ್ಟರ್ ಜಾಗ ರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿಕೊಟ್ಟರು. ಪ್ರಧಾನ ಧರ್ಮ ಗುರು ವಂ| ಆಲ್ಫೆ†ಡ್ ಪಿಂಟೊ ಸೇರಿದಂತೆ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.
ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿದ ಬಿಷಪ್ ಈಸ್ಟರ್ ಮೋಂಬತ್ತಿಯನ್ನು ಬೆಳಗಿದರು. ಬಿಷಪ್ ಅವರು ಈಸ್ಟರ್ ಸಂದೇಶ ನೀಡಿ, ಸಾವು ಮನುಕುಲದ ಕೊನೆಯಲ್ಲ. ಅದರ ಬಳಿಕ ಶಾಶ್ವತ ಬಾಳು ಇದೆ ಎಂಬುವುದು ಯೇಸುವಿನ ಪುನರುತ್ಥಾನದಿಂದ ದೃಢ ಪಟ್ಟಿದೆ. ಯೇಸುವಿನ ಪುನರುತ್ಥಾನ ಹೊಸ ಆಶಾವಾದ ಹುಟ್ಟುಹಾಕಿದೆ ಎಂದರು.
ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈಸ್ಟರ್ ಹಬ್ಬದ ಬಲಿಪೂಜೆಯನ್ನು ನಿಡ್ಡೋಡಿ “ದಿ ಲಿಟ್ಲ ಫ್ಲವರ್’ ಚರ್ಚ್‌ನಲ್ಲಿ ನೆರವೇರಿಸಲಿದ್ದಾರೆ.
ಉಡುಪಿಯಲ್ಲಿ ಆಚರಣೆ
ಉಡುಪಿ: ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಈಸ್ಟರ್ ಜಾಗರಣೆ ಶನಿವಾರ ನಡೆಯಿತು.
ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೋನ್ಸಾ, ಸಹಾಯಕ ಧರ್ಮಗುರು ವಂ| ಜೋಯ್ ಅಂದ್ರಾದೆ, ಪಿಲಾರ್ ಸಭೆಯ ರೆ| ಅರ್ವಿನ್ ಡಿ’ಕುನ್ನಾ, ರೆ| ನಿತೇಶ್ ಡಿ’ಸೋಜಾ, ಕಟಪಾಡಿ ಹೋಲಿಕ್ರಾಸ್ ಹೋಮ್‌ನ ರೆ| ರೋನ್ಸನ್ ಡಿ’ಸೋಜಾ, ನಿವೃತ್ತ ಧರ್ಮಗುರುಗಳಾದ ರೆ| ಲಾರೆ®Õ… ಮಾರ್ಟಿಸ್, ವಂ| ಲಾರೆ®Õ… ರಾಡ್ರಿಗಸ್ ಉಪಸ್ಥಿತರಿದ್ದರು.
ಬಲಿಪೂಜೆಗಳು ಪುನರಾರಂಭ
“ಪವಿತ್ರ ಗುರುವಾರ’ದ ಬಳಿಕ ಸ್ತಬ್ಧಗೊಂಡಿದ್ದ ಬಲಿಪೂಜೆಗಳು, ಘಂಟಾ ನಾದ ಕ್ರಿಸ್ತರ ಪುನರುತ್ಥಾನದ ದಿನ ಪುನರಾರಂಭಗೊಳ್ಳುತ್ತವೆ. ಯೇಸು ಕ್ರಿಸ್ತರು ದೇವರ ಪುತ್ರ ಎನ್ನುವುದು ಕ್ರೆçಸ್ತರ ನಂಬಿಕೆ. ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್ ಮತ್ತು ಪುನರುತ್ಥಾನದ ಹಬ್ಬ ಈಸ್ಟರ್ ಇವೆರಡು ಜಾಗತಿಕವಾಗಿ ಕ್ರೈಸ್ತರ ಪ್ರಮುಖ ಹಬ್ಬಗಳಾಗಿವೆ. ರವಿವಾರ ಬೆಳಗ್ಗೆ ಚರ್ಚ್‌ಗಳಲ್ಲಿ ಈಸ್ಟರ್ ಬಲಿಪೂಜೆಗಳು ಜರಗುತ್ತವೆ. ಬಳಿಕ ಮನೆಗಳಲ್ಲಿ ಸಂಭ್ರಮಾಚರಣೆ ಕಾಣಬಹುದು.
ಹೊಸ ಭರವಸೆ ಮೂಡಿಸಲಿ
ಮಂಗಳೂರು: ಈಸ್ಟರ್ ಯೇಸುವಿನ ಪುನರುತ್ಥಾನದ ಹಬ್ಬ ವಾಗಿದ್ದು, ಯೇಸು ಕ್ರಿಸ್ತರು ಶಿಲುಬೆ ಮರಣದ ಬಳಿಕ ಮೂರನೇ ದಿನ ಪುನರುತ್ಥಾನರಾದರು ಎಂಬ ಸತ್ಯವನ್ನು ಆಚರಿಸುತ್ತೇವೆ. ಯೇಸುಕ್ರಿಸ್ತರ ಪುನರುತ್ಥಾನದ ಮೂಲಕ ಮರಣ ಅಂತ್ಯವಲ್ಲ. ಹೊಸ ಆರಂಭವಾಗಿದೆ. ಮರಣದ ಬಳಿಕ ಪುನರುತ್ಥಾನರಾಗಿ ಸ್ವರ್ಗಲೋಕದಲ್ಲಿ ಶಾಶ್ವತ ಬಾಳುತ್ತೇವೆ ಎಂಬುವುದನ್ನು ತಿಳಿಸುತ್ತದೆ. ಶರೀರ ಹಾಗೂ ಆತ್ಮಕ್ಕೆ ಭರವಸೆ ಇದೆ. ನಮ್ಮನ್ನು ಜೀವಂತಗೊಳಿಸಿ, ಅವರೊಡನೆ ಸದಾ ಜೀವಿಸುವ ಭಾಗ್ಯವನ್ನು ಕ್ರಿಸ್ತರು ಕರುಣಿಸಿದ್ದಾರೆ. ಶಿಲುಬೆ ಮರಣದಿಂದ ಎಲ್ಲವೂ ಮುಕ್ತಾಯವಾಯಿತು ಎಂದು ಅಂದಿನ ಅರಸರು, ಮುಖಂಡರು ನಂಬಿಕೊಂಡಿದ್ದರು. ಆದರೆ, ಮೂರನೇ ದಿನದ ಪುನರುತ್ಥಾನವು ಹೊಸ ಭರವಸೆ ಮೂಡಿಸಿದೆ. ಅವರಲ್ಲಿ ವಿಶ್ವಾಸ ಇಟ್ಟವರಿಗೆ ಅವರಂತೆ ಪುನರುತ್ಥಾನ ಪ್ರಾಪ್ತಿಯಾಗಲಿಗುತ್ತದೆ. ಹಾಗೂ ಸದಾ ಕಾಲ ದೇವರೊಂದಿಗೆ ಬಾಳಲು ಅವಕಾಶ ಕಲ್ಪಿಸುತ್ತದೆ.
-ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಮಂಗಳೂರು ಧರ್ಮಾಧ್ಯಕ್ಷರು
ನವ ಜೀವನಕ್ಕೆ ಪ್ರೇರಣೆಯಾಗಲಿ
ಉಡುಪಿ: ಆಚರಣೆಯಲ್ಲಿ ಯೇಸು ಸ್ವಾಮಿಯ ಜನನದ ಮಹೋತ್ಸವ ಕ್ರಿಸ್ಮಸ್ ಅತ್ಯಂತ ಸಂಭ್ರಮ, ಸಡಗರದಿಂದ ನಡೆಸಿದರೂ ಕ್ರೈಸ್ತ ವಿಶ್ವಾಸದ ಬಲಿಷ್ಠ ಬುನಾದಿಯ ಆಚರಣೆಯ ಮೂಲ ಕ್ರಿಸ್ತರ ಪುನರುತ್ಥಾನದ ಈಸ್ಟರ್ ಮಹೋತ್ಸವ.
ದೇವಪುತ್ರ ಯೇಸುಕ್ರಿಸ್ತರು ಈ ಜಗತ್ತಿಗೆ ಆಗಮಿಸಿ ಮನುಷ್ಯ ಜೀವನದಲ್ಲಿ ಮಿಳಿತಗೊಂಡು, ಪಾಪವೊಂದನ್ನು ಬಿಟ್ಟು ಎಲ್ಲದರಲ್ಲೂ ಮಾನವರಂತೆ ಜೀವಿಸಿ, ಸತ್ಯ ಸ್ಥಾಪನೆಗಾಗಿ ಯಾತನೆಗೆ ಒಳಗಾಗಿ ಶಿಲುಬೆಯಲ್ಲಿ ಮೃತಪಟ್ಟರು. ಆದರೆ, ತಾವು ಮುಂಚಿತವಾಗಿ ಹೇಳಿದಂತೆ ಮೂರನೆಯ ದಿನ ಮೃತರ ಮಧ್ಯದಿಂದ ಜೀವಂತವಾಗಿ ಎದ್ದರು. ಇದೇ ಸತ್ಯವನ್ನು ಸಂಭ್ರಮದಿಂದ ಆಚರಿಸುವ ಹಬ್ಬ ಈಸ್ಟರ್ ಮಹೋತ್ಸವ. ಈಸ್ಟರ್ ಮಹೋತ್ಸವಕ್ಕೆ ಮುಂಚಿತವಾಗಿ 40 ದಿನಗಳು ಪ್ರಾರ್ಥನೆ, ಉಪವಾಸ, ದಾನ-ಧರ್ಮಗಳಿಂದ ಕಳೆದು ಎಲ್ಲ ಕ್ರೈಸ್ತರು ಈ ಮಹೋತ್ಸವಕ್ಕೆ ಸಿದ್ಧತೆ ನಡೆಸುತ್ತಾರೆ. ಈಸ್ಟರ್ ಮಹೋತ್ಸವ ನವಜೀವನದ ಉದಯ ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮರಣದಿಂದ ನವಜೀವನದೆಡೆಗೆ ನಡೆವ ಪಯಣ. ಪುನರುತ್ಥಾನಿ ಯೇಸುಸ್ವಾಮಿ ಇಡೀ ಮನುಜಕುಲಕ್ಕೆ ಹೊಸ ಜೀವನದ ಭರವಸೆ ನೀಡಿದ್ದಾರೆ. ಅದನ್ನು ಸಂತೋಷದಿಂದ ಸ್ವೀಕರಿಸಿ ಜೀವಿಸೋಣ. ನಮ್ಮೆಲ್ಲರ ಜೀವನದಲ್ಲಿ ಹೊಸ ಜೀವನದ ಹುಮ್ಮಸ್ಸು ಹಾಗೂ ಪ್ರೇರಣೆ ಕಂಡು ಬರಲಿ.
– ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಾಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.