ಚರ್ಚ್‌ಗಳಲ್ಲಿ ಈಸ್ಟರ್ ಆಚರಣೆ, ವಿಶೇಷ ಪ್ರಾರ್ಥನೆ
Team Udayavani, Apr 21, 2019, 6:10 AM IST
ಮಂಗಳೂರು/ಉಡುಪಿ: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಅನ್ನು ಕ್ರೈಸ್ತರು ರವಿವಾರ (ಎ. 21) ಆಚರಿಸಲಿದ್ದು, ಪೂರ್ವಭಾವಿಯಾಗಿ ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿಶೇಷ ಪ್ರಾರ್ಥನೆ ಮತ್ತು ಸಂಭ್ರಮದ ಬಲಿಪೂಜೆ ನೆರವೇರಿತು.
ಮಂಗಳೂರಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಿಷಪ್ ರೈ| ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಅವರು ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿ ಈಸ್ಟರ್ ಮೋಂಬತ್ತಿಯನ್ನು ಉರಿಸಿದರು. ಕೆಥಡ್ರಲ್‌ನ ರೆಕ್ಟರ್ ವಂ| ಜೆ.ಬಿ. ಕ್ರಾಸ್ತಾ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು.
ಭಾಗವಹಿಸಿದ್ದ ಕ್ರೈಸ್ತ ವಿಶ್ವಾಸಿಗಳೆಲ್ಲರೂ ಈಸ್ಟರ್ ಮೋಂಬತ್ತಿಯ ಅಗ್ನಿಯಿಂದ ಮೇಣದ ಬತ್ತಿ ಉರಿಸಿ ಮೆರವಣಿಗೆಯಲ್ಲಿ ಕೆಥೆಡ್ರಲ್‌ನ ಒಳ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದರು ಹಾಗೂ ಬಲಿಪೂಜೆಯಲ್ಲಿ ಪಾಲ್ಗೊಂಡರು. ಬಲಿಪೂಜೆ ಸಂದರ್ಭ ಬಿಷಪ್ ಅವರು ಈಸ್ಟರ್ ಆಚರಣೆಯ ಮಹತ್ವವನ್ನು ವಿವರಿಸಿ ಹಬ್ಬದ ಸಂದೇಶ ನೀಡಿದರು.
ಧರ್ಮ ಪ್ರಾಂತದ ಎಲ್ಲ ಚರ್ಚ್ ಗಳಲ್ಲಿ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಶನಿವಾರ ರಾತ್ರಿ ಈಸ್ಟರ್ ಜಾಗರಣೆ ಕಾರ್ಯಕ್ರಮಗಳು ಜರಗಿದ್ದು, ಸಂಬಂಧ ಪಟ್ಟ ಧರ್ಮಗುರುಗಳು ನೇತೃತ್ವ ವಹಿಸಿದ್ದರು. ಬಲಿ ಪೂಜೆಯ ಬಳಿಕ ಎಲ್ಲ ಕ್ರೈಸ್ತರು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಉಡುಪಿ: ಬಿಷಪ್ ರೈ| ರೆ| ಡಾ|ಜೆರಾಲ್ಡ… ಐಸಾಕ್ ಲೋಬೊ ನೇತೃತ್ವ ದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಈಸ್ಟರ್ ಜಾಗರಣೆ ನಡೆಯಿತು. ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು.
ಸಂವಿಧಾನದ ಕೊಂಕಣಿ
ಭಾಷಾಂತರ ಕೃತಿ ಬಿಡುಗಡೆ
ಮಂಗಳೂರು: ರೊಜಾರಿಯೊ ಕೆಥೆಡ್ರಲ್‌ನಲ್ಲಿ ಈಸ್ಟರ್ ಬಲಿಪೂಜೆಯ ಬಳಿಕ ಭಾರತದ ಸಂವಿಧಾನದ ಕೊಂಕಣಿ ಭಾಷಾಂತರ ಕೃತಿಯನ್ನು ಬಿಷಪ್ ಪೀಟರ್ ಪಾವ್É ಸಲ್ಡಾನ್ಹಾ ಬಿಡುಗಡೆ ಮಾಡಿದರು.
ಈ ಗ್ರಂಥವು ಭಾರತದ ಪ್ರಜೆಗಳಾಗಿ ನಾವು ನಿರ್ವಹಿಸ ಬೇಕಾದ ಜವಾಬ್ದಾರಿಗಳನ್ನು ಮತ್ತು ನಮಗಿರುವ ಹಕ್ಕುಗಳನ್ನು ತಿಳಿದುಕೊಳ್ಳಲು ಜನ ಸಾಮಾನ್ಯರಿಗೆ ನೆರವಾಗಲಿದೆ. ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಿ ಸನ್ಮಾರ್ಗದಲ್ಲಿ ನಡೆಯಲು ಇದರಿಂದ ಪ್ರಯೋಜನ ಆಗಲಿ ಎಂದು ಬಿಷಪ್ ಪೀಟರ್ ಪಾವ್É ಸಲ್ದಾನ್ಹಾ ಅವರು ಈ ಸಂದರ್ಭದಲ್ಲಿ ಹಾರೈಸಿದರು.
ಸಂವಿಧಾನವನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿದ ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಸ್ಟೀಫನ್ ಕ್ವಾಡ್ರಸ್ ಪೆರ್ಮುದೆ ಮತ್ತವರ ಪತ್ನಿ ಗ್ಲಾ Âಡಿಸ್ ಕ್ವಾಡ್ರಸ್, ಕೃತಿ ಪ್ರಕಟಿಸಿದ ಮಂಗಳೂರು ಧರ್ಮ ಪ್ರಾಂತದ ಶ್ರೀಸಾಮಾನ್ಯರ ಆಯೋಗದ ನಿರ್ದೇಶಕ ಫಾ| ಜೆ.ಬಿ. ಕ್ರಾಸ್ತಾ, ಸದಸ್ಯ ಸುಶೀಲ್ ನೊರೋನ್ಹಾ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.