ಎಡ್ತೂರು: ಆಗಸದಿಂದ ಬಿದ್ದ ಯಂತ್ರ!
Team Udayavani, Mar 13, 2018, 6:00 AM IST
ಪುಂಜಾಲಕಟ್ಟೆ: ಆಕಾಶದಿಂದ ಪ್ಯಾರಾಚೂಟ್ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರವೊಂದು ಸಾರ್ವಜನಿಕರಲ್ಲಿ ಆತಂಕದ ಜತೆಗೆ ಕುತೂಹಲ ಮೂಡಿಸಿದ ಘಟನೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಸಂಭವಿಸಿದೆ.
ಎಡ್ತೂರು ನಿರಂಜನ್ ಜೈನ್ ಅವರ ತೋಟದಲ್ಲಿ ಈ ಅಪರೂಪದ ವಸ್ತು ಕಾಣಸಿಕ್ಕಿದೆ. ಕಳೆದೆರಡು ದಿನದ ಹಿಂದೆ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗಿದ್ದ ವೇಳೆ ಅಡಿಕೆ ಮರದ ಬುಡದಲ್ಲಿ ಈ ವಸ್ತು ಕಂಡುಬಂದಿದೆ. ದ್ವಿಚಕ್ರ ವಾಹನದ ಬ್ಯಾಟರಿಯಂತಿರುವ ಈ ಯಂತ್ರಕ್ಕೆ ಪುಟ್ಟ ಪ್ಯಾರಾಚೂಟ್ ಅಳವಡಿಸಲಾಗಿದೆ. ತಯಾರಿಕಾ ಸಂಸ್ಥೆಯ ಹೆಸರು ಬರೆಯಲಾಗಿದೆ.
ಆತಂಕ ಬೇಕಾಗಿಲ್ಲ
ಈ ವಸ್ತುವಿನ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸಿ.ಎನ್. ಪ್ರಭು ಹೇಳಿದ್ದಾರೆ. ಇದು ಭಾರತೀಯ ಹವಾಮಾನ ಇಲಾಖೆ ಹವಾಮಾನ ವೈಪರೀತ್ಯವನ್ನು ಮಾಪನ ಮಾಡುವ ಯಂತ್ರ. ಇಲಾಖೆ ಆಗಾಗ ಇಂತಹ ಯಂತ್ರಗಳನ್ನು ಆಗಸಕ್ಕೆ ರವಾನಿಸುತ್ತಿರುತ್ತದೆ. ಪ್ಯಾರಾಚೂಟ್‌ನಲ್ಲಿ ಸಮಸ್ಯೆಯಾದಾಗ ಸಾಮಾನ್ಯವಾಗಿ ಇದು ಸಮುದ್ರ ಅಥವಾ ಅರಣ್ಯ ಪ್ರದೇಶದಲ್ಲಿ ಬೀಳುತ್ತದೆ. ಆಕಸ್ಮಿಕವಾಗಿ ಜನವಸತಿ ಪ್ರದೇಶದಲ್ಲಿ ಬಿದ್ದಿರಬಹುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.