‘ಭಾವನಾತ್ಮ ಕ ಆಚರಣೆಯಿಂದ ಪರಿಣಾಮಕಾರಿ’


Team Udayavani, Nov 2, 2017, 12:10 PM IST

2-Mng–6.jpg

ಸುಳ್ಯ: ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ರಾಜ್ಯೋತ್ಸವವನ್ನು ಕೇವಲ ಆಚರಣೆಗಷ್ಟೇ ಸೀಮಿತಗೊಳಿಸದೇ ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಿದಾಗ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಶಾಸಕ ಎಸ್‌. ಅಂಗಾರ ನುಡಿದರು.

ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಬುಧವಾರ ಸುಳ್ಯ ಸ.ಪ.ಪೂ.ಕಾಲೇಜು ಮೈದಾನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯೋತ್ಸವ ಆಚರಣೆಗಳು ಭಕ್ತಿ ಭಾವನೆಯಿಂದ ಆಚರಿಸುವಂತಾಗಬೇಕು. ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಗಳು ಓಲೈಕೆ ರಾಜಕಾರಣ ಮಾಡಬಾರದು. ಹೀಗಾದರೆ ಆಪತ್ತುಗಳು ಬರುತ್ತವೆ ಎಂದ ಅವರು, ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು.

ಜಾಗೃತಿ ಮೂಡಿಸಬೇಕು
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ಕನ್ನಡ ನೆಲ, ಜಲವನ್ನು ಬಳಸಿ ಕನ್ನಡ ತಾಯಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಯುವಜನತೆಯಲ್ಲಿ ಕನ್ನಡಾಭಿಮಾನದ ಜಾಗೃತಿ ಮೂಡಿಸಬೇಕು ಎಂದರು. ನಗರ ಪಂಚಾಯತ್‌ ಅದ್ಯಕ್ಷೆ ಶೀಲಾವತಿ ಗೌಡ, ಸರಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು ಎಂದರು.

ಎಒಎಲ್‌ಇ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಮಾತನಾಡಿ, ಕರ್ನಾಟಕವು ದೇಶದಲ್ಲಿ ಅತ್ಯಧಿಕ ಉನ್ನತ ಶಿಕ್ಷಣ ಸಂಸ್ಥೆಗಳಿರುವ ರಾಜ್ಯ. ಇತರ ಭಾಷೆಗಳನ್ನು ವ್ಯವಹಾರ ಮತ್ತು ಜ್ಞಾನಕ್ಕಾಗಿ ಉಪಯೋಗಿಸಿಕೊಂಡು ಮನೆಭಾಷೆ
ಮತ್ತು ಮಾತೃಭಾಷೆಯಾಗಿರುವ ಕನ್ನಡವನ್ನೇ ಹೆಚ್ಚು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ
ನೀಡಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ
ಮುಂಡೋಡಿ, ತಾಲೂಕು ಕಸಾಪ ಅದ್ಯಕ್ಷ ಹರಪ್ರಸಾದ್‌ ತುದಿಯಡ್ಕ, ನ.ಪಂ. ಸದಸ್ಯ ಗೋಕುಲ್‌ದಾಸ್‌, ನಾಮನಿರ್ದೇಶಿತ ಸದಸ್ಯ ನಝಿರ್‌, ಕೆಪೆಕ್‌ ನಿರ್ದೆಶಕ ಪಿ.ಎ. ಮಹಮ್ಮದ್‌, ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಗೃಹರಕ್ಷಕ ದಳದ ಕಮಾಡೆಂಟ್‌ ಜಯಂತ್‌ ಶೆಟ್ಟಿ, ನಿವೃತ್ತ ಕಮಾಡೆಂಟ್‌ ರಾಮಕೃಷ್ಣ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ ಸ್ವಾಗತಿಸಿ, ಶಿಕ್ಷಣ ಸಮನ್ವಯಾಧಿಕಾರಿ ವೀಣಾ ಎಂ.ಟಿ. ವಂದಿಸಿದರು. ಉಷಾ
ಹಾಗೂ ಜಲಜಾಕ್ಷಿ ನಿರೂಪಿಸಿದರು.

ಗೌರವವಂದನೆ
ತಹಶೀಲ್ದಾರ್‌ ಎಂ.ಎಂ. ಗಣೇಶ್‌ ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ರಾಜ್ಯೋತ್ಸವದ ಸಂದೇಶ ವಾಚಿಸಿದರು. ಸುಳ್ಯ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ ಅವರು ಪರೇಡ್‌ ನಿರ್ವಹಿಸಿದರು. ಆಕರ್ಷಕ ಪಥಸಂಚಲನದಲ್ಲಿ ಪೋಲಿಸ್‌ ಸಶಸ್ತ್ರ ಪಡೆ, ಗೃಹರಕ್ಷಕದಳ ಸ್ಕೌಟ್ಸ್‌ -ಗೈಡ್ಸ್‌ ಸೇವಾದಳ, ಬುಲ್‌ಬುಲ್‌ ಹಾಗೂ ಎನ್‌
ಸಿಸಿ ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. 

ಸಮ್ಮಾನ, ಬಹುಮಾನ
ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾಪಟುವಾಗಿರುವ ಮತ್ತು ಕ್ರೀಡಾದರ್ಶಿನಿ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಕೆ.ಎಂ. ಅವರನ್ನು ಸಮ್ಮಾನಿಸಲಾಯಿತು. ಕನ್ನಡ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಯಶ್ವಿ‌ತಾ, ಸುಷ್ಮಾ ಎಸ್‌. ಹಾಗೂ ಹಸಿಬಾ ಅವರಿಗೆ ಪ್ರಶಸ್ತಿ ಫಲಕ ಮತ್ತು ರಾಜೋತ್ಸವದ ಪ್ರಯುಕ್ತ ಕೆವಿಜಿ ಶಿಕ್ಷಣ ಸಂಸ್ಥೆ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಟಾಪ್ ನ್ಯೂಸ್

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.