ಹಸಿವು ಮುಕ್ತ ಕರ್ನಾಟಕಕ್ಕೆ ಪ್ರಯತ್ನ : ಐವನ್ ಡಿ’ಸೋಜಾ
Team Udayavani, Mar 8, 2018, 11:22 AM IST
ಸುರತ್ಕಲ್ : ದೇಶದಲ್ಲಿ ಉಳುವವನಿಗೆ ಭೂಮಿಯ ಹಕ್ಕು ನೀಡಿದ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಂಟೀನ್ ಆರಂಭಿಸುವ ಮೂಲಕ ಹಸಿವು ಮುಕ್ತ ಕರ್ನಾಟಕಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದರು.
ಸುರತ್ಕಲ್ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಚಿತ ಅಕ್ಕಿ ಭಾಗ್ಯ, ಹಕ್ಕುಪತ್ರ ಮತ್ತಿತರ ಮೂಲಸೌಲಭ್ಯದ ಬಳಿಕ ಇದೀಗ ಬಡ ವರ್ಗಕ್ಕೆ ಬೇಕಾದ ಆಹಾರವನ್ನೂ ಕನಿಷ್ಠ ದರದಲ್ಲಿ ನೀಡುವ ಸೌಲಭ್ಯ ಸರಕಾರ ನೀಡುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿಯೂ ಉಚಿತವಾಗಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಶಾಸಕ ಮೊದಿನ್ ಬಾವಾ ಮಾತನಾಡಿ, ಇಂದಿರಾ ಕ್ಯಾಂಟೀನ್ ಆರಂಭದ ಬಳಿಕ ಸರ್ವರಿಗೂ ಆಹಾರ ಭದ್ರತೆ ಕುರಿತ ಪರಿಕಲ್ಪನೆ ಕಾಂಗ್ರೆಸ್ ಆಡಳಿತದಿಂದ ಸಾಕಾರವಾಗಿದೆ ಎಂದರು. ಮೇಯರ್ ಕವಿತಾ ಸನಿಲ್ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.
ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಶಶಿಧರ್ ಹೆಗ್ಡೆ, ದೀಪಕ್ ಪೂಜಾರಿ, ಪುರುಷೋತ್ತಮ್ ಚಿತ್ರಾಪುರ, ಕುಮಾರ್ ಮೆಂಡನ್, ಅಯಾಝ್ ಕೃಷ್ಣಾಪುರ, ಮಾಜಿ ಮೇಯರ್ ಗುಲ್ಜಾರ್ ಬಾನು, ಆಯುಕ್ತ ನಝೀರ್, ಗಣ್ಯರು ನೂತನ ಕ್ಯಾಂಟಿನ್‌ನಲ್ಲಿ ಆಹಾರ ಖಾದ್ಯವನ್ನು ಸವಿದರು. ಮೊದಲ ದಿನದ ಆಹಾರ ಸವಿಯಲು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.