ಕರಾವಳಿ: ಇಂದು ಈದುಲ್ ಫಿತ್ರ್
Team Udayavani, Jun 15, 2018, 2:40 AM IST
ಉಡುಪಿ/ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಹಬ್ಬ ಆಚರಿಸಲಾಗುವುದು ಎಂದು ಎರಡೂ ಜಿಲ್ಲೆಗಳ ಖಾಝಿಗಳಾದ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಮತ್ತು ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರು ಘೋಷಿಸಿದ್ದಾರೆ. ಕಲ್ಲಿಕೋಟೆಯಲ್ಲಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಲ್ ನ ಪ್ರಥಮ ಚಂದ್ರ ದರ್ಶನವಾಗಿರುವುದರಿಂದ ಶುಕ್ರವಾರ ಈದುಲ್ ಫಿತ್ರ್ ಆಚರಿಸಲು ನಿರ್ಧ ರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಉಳ್ಳಾಲ: ಗುರುವಾರ ರಾತ್ರಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶುಕ್ರವಾರ ಪವಿತ್ರ ಈದುಲ್ ಫಿತ್ರ್ ಹಬ್ಬ ಆಚರಿಸಲು ಉಳ್ಳಾಲ ದರ್ಗಾ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ತೀರ್ಮಾನಿಸಿದ್ದಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಾನ, ಧರ್ಮ, ಸೌಹಾರ್ಧತೆ, ಸಮಾನತೆಯ ಹಬ್ಬ ಈದುಲ್ ಫಿತ್ರ್
ಮುಸ್ಲಿಂ ಧರ್ಮದ ಅತೀ ಮುಖ್ಯವಾದ ಧಾರ್ಮಿಕ ಕಟ್ಟಳೆಗಳಲ್ಲಿ ರಂಝಾನ್ ತಿಂಗಳ ಆಚರಣೆ ತುಂಬಾ ಮಹತ್ವದ್ದಾಗಿದೆ. ಇದು ವಿಶ್ವದೆಡೆಯಲ್ಲಿ ಮುಸ್ಲಿಮರೆಲ್ಲರು ತಮ್ಮನ್ನೆಲ್ಲ ಭಯ ಭಕ್ತಿಯಿಂದ ದೇವರಲ್ಲಿ ಅರ್ಪಿಸಿಕೊಂಡ ಅವನ ಉಪಾಸನೆಯಲ್ಲಿ ತೊಡಗುವ ಮಹಿಮಾನ್ವಿತ ತಿಂಗಳು. ಜಗತ್ತಿನ ಮುಸಲ್ಮಾನರು ಈದುಲ್ ಫಿತ್ರ್ ಹಬ್ಬದ ಸಂಭ್ರಮ ಸಡಗರದಲ್ಲಿದ್ದಾರೆ. ಬಡವರು, ಶ್ರೀಮಂತರು, ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ, ಎಲ್ಲರೂ ಹಬ್ಬದ ಸಂಭ್ರಮವನ್ನು ಎದುರು ನೋಡುತ್ತಿದ್ದು, ಅದರ ಸಿದ್ಧತೆ ಎಂಬಂತೆ ಎಲ್ಲೆಲ್ಲೂ ಹೊಸ ವಸ್ತು, ಹಣ್ಣು ಹಂಪಲು, ತರಕಾರಿ, ಸಿಹಿ ಮೊದಲಾದವುಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಹೌದು ಮುಸ್ಲಿಂ ಧರ್ಮದ ಅತೀ ಮುಖ್ಯವಾದ ಧಾರ್ಮಿಕ ಕಟ್ಟಳೆಗಳಲ್ಲಿ ರಂಝಾನ್ ತಿಂಗಳ ಆಚರಣೆ ತುಂಬಾ ಮಹತ್ವದ್ದಾಗಿದೆ. ಇದು ವಿಶ್ವದೆಡೆಯಲ್ಲಿ ಮುಸ್ಲಿಮರೆಲ್ಲರು ತಮ್ಮನ್ನೆಲ್ಲ ಭಯ ಭಕ್ತಿಯಿಂದ ದೇವರಲ್ಲಿ ಅರ್ಪಿಸಿಕೊಂಡ ಅವನ ಉಪಾಸಣೆಯಲ್ಲಿ ತೊಡಗುವ ಮಹಿಮಾನ್ವಿತ ತಿಂಗಳು. ಅನ್ನ ನೀರು ಮತ್ತು ವಿಷಯಾಸಕ್ತಿಗಳನ್ನೆಲ್ಲಾ ತ್ಯಜಿಸಿ ಸಕಲ ಇಂದ್ರಿಯ ನಿಗ್ರಹಗಳನ್ನು ತೋರ್ಪಡಿಸುವುದಷ್ಟೇ ರಂಝಾನ್ ಮಹತ್ವವಲ್ಲ. ಇವೆಲ್ಲಕ್ಕಿಂತ ಮಿಗಿಲಾದ ಆಳವಾದ ವೈಚಾರಿಕ ಮಹತ್ವ ಈ ಮಾಸಾಚರಣೆಯಲ್ಲಿ ಅಡಗಿದೆ.
ಈ ಪವಿತ್ರ ತಿಂಗಳಲ್ಲಿ ದೇವರು (ಅಲ್ಲಾಹು) ಕುರಾನ್ ಪವಿತ್ರ ಗ್ರಂಥವನ್ನು ತನ್ನ ದೇವದೂತ ಜಿಬ್ರಯೀರ್ ಮುಖಾಂತರ ಮಹಮ್ಮದ್ ಪೈಗಂಬರ್ ಅವರಿಗೆ ದೇವವಾಣಿಯಾಗಿ ತಲುಪಿಸಿ ಮುಂದೆ ಅದು ಸಕಲ ಮಾನವ ಜನಾಂಗಕ್ಕೆ ಅರ್ಪಿತವಾಯಿತು. ಈ ಪವಿತ್ರ ತಿಂಗಳಲ್ಲಿ ಅಲ್ ಬದರ್ ಯುದ್ಧ ನಡೆಯಿತು. ಮಹಮ್ಮದ್ ಪೈಗಂಬರ್ ಅವರ ಅನುಯಾಯಿಗಳು ಮತ್ತು ಆಲ್ ಬರೇಶ್ ಪಂಗಡಗಳ ನಡುವೆ ನಡೆದ ಯುದ್ಧ ಕೊನೆಯಲ್ಲಿ ಮಹಮ್ಮದ್ ಪೈಗಂಬರ್ ಮತ್ತು ಅವರ ಅನುಯಾಯಿಗಳ ವಿಜಯದೊಂದಿಗೆ ಕೊನೆಗೊಂಡು ಈ ಭೂಭಾಗದಲ್ಲಿ ಮುಸ್ಲಿಂ ಧರ್ಮ ಸ್ಥಾಪನೆಗೆ ದಾರಿಯಾಯಿತು. ದುಷ್ಟ ಪ್ರೇರಣೆಗಳಿಂದ ಮುಕ್ತವಾಗಿಸುವ ತರಬೇತಿಯೇ ಈ ತಿಂಗಳ ವೈಶಿಷ್ಟ್ಯಗಳಲ್ಲಿ ಒಂದು. ಆತ್ಮ ಸಂಯಮ, ಇಂದ್ರಿಯ ನಿಗ್ರಹ ಬೆಳಸುವುದೇ ಇದರ ಗುರಿ. ಈ ಪವಿತ್ರ ತಿಂಗಳಲ್ಲಿ ಸ್ವರ್ಗದ ಬಾಗಿಲುಗಳು ತೆರೆದುಕೊಂಡು ನರಕದ ಬಾಗಿಲುಗಳು ಮುಚ್ಚಿಕೊಂಡಿರುವುದು. ನಿರ್ಮಲ ಮನಸ್ಸಿನಿಂದ ತಮ್ಮೆಲ್ಲ ಭಯ ಭಕ್ತಿಯಿಂದ ಅವನಲ್ಲಿ ಬೇಡುವರು. ದಯಾಭಿಕ್ಷೆಗೆ ಮುಂದಾಗುವುದು, ಧರ್ಮದ ಬಗ್ಗೆ ಅರಿತು ಜತೆಗೆ ಸುನ್ನತ ಅಲ್ಲಾಹ ಹದಧ ಅಂದರೆ ಮಹಮ್ಮದ್ ಪೈಗಂಬರ್ ಅವರ ಉವಾಚ ನಡೆನುಡಿಗಳಂತೆ ನಡೆಯುವುದು ಇವೇ ಮುಖ್ಯ. ಹೌದು ರಂಝಾನ್ ಮಾಸದಲ್ಲಿ ತಮ್ಮನ್ನು ತಾವು ಚೆನ್ನಾಗಿ ಅರಿತುಕೊಂಡು, ತಮ್ಮ ದೌರ್ಬಲ್ಯಗಳನ್ನು ತಿಳಿದುಕೊಂಡು, ತಪ್ಪು, ಒಪ್ಪುಗಳ ಅರಿವು ಮಾಡಿಕೊಳ್ಳುವುದು. ಹಬ್ಬದಂದು ಸಂಬಂಧಿಕರು, ಸ್ನೇಹಿತರನ್ನು ಭೇಟಿಯಾಗುವುದು ಅವಶ್ಯ, ತಿಂದುಂಡು, ಆಲಸಿಯಾಗಿ ಟಿವಿ ಚಾನೆಲ್ ಗಳ ನಡುವೆ ಮೈಮರೆಯುವುದು ಅಥವ ನಿದ್ದೆ ಹೋಗುವುದು ಸೂಕ್ತವಲ್ಲ. ನೆರೆಕೆರೆಯ ಅನ್ಯಧರ್ಮಿಯರ ಮನೆಗೂ ಭೇಟಿ ನೀಡಿ ನಮ್ಮ ಸಂತೋಷವನ್ನು ಅವರ ಜತೆಗೆ ಹಂಚಿಕೊಳ್ಳುವುದು ಅತಿ ಅವಶ್ಯ.
ಹೀಗೆ ಒಂದು ತಿಂಗಳಲ್ಲಿ ಪಡೆದ ಆತ್ಮನಿಯಂತ್ರಣ, ಪರಿಶುದ್ಧ ಬದುಕು, ಘನತೆ ಮತ್ತು ಗೌರವದಿಂದ ಕೂಡಿದ ಸಂಸ್ಕಾರ, ಬಡವರು- ದುರ್ಬಲರೊಂದಿಗೆ ತೋರಿದ ಕಾಳಜಿಯನ್ನು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದೇ ಈದುಲ್ ಫಿತ್ರ್ ನ ಪ್ರಮುಖ ಸಂದೇಶ. ಭಾರತದ ಬಹುಸಂಸ್ಕೃತಿಯ ಸಮಾಜದಲ್ಲಿ ಎಲ್ಲಾ ಸಮುದಾಯಗಳನ್ನು ಸಹಿಸುವ, ಬೆರೆಯುವ ಮತ್ತು ಗೌರವಿಸುವ ಉನ್ನತ ಚಾರಿತ್ರ್ಯವನ್ನು ರಮ್ಜಾನ್ ಉಪವಾಸದ ಮೂಲಕ ಮುಸ್ಲಿಮರು ಪಡೆದುಕೊಂಡಿದ್ದಾರೆ. ಈದ್ ದಿನದಂದು ಮತ್ತು
ಮುಂದಿನ ಬದುಕಿನ ಉದ್ದಕ್ಕೂ ಈ ಪ್ರತೀ, ಗೌರವ, ಸಹಿಷ್ಣುತೆ ಮತ್ತು ಸಹಕಾರ ಮುಂದುವರೆಯಲಿ ಸಮಸ್ತ ಮುಸ್ಲಿಮ್ ಬಾಂಧವರಿಗೆ ಈದುಲ್ ಫಿತ್ರ್ ನ ಶುಭಾಶಯಗಳು, ದೇವರು ಎಲ್ಲರಿಗೂ ಒಳಿತು ಮಾಡಲಿ.
ಹಬ್ಬದ ವಿಶೇಷತೆ ದಾನ- ಫಿತ್ರ್ ಎಂಬ ಪದವು ಇಫ್ತಾರ್ ಎಂಬ ಮೂಲದಿಂದ ಬಂದಿದೆ. ಇಫ್ತಾರ್ ಎಂದರೆ ಉಪವಾಸಹಾರಣೆ (ತ್ಯೆಜಿಸುವುದು) ಫಿತ್ರ್ ಝಕಾತ್ ಎಂಬವುದು ರಮಝಾನ್ ತಿಂಗಳ ಉಪವಾಸ ವ್ರತ ಪೂರ್ಣಗೊಂಡಾಗ ಕೊಡುವ ದಾನ, ಅದರ ಆಜ್ಞೆಯು ಪ್ರಥಮ ಬಾರಿಗೆ ಹಿಜರಿ ಶಕೆ 2ರ ರಮಝಾನ್ ತಿಂಗಳಲ್ಲಿ ಈದುಲ್ ಫಿತ್ರ್ ಎರಡು ದಿನ ಇರುವಾಗ ನೀಡಲಾಗಿತ್ತು. ಫಿತ್ರ್ ಝಕಾತ್ ಮನಸಾರೆ ಕೊಡಬೇಕು. ಅದನ್ನು ಈದ್ ನಮಾಝ್ಗೆ ಹೊರಡುವ ಮುಂಚಿತವಾಗಿ ಕೊಡುವುದೇ ಉತ್ತಮ. ಬಡವರು ಹಬ್ಬದ ಆಗತ್ಯ ವಸ್ತುಗಳನ್ನುಕೊಂಡು ಈದ್ಗಾಗೆ ತೆರಳಿ ಇತರರೊಂದಿಗೆ ಹಬ್ಬದ ಸಂತೋಷದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಆದನ್ನು ಸ್ವಲ್ಪ ಮುಂಚಿತವಾಗಿ ಕೊಡಬೇಕು ಎಂಬುವುದು ಇಸ್ಲಾಮೀ ನಿಯಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Belthangady: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಬಲಿಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.