ಉಭಯ ತಾಲೂಕುಗಳಲ್ಲಿ ಸಂಭ್ರಮದ ಈದ್
Team Udayavani, Dec 2, 2017, 2:17 PM IST
ಸುಳ್ಯ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಸುಳ್ಯ ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಪ್ರಾರ್ಥನಾ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ಜರಗಿತು. ನಗರದ ಜಟ್ಟಿಪಳ್ಳ ಮಸೀದಿಯವರಿಂದ ಕಾಲ್ನಡಿಗೆ ಜಾಥಾ ಜರಗಿತು.
ಕಲಾ ಸಂಭ್ರಮ
ಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸೀದಿ, ಮುನ್ವರುಲ್ ಇಸ್ಲಾಂ ಮದ್ರಸಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರವರ ಜನ್ಮ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿದ ಗಾಂಧಿನಗರ ಸಹಾಯಕ ಖತೀಬರಾದ ಬಹು| ಶೌಕತ್ ಅಲಿ ಅಮಾನಿ ವಯನಾಡ್ ಮಾತನಾಡಿ, ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯನ್ನು ಅನುಸರಿಸಿದರೆ ಮಾತ್ರ ಪರಿಪೂರ್ಣ ಮುಸ್ಲಿಂ ಆಗಲು ಸಾಧ್ಯವಿದೆ. ಇಸ್ಲಾಂ ಕಲಿಸಿದ ಶಾಂತಿ ಸಂದೇಶ ಪ್ರವಾದಿ ಅವರು ತೋರಿಸಿದ ಸೌಹಾರ್ದತೆಯ ಪಥ ಇಂದಿನ ಸಮಾಜದ ಅನಿವಾರ್ಯತೆಯಲ್ಲಿ ಒಂದಾಗಿದೆ ಎಂದರು.
ಗಾಂಧಿನಗರ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುವಾ ನೆರವೇರಿಸಿದರು. ಕೆ. ಎಂ. ಮುಸ್ತಫ ಧ್ವಜಾರೋಹಣ ನೆರವೇರಿಸಿದರು. ಮದ್ರಸ ಉಸ್ತುವಾರಿ ಸಮಿತಿ ಪದಾಧಿಕಾರಿಗಳಾದ ಹಮೀದ್ ಬೀಜಕೊಚ್ಚಿ, ಅಬ್ದುಲ್ ಖಾದರ್ ಹಾಜಿ ಕಲ್ಲಪಳ್ಳಿ, ಮದ್ರಸ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಸದರ್ ಮುಅಲ್ಲಿಂ, ಇಬ್ರಾಂ ಸಖಾಫಿ ಪುಂಡೂರು, ಹಾಜಿ ಎನ್. ಎಂ. ಅಬ್ದುಲ್ ರಮಾನ್ ಕಯ್ನಾರ್, ಜಿ. ಅಬೂಬಕ್ಕರ್, ಅಬ್ದುಲ್ ರಮಾನ್ ಸಅದಿ, ಹಾಜಿ ಕೆ. ಬಿ. ಮಹಮ್ಮದ್. ಕೆ. ಬಿ. ಅಬ್ದುಲ್ ಮಜೀದ್, ಹಾಜಿ ಅಬ್ದುಲ್ ಗಫಾರ್ ಮತ್ತಿತರಿದ್ದರು.
ಸಮಾರೋಪದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ವಹಿಸಿದ್ದರು. ಅನ್ಸಾರಿಯಾ ಯತೀಂ ಖಾನಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ರಾಜ್ಯ ವಕ್ಫ್ ಕೌನ್ಸಿಲ್ ಅಧ್ಯಕ್ಷ ಎಸ್. ಸಂಶುದ್ದೀನ್, ಹಾಜಿ ಅಬ್ಟಾಸ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು. ಸಹಾಯಕ ಸದರ್ ಖಾದರ್ ಉಸ್ತಾದ್ ಅವರು ಸ್ವಾಗತಿಸಿ, ಲತೀಫ್ ಸಖಾಫಿ ಗೂನಡ್ಕ ವಂದಿಸಿದರು. ಜುಮಾ ನಮಾಜಿನ ಅನಂತರ ಮೌಲೂದ್ ಪಾರಾಯಣ, ಅನ್ನದಾನ ನಡೆಯಿತು.
ವಾಹನ ಜಾಥಾ, ಧಾರ್ಮಿಕ ಸಭೆ
ಪುತ್ತೂರು ಡಿ. 1: ಈದ್ ಮಿಲಾದ್ ಹಬ್ಬವನ್ನು ಪುತ್ತೂರು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ ಸೋಮವಾರ ಸಂಜೆ ಈದ್ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಿತು.
ಉಪ್ಪಿನಂಗಡಿ, ಸವಣೂರು, ಮುಕ್ವೆ, ಕೋಡಿಂಬಾಡಿ, ಬಜತ್ತೂರು, ಕಡಬ, ನೆಲ್ಯಾಡಿ, ಆತೂರು ಸೇರಿದಂತೆ ಹಲವಾರು ಕಡೆಗಳಲ್ಲಿ ರ‍್ಯಾಲಿ ನಡೆದವು. ಮಸೀದಿಗಳಲ್ಲಿ ಮಿಲಾದುನ್ನಬೀಯ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.
ಆಯಾ ಮಸೀದಿಗಳಲ್ಲಿ ರ‍್ಯಾಲಿಯ ಬಳಿಕ ಧಾರ್ಮಿಕ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆದವು. ಜಿಲ್ಲಾ ಯುವ ಜನ ಪರಿಷತ್ ಪುತ್ತೂರು ಘಟಕ ಮತ್ತು ಈದ್ ಮಿಲಾದ್ ಪುತ್ತೂರು ವತಿಯಿಂದ ಕಬಕದಿಂದ ಪುತ್ತೂರು ತನಕ ವಾಹನ ಜಾಥಾ ಸಾಗಿ ಅನಂತರ ಕಿಲ್ಲೆ ಮೈದಾನದಲ್ಲಿ ಧಾರ್ಮಿಕ ಸಭೆ ನಡೆಯಿತು.
ಮೌಲೂದ್ ಪಾರಾಯಣ
ಎಲ್ಲ ಮಸೀದಿಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೌಲೂದ್ ಪಾರಾಯಣ ಮುಸ್ಲಿಂ ಧರ್ಮಗುರುಗಳಿಂದ ನಡೆಸಲ್ಪಟ್ಟಿತು. ಮಿಲಾದುನ್ನಬಿ ಆಚರಣೆಯಲ್ಲಿ ಮೌಲೂದ್ ಪಾರಾಯಣದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಮೌಲೂದ್ ಪಾರಾಯಣ ಎಂದರೆ ಪ್ರವಾದಿಯವರ ಹಿರಿಮೆಯನ್ನು ಕೊಂಡಾಡುವ ಕಾರ್ಯಕ್ರಮ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.