ದ.ಕ.: ಒಂದೇ ದಿನ ಎಂಟು ಸಾವು; 139 ಮಂದಿಗೆ ಕೋವಿಡ್ ಸೋಂಕು; 51 ಮಂದಿ ಗುಣಮುಖ

Team Udayavani, Jul 11, 2020, 6:05 AM IST

ದ.ಕ.: ಒಂದೇ ದಿನ ಎಂಟು ಸಾವು; 139 ಮಂದಿಗೆ ಕೋವಿಡ್ ಸೋಂಕು; 51 ಮಂದಿ ಗುಣಮುಖ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ 19 ಸೋಂಕಿನಿಂದ ಎಂಟು ಮಂದಿ ಮೃತಪಟ್ಟಿದ್ದಾರೆ.

ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಇದೇ ಮೊದಲು.

ಲಿವರ್‌ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿ ಜು. 8ರಂದು, ಅಧಿಕ ತೂಕ, ಒಬೆಸಿಟಿಯಿಂದ ಬಳಲುತ್ತಿದ್ದ ಹೊಸಬೆಟ್ಟುವಿನ 35 ವರ್ಷದ ವ್ಯಕ್ತಿ, ಮೂತ್ರಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ 67 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ 57 ವರ್ಷದ ವ್ಯಕ್ತಿ, ನಂಜು, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ಜು. 9 ರಂದು ಮೃತಪಟ್ಟಿದ್ದಾರೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ 48 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ 58 ವರ್ಷದ ಮಹಿಳೆ ಶುಕ್ರವಾರ ಮೃತಪಟ್ಟವರು. ಆದರೆ, ಸಾವಿನ ನಿಖರ ಕಾರಣ ನಿರ್ಧರಿಸಲು ತಜ್ಞರ ಸಮಿತಿಯಿಂದ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

139 ಮಂದಿಗೆ ಕೋವಿಡ್ 19 ಸೋಂಕು
ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 139 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬೆಳ್ತಂಗಡಿ: ಐದು ಪಾಸಿಟಿವ್‌ ಪ್ರಕರಣ
ತಾಲೂಕಿನಲ್ಲಿ ಶುಕ್ರವಾರ ಐದು ಕೋವಿಡ್‌ ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ. ಗುಂಡೂರಿ ಗ್ರಾಮದ 27 ವರ್ಷದ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಂದಿದೆ. ಇದೇ ಗ್ರಾಮದ 10 ವರ್ಷದ ಬಾಲಕನಿಗೆ ತಂದೆಯ ಸಂಪರ್ಕದಿಂದ ಪಾಸಿಟಿವ್‌ ದೃಢಪಟ್ಟಿದೆ. ಕುವೆಟ್ಟು ಗ್ರಾಮದ (59) ವ್ಯಕ್ತಿ ಆಶಾ ರ್ಕಾಕರ್ತೆ ಪತಿ ಹಾಗೂ ಪಡಂಗಡಿ ಗ್ರಾಮದ (57)ದ ಮಹಿಳೆ ಹಾಗೂ ಲಾೖಲ ರಾಘವೇಂದ್ರ ಮಠದ ನಿವಾಸಿಗೆ (65) ಸೋಂಕು ದೃಢಪಟ್ಟಿದೆ.

ಪಡುಪಣಂಬೂರು: ವೃದ್ಧೆಗೆ ಕೋವಿಡ್ 19 ಸೋಂಕು
ಇಲ್ಲಿನ ಪಡುಪಣಂಬೂರು ಗ್ರಾ. ಪಂ. ವ್ಯಾಪ್ತಿಯ ಬಸದಿ ಬಳಿಯಲ್ಲಿ 64 ವರ್ಷದ ವೃದ್ಧೆಗೆ ಕೋವಿಡ್ 19 ಪಾಸಿಟಿವ್‌ ಕಂಡು ಬಂದಿದೆ. ಪತಿಯೊಂದಿಗೆ ವಾಸಿಸುತ್ತಿರುವ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ತೆರಳಿ ಪರೀಕ್ಷೆ  ಮಾಡಿಸಿದಾಗ ಈ ಸೋಂಕು ಪತ್ತೆಯಾಗಿದೆ. ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸುಳ್ಯ: ನರ್ಸ್‌ನ 2ನೇ ವರದಿಯಲ್ಲಿ ನೆಗೆಟಿವ್‌
ಸುಳ್ಯ ಸರಕಾರಿ ಆಸ್ಪತ್ರೆಯ ಸಿಬಂದಿ, ಕಡಬದ 102 ನೆಕ್ಕಿಲಾಡಿ ನಿವಾಸಿಗೆ ಕಳೆದ ವಾರ ಕೋವಿಡ್ 19 ಪಾಸಿಟಿವ್‌ ಬಂದಿದ್ದು, ಇದೀಗ ಎರಡನೇ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ.

ಉಳ್ಳಾಲ: 20 ಮಂದಿಗೆ ಸೋಂಕು
ಉಳ್ಳಾಲದಲ್ಲಿ ಇಂದು ಮೂವರ ಸಹಿತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು 20 ಪ್ರಕರಣಗಳು ದೃಢವಾಗಿದೆ. ಮಾಸ್ತಿಕಟ್ಟೆ, ಉಳ್ಳಾಲ ಬಸ್ತಿಪಡ್ಪು, ಕೋಟೆಕಾರು ಪಟ್ಟಣ ಪಂಚಾಯತ್‌, ಮಾಡೂರು, ಕೋಟೆಕಾರು ಜಂಕ್ಷನ್‌, ಸೋಮೇಶ್ವರ ಉಚ್ಚಿಲ, ಕೋಣಾಜೆ, ಮುನ್ನೂ ಸಂತೋಷ್‌ ನಗರದ ವ್ಯಾಪ್ತಿಯಲ್ಲೂ ಕೋವಿಡ್ 19 ಸೋಂಕು ಹರಡಿದೆ. ಸೋಂಕಿತರಲ್ಲಿ ಒಂದು ವರ್ಷದ ಮಗು ಕೂಡ ಸೇರಿದೆ.

ಉಳ್ಳಾಲದಲ್ಲಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

ಎಕ್ಕಾರು: ಓರ್ವ ವ್ಯಕ್ತಿಗೆ ಸೋಂಕು
ಎಕ್ಕಾರು ದುರ್ಗಾನಗರದಲ್ಲಿ ಮಹಾರಾಷ್ಟ್ರ ದಿಂದ ಬಂದ 62 ವರ್ಷದ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್‌ ವರದಿ ಬಂದಿದೆ. ಕಳೆದ ರವಿವಾರ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ಅವರು 3 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಆ ಬಳಿಕ ಸರಕಾರದ ಅದೇಶದಂತೆ ಹೋಂ ಕ್ವಾರಂಟೈನ್‌ನಲ್ಲಿದ್ದರು. ಜು.7ರಂದು ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರತ್ಕಲ್‌: ಇಬ್ಬರು ಸಾವು
ಕೋವಿಡ್ 19 ಸೋಂಕಿನಿಂದ ಶುಕ್ರವಾರ ಸುರತ್ಕಲ್‌ ವ್ಯಾಪ್ತಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹೊಸಬೆಟ್ಟು ನಿವಾಸಿ, ಕಲಾವಿದರೂ ಆಗಿದ್ದ ವ್ಯಕ್ತಿ ಮತ್ತು ಸಿಐಎಸ್‌ಎಫ್‌ ಯೋಧ ಮೃತ‌ಪಟ್ಟಿದ್ದಾರೆ. ಉಳಿದಂತೆ ಸುರತ್ಕಲ್‌ ಕಾವೂರು ವ್ಯಾಪ್ತಿಯಲ್ಲಿ ಒಟ್ಟು 9 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಕಾವೂರಿನಲ್ಲಿ ಮೂರು, ಕೆಐಒಸಿಎಲ್‌ ಒಂದು, ಕಾಟಿಪಳ್ಳ ಎರಡು, ಕೃಷ್ಣಾಪುರ ಮತ್ತು ಸಿಐಎಸ್‌ಎಫ್‌ ಯೂನಿಟ್‌ನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

9ನೇ ಯೋಧ
ಕೂಡಗು ನಿವಾಸಿಯಾಗಿರುವ ಸಿಐಎಸ್‌ಎಫ್ ಯೋಧ ಅವರು ಕೋವಿಡ್‌-19ರಿಂದ ಮೃತಪಟ್ಟ 9ನೇ ಸಿಐಎಸ್‌ಎಫ್ ಯೋಧರಾಗಿದ್ದಾರೆ. ದೇಶಾದ್ಯಂತ 1,137 ಸಿಐಎಸ್‌ಎಫ್ ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದು ಸದ್ಯ 410 ಮಂದಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 20 ಯೋಧರಿಗೆ ಸೋಂಕು ತಗಲಿದೆ. ಕಳೆದ 24 ತಾಸುಗಳ ಅವಧಿಯಲ್ಲಿ 22 ಮಂದಿ ಚೇತರಿಸಿಕೊಂಡಿದ್ದಾರೆ.

ಪುತ್ತೂರು: ಮೂವರಿಗೆ ಪಾಸಿಟಿವ್‌
ನಗರಸಭಾ ವ್ಯಾಪ್ತಿಯ ಚಿಕ್ಕಮುಟ್ನೂರು ಗ್ರಾಮದ 69 ವರ್ಷದ ವೃದ್ಧರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇವರು ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇವರ ಗಂಟಲ ದ್ರವ ಪರೀಕ್ಷಾ ವರದಿ ಶುಕ್ರವಾರ ಪಾಸಿಟಿವ್‌ ಬಂದಿದೆ.

ರೈಲ್ವೇ ಸಿಬಂದಿಗೆ ಸೋಂಕು
ಹದಿನೈದು ದಿನಗಳ ಹಿಂದೆ ಬಿಹಾರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ನೆಟ್ಟಣ ರೈಲ್ವೇ ಸಿಬಂದಿಗೆ ಕೋವಿಡ್ 19 ಸೋಂಕು ಪಾಸಿಟಿವ್‌ ಬಂದಿದೆ, ಈ ಹಿನ್ನೆಲೆಯಲ್ಲಿ ರೈಲ್ವೇ ವಸತಿ ಗೃಹ, ಅವರು ಭೇಟಿ ನೀಡಿದ್ದ ನೆಟ್ಟಣದ ಅಂಗಡಿಯೊಂದನ್ನು ಸೀಲ್‌ಡೌನ್‌ ಮಾಡಲಾಗಿದೆ. 22 ವರ್ಷದ ಯುವಕ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದರು, ಬಳಿಕ ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.