ವಿದ್ಯುದ್ದೀಕೃತ ಮಾರ್ಗದಲ್ಲಿ ಎಂಟು ರೈಲುಗಳ ಸಂಚಾರ
Team Udayavani, Dec 17, 2022, 5:30 AM IST
ಮಂಗಳೂರು: ಕೊಂಕಣ ಮಾರ್ಗದಲ್ಲಿ ಮತ್ಸ್ಯಗಂಧ ಡೈಲಿ ಎಕ್ಸ್‌ಪ್ರೆಸ್ ಸಹಿತ ಎಂಟು ರೈಲುಗಳು ವಿವಿಧ ದಿನಗಳಲ್ಲಿ ಎಲೆಕ್ಟ್ರಿಕ್ ಎಂಜಿನ್‌ನಲ್ಲಿ ಸಂಚಾರ ಆರಂಭಿಸುವ ದಿನಗಳನ್ನು ಪ್ರಕಟಿಸಲಾಗಿದೆ.
ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಡೈಲಿ ಎಕ್ಸ್‌ಪ್ರೆಸ್ (12620) ಡಿ. 18ರಿಂದ, ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಡೈಲಿ ಎಕ್ಸ್ ಪ್ರಸ್ (12619) ಡಿ. 19ರಿಂದ, ತಿರುವನಂತಪುರ ಸೆಂಟ್ರಲ್- ಎಚ್. ನಿಜಾಮುದ್ದೀನ್ ಸಾಪ್ತಾಹಿಕ ಸ್ಪೆಷಲ್ (22653) ಡಿ. 17ರಿಂದ, ಎಚ್. ನಿಜಾಮುದ್ದೀನ್- ತಿರುವನಂತಪುರ ಸೆಂಟ್ರಲ್ ಸಾಪ್ತಾಹಿಕ ಸ್ಪೆಷಲ್ (22654) ಡಿ. 19ರಿಂದ, ತಿರುವನಂತಪುರ ಸೆಂಟ್ರಲ್- ಎಚ್. ನಿಜಾಮುದ್ದೀನ್ ಸಾಪ್ತಾಹಿಕ ಸ್ಪೆಷಲ್ (22633) ಡಿ. 21ರಿಂದ, ಎಚ್. ನಿಜಾಮುದ್ದೀನ್- ತಿರುವನಂತಪುರ ಸಾಪ್ತಾಹಿಕ ಸ್ಪೆಷಲ್ (22634) ಡಿ. 23ರಿಂದ, ಕೊಚ್ಚುವೇಲಿ – ಯೋಗ್ ನಗರಿ ಹೃಷಿಕೇಶ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (22659) ಡಿ. 23ರಿಂದ ಮತ್ತು ಯೋಗ್ ನಗರಿ ಹೃಷಿಕೇಶ್- ಕೊಚ್ಚುವೇಲಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (22660) ಡಿ. 26ರಿಂದ ಎಲೆಕ್ಟ್ರಿಕ್ ಎಂಜಿನ್‌ನಲ್ಲಿ ಸಂಚಾರ ಆರಂಭಿಸಲಿವೆ.
ಕೊಂಕಣ ಮಾರ್ಗದಲ್ಲಿ ಇದೀಗ ಹಂಹಂತವಾಗಿ ವಿದ್ಯುದ್ದೀಕೃತ ಮಾರ್ಗಕ್ಕೆ ಬದಲಾಯಿಸುವ ಪ್ರಕ್ರಿಯೆ ಮುಂದುವರಿಯುತ್ತಿದೆ.