ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳ ಲೈವ್ ಭರಾಟೆ
Team Udayavani, Apr 28, 2018, 8:00 AM IST
ಮಂಗಳೂರು: ಎಲ್ಲ ವಯೋಮಾನದವರು ಈಗ ಸಾಮಾಜಿಕ ಜಾಲತಾಣಗಳಿಗೆ ಒಗ್ಗಿಕೊಂಡಿದ್ದಾರೆ. ಅದರಲ್ಲೂ ಸಿನೆಮಾ ತಾರೆಯರು, ಕ್ರಿಕೆಟ್ ಆಟಗಾರರು, ರಾಜಕೀಯ ನೇತಾರರು ಫೇಸ್ ಬುಕ್, ಟ್ವಿಟರ್, ಇನ್‌ಸ್ಟ್ರಾಗ್ರಾಂ ಮೂಲಕ ಜನರನ್ನು ತಲುಪುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ. ಯುವ ಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆ ಎಂಬುದನ್ನು ಅರಿತುಕೊಂಡ ರಾಜಕಾರಣಿಗಳು ಫೇಸ್ ಬುಕ್ ಲೈವ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚುನಾವಣೆಗೆ ಕೆಲವೇ ದಿನಗಳಿರಬೇಕಾದರೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಫೇಸ್ ಬುಕ್ ಪೇಜ್ ತೆರೆದು ಜನರಲ್ಲಿ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಇದರೊಂದಿಗೆ ಫೇಸ್ ಬುಕ್‌ಗಳಲ್ಲಿ ಲೈವ್ ಬಂದು ತಾನು ಮಾಡಿದ ಅಭಿವೃದ್ಧಿ ಕೆಲಸಗಳು, ಭರವಸೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ಮಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ, ಉತ್ತರ ಅಭ್ಯರ್ಥಿ ಮೊದಿನ್ ಬಾವಾ, ಮಂಗಳೂರು ದಕ್ಷಿಣ ಸಿಪಿಐಎಂ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್, ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಸೇರಿದಂತೆ ಹಲವು ಪ್ರಮುಖರು ಫೇಸ್ ಬುಕ್ ನಲ್ಲಿ ಲೈವ್ ಆಗಿ ತಮ್ಮ ಅಭಿವೃದ್ಧಿ ಕೆಲಸ, ಯೋಜನೆಗಳ ಬಗ್ಗೆ ವಿಸ್ತೃತವಾಗಿ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಯುವ ಜನಾಂಗವನ್ನು ಮತದಾನ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಮಾಡಲು ಚು.ಆಯೋಗ ಹಲವು ಯೋಜನೆ ರೂಪಿಸುತ್ತಿದೆ. ಈ ನಡುವೆ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತಯಾಚಿಸುತ್ತಿರುವುದು ವಿಶೇಷವಾಗಿದೆ.
ಜಿಲ್ಲೆಯಾದ್ಯಂತ ಸಂಚರಿಸುತ್ತಿದೆ ಬಿಜೆಪಿ ಎಲ್.ಇ.ಡಿ. ಪ್ರಚಾರ ವಾಹನ ; ಕಾಂಗ್ರೆಸ್ ಇನ್ನೂ ಆರಂಭಿಸಿಲ್ಲ ಎಲ್‌ಇಡಿ ಪ್ರಚಾರ
ಮಂಗಳೂರು: ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ಎಲ್‌ಇಡಿ ಪ್ರಚಾರ ವಾಹನ ಮೂಲಕ ಮತದಾರರರನ್ನು ಸೆಳೆಯಲು ರಣತಂತ್ರ ಹೂಡಿದರೆ, ಕಾಂಗ್ರೆಸ್‌ನಲ್ಲಿ ಬಿ. ರಮಾನಾಥ ರೈ, ಶಾಸಕ ಮೊದಿನ್ ಬಾವಾ ಅವರ ಖಾಸಗಿ ಪ್ರಚಾರ ವಾಹನವನ್ನು ಹೊರತುಪಡಿಸಿದರೆ ಇನ್ಯಾವುದೇ ಪ್ರಚಾರ ವಾಹನ ಜಿಲ್ಲೆಯಲ್ಲಿ ಓಡಾಟ ಆರಂಭಿಸಿಲ್ಲ.
ಬಿಜೆಪಿ ಉತ್ತರ ಪ್ರದೇಶ, ಗುಜರಾತ್ ಚುನಾವಣೆಯಲ್ಲಿ ಬಳಿಸಿದ್ದ ಎಲ್.ಇ.ಡಿ. ಪ್ರಚಾರ ವಾಹನಗಳನ್ನು ರಾಜ್ಯದಲ್ಲಿ ಬಳಸುತ್ತಿದೆೆ. ಪ್ರಸ್ತುತಜಿಲ್ಲೆಯಲ್ಲಿ ಮೂರು ಎಲ್.ಇ.ಡಿ. ಪ್ರಚಾರ ವಾಹನಗಳು ಕಾರ್ಯಾಚರಿಸುತ್ತಿದ್ದು, ಇನ್ನೊಂದು ವಾಹನ ಇನ್ನೂ ಕೆಲವೇ ದಿನಗಳಲ್ಲಿ ಜಿಲ್ಲೆಗೆ ಆಗಮಿಸಲಿದೆ.
ಕಾಂಗ್ರೆಸ್ ಎಲ್.ಇ.ಡಿ. ಪ್ರಚಾರ ವಾಹನ ಇನ್ನೂ ಬಂದಿಲ್ಲ
ಕಾಂಗ್ರೆಸ್ ಸಚಿವ ಬಿ. ರಮಾನಾಥ ರೈ ಹಾಗೂ ಶಾಸಕ ಮೊದಿನ್ ಬಾವಾ ಅವರ ಖಾಸಗಿ ವಾಹನಗಳಷ್ಟೇ ಪ್ರಚಾರ ಕಾರ್ಯ ಆರಂಭಿಸಿದ್ದು, ಪಕ್ಷದಿಂದ ಎಲ್‌ಇಡಿ ಪ್ರಚಾರ ವಾಹನ ಇನ್ನೂ ಜಿಲ್ಲೆಗೆ ಬಂದಿಲ್ಲ. ‘ಪಕ್ಷದ ಎಲ್ಲ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾದ ಬಳಿಕ ಪ್ರಚಾರ ವಾಹನಗಳು ಬರುವ ಸಾಧ್ಯತೆ ಇದೆ. ಪ್ರಸ್ತುತ ಸಚಿವ ಬಿ. ರಮಾನಾಥ ರೈ ಹಾಗೂ ಶಾಸಕ ಮೊದಿನ್ ಬಾವಾ ಅವರ ಖಾಸಗಿ ವಾಹನಗಳಷ್ಟೇ ಪ್ರಚಾರ ಕಾರ್ಯ ನಡೆಸುತ್ತಿವೆ’ ಎಂದು ಕಾಂಗ್ರೆಸ್‌ನ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ³ಂಗಾಯ ತಿಳಿಸಿದ್ದಾರೆ.
ಬಿಜೆಪಿ ಎಲ್.ಇ.ಡಿ. ವಾಹನ ವಿಧಾನಸಭಾ ಕ್ಷೇತ್ರಗಳ ಮೂಲೆ ಮೂಲೆಗಳಿಗೆ ತೆರಳಿ ಮತದಾನ, ಬಿಜೆಪಿ ಸಾಧನೆ, ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಕುರಿತಾಗಿ ಪ್ರಚಾರ ನಡೆಸುತ್ತಿವೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿ ಅಜೆಂಡಾ, ಪಕ್ಷದ ಅಭ್ಯರ್ಥಿ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಿವೆ.
ದೊಡ್ಡ ವಾಹನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2 ದಿನ ಸಂಚಾರ ನಡೆಸಲಿದೆ. ಅಲ್ಲಲ್ಲಿ 45 ನಿಮಿಷಗಳ ಕಾಲ ವಾಹನ ನಿಲ್ಲಿಸಿ ಬಿಜೆಪಿ ಯೋಜನೆಗಳ ಬಗ್ಗೆ ತಿಳಿಸಲಿದೆ.ಇನ್ನೂ ಪ್ರತಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ಸಣ್ಣ ವಾಹನಗಳು ಪ್ರಚಾರ ಕಾರ್ಯ ನಡೆಸುತ್ತಿವೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಿನ 15 ನಿಮಿಷಗಳ ಕಾಲ 14 ಕಡೆಗಳಲ್ಲಿ ಪ್ರಚಾರ ನಡೆಸುತ್ತಿವೆ. ಒಬ್ಬ ವಾಹನ ಚಾಲಕ ಮತ್ತು ಒಬ್ಬ ಪ್ರಚಾರ ನಿರ್ವಾಹಕ ವಾಹನದಲ್ಲಿ ಇರುತ್ತಾರೆ ಎಂದು ಎಲ್.ಇ.ಡಿ. ವಾಹನ ಪ್ರಚಾರದ ಜಿಲ್ಲಾ ಪ್ರಮುಖ್ ಹರೀಶ್ ಮೂಡುಶೆಡ್ಡೆ ತಿಳಿಸಿದ್ದಾರೆ.
— ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್ ವ್ಯಾಪಾರಿಗಳ ಘೋಷಣೆ
SC: ಲಾಟರಿ ಕಿಂಗ್ ಮಾರ್ಟಿನ್ ಕೇಸ್: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್ ತಡೆ
Malayalam ಕಥೆಗಾರ, ಸಾಹಿತಿ ವಾಸುದೇವನ್ ನಾಯರ್ ವಿಧಿವಶ
Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.