ಸಕ್ಕಿಂಗ್ ಯಂತ್ರ ರಿಪೇರಿಗೂ ನೀತಿ ಸಂಹಿತೆ ಅಡ್ಡಿ
Team Udayavani, Apr 30, 2018, 8:20 AM IST
ನಗರ: ನಗರಸಭೆಯ ಸಕ್ಕಿಂಗ್ ಯಂತ್ರ ಹತ್ತು ದಿನಗಳಿಂದ ಕೆಟ್ಟು ನಿಂತಿದೆ. ಇದರ ರಿಪೇರಿಗೆ ಮುಂದಾದರೆ ಚುನಾವಣಾ ನೀತಿ ಸಂಹಿತೆ ಅಡ್ಡಿ. ಚುನಾವಣೆ ಮುಗಿಯುವವರೆಗೆ ಕಾಯುವ ಪರಿಸ್ಥಿತಿ ಈಗಿಲ್ಲ. ಏಕೆಂದರೆ, ಹಲವಾರು ಕಡೆಗಳಿಂದ ಟಾಯ್ಲೆಟ್ ಹೊಂಡ ಖಾಲಿ ಮಾಡಲು ಅರ್ಜಿಗಳು ಬರುತ್ತಿವೆ. ಅತಿ ಅಗತ್ಯ ಕೆಲಸಗಳಿಗೂ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತಿದೆೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಒಂದಷ್ಟು ಸಡಿಲಿಕೆ ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆೆ. ಇದಕ್ಕೆ ಸಕ್ಕಿಂಗ್ ಯಂತ್ರವೂ ಹೊರತಾಗಿಲ್ಲ. ಯಂತ್ರ ರಿಪೇರಿಗೆ ಟೆಂಡರ್ ಆಹ್ವಾನಿಸುವುದು ಅನಿವಾರ್ಯ. ಹೀಗೆ ಟೆಂಡರ್ ಕರೆಯಲು ನೀತಿ ಸಂಹಿತೆ ಇರುವಾಗ ಸಾಧ್ಯವೇ ಇಲ್ಲ. ಇದಕ್ಕೆ ಪರಿಹಾರ ಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಗರಸಭೆಯ ಸಕ್ಕಿಂಗ್ ಯಂತ್ರ ದಿನದ ಎಂಟು ಗಂಟೆ ಕೆಲಸ ಮಾಡುತ್ತದೆ. ಈ ಅವಧಿಯಲ್ಲಿ ನಾಲ್ಕಕ್ಕೂ ಹೆಚ್ಚು ಟಾಯ್ಲೆಟ್ ಹೊಂಡಗಳನ್ನು ಖಾಲಿ ಮಾಡುತ್ತದೆ. ಇಷ್ಟು ಕೆಲಸವಿರುವ ಸಕ್ಕಿಂಗ್ ಯಂತ್ರ ಹಠಾತ್ತಾಗಿ ಕೆಟ್ಟು ನಿಂತರೆ ಪರಿಸ್ಥಿತಿ ಹೇಗಿರಬೇಡ? ಇಂತಹ ಸ್ಥಿತಿ ಪುತ್ತೂರಿನಲ್ಲಿ ನಿರ್ಮಾಣವಾಗಿದೆ.
ಮನುಷ್ಯರ ಮೂಲಕ ಟಾಯ್ಲೆಟ್ ಹೊಂಡ ಶುಚಿ ಮಾಡುವ ಕೆಲಸಕ್ಕೆ ನಿರ್ಬಂಧ ಹೇರಿದ ಬಳಿಕ, ಸಕ್ಕಿಂಗ್ ಯಂತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಯ ಯಂತ್ರವನ್ನು ಪಟ್ಟಣಕ್ಕೆ ಮಾತ್ರ ಸೀಮಿತ ಮಾಡಿಲ್ಲ. ತನ್ನ ವ್ಯಾಪ್ತಿಯಾಚೆಗೆ ಇರುವ ಗ್ರಾಮಾಂತರ ಭಾಗದಿಂದ ಬರುವ ಕರೆಗಳಿಗೂ ಸ್ಪಂದಿಸುತ್ತಿದೆ. ಕುಂಬ್ರ, ವಿಟ್ಲ, ನರಿಮೊಗರು ಭಾಗಗಳ ಟಾಯ್ಲೆಟ್ ಹೊಂಡಗಳನ್ನೂ ಶುಚಿ ಮಾಡಿಸುತ್ತಿದೆ. ಇದೀಗ ಇಷ್ಟು ಕಡೆಯ ಟಾಯ್ಲೆಟ್ ಹೊಂಡಗಳು ತುಂಬಿವೆ. ತೆರವಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆ ಅಥವಾ ಸಾರ್ವಜನಿಕ ಶೌಚಾಲಯಗಳ ಸುತ್ತ ಮುತ್ತಲಿನ ಜನರು ಮೂಗು ಮುಚ್ಚಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ತಾ.ಪಂ.ನಲ್ಲೂ ಇದೆ
ವರ್ಷಗಳ ಹಿಂದೆ ನಗರಸಭೆಯ ಸಕ್ಕಿಂಗ್ ಯಂತ್ರ ಕೆಟ್ಟು ನಿಂತಿತ್ತು. ಆಗ ತಾಲೂಕು ಪಂಚಾಯತ್‌ನ ಸಕ್ಕಿಂಗ್ ಯಂತ್ರವನ್ನು ಎರವಲು ಪಡೆದುಕೊಳ್ಳಲಾಗಿತ್ತು. ಪುತ್ತೂರು ನಗರಸಭೆಯ ಇಂತಹ ತ್ಯಾಜ್ಯವನ್ನು ಬನ್ನೂರಿನ ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತದೆ. ಆದರೆ ತಾಲೂಕು ಪಂಚಾಯತ್ ಗೆ ಪ್ರತ್ಯೇಕ ಡಂಪಿಂಗ್ ಯಾರ್ಡ್ ಇಲ್ಲದೆ, ಕಳೆದ ಕೆಲ ವರ್ಷಗಳಿಂದ ಸಕ್ಕಿಂಗ್ ಯಂತ್ರ ತುಕ್ಕು ಹಿಡಿಯುತ್ತಾ ಬಿದ್ದಿದೆ. ಇದೀಗ ತಾಲೂಕು ಪಂಚಾಯತ್‌ನ ಸಕ್ಕಿಂಗ್ ಯಂತ್ರ ಕೆಟ್ಟು ನಿಂತಿದೆ. ಆದ್ದರಿಂದ ನಗರಸಭೆ ಈ ಬಾರಿ ಎರವಲು ಪಡೆಯಲು ಸಾಧ್ಯವಿಲ್ಲ.
ಪರ್ಯಾಯ ಏನು?
ತಾಲೂಕು ಚುನಾವಣಾಧಿಕಾರಿ ಆಗಿರುವ ಸಹಾಯಕ ಆಯುಕ್ತರ ಅನುಮತಿ ಪಡೆದುಕೊಂಡು, ಸಕ್ಕಿಂಗ್ ಯಂತ್ರ ರಿಪೇರಿಗೆ ಮುಂದಾಗಬಹುದು. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರಿಗೆ ನಗರಸಭೆ ಪತ್ರ ಬರೆದಿದ್ದು, ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ. ಇದೀಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಪತ್ರ ಬರೆಯಲಾಗಿದೆ. ಯಾವಾಗ ಉತ್ತರ ಬರುತ್ತದೋ ಯಾವಾಗ ಟೆಂಡರ್ ಆಹ್ವಾನಿಸುತ್ತಾರೋ ಯಾವಾಗ ತುಂಬಿರುವ ಟಾಯ್ಲೆಟ್‌ಗಳು ಶುಚಿ ಆಗುತ್ತವೋ ಒಂದೂ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಚುನಾವಣೆ ಮುಗಿದಿದ್ದರೆ, ಮತ್ತೆ ಈ ಅನುಮತಿಗಳ ಆವಶ್ಯಕತೆಯೇ ಇರುವುದಿಲ್ಲ.
ತುರ್ತು ಕೆಲಸಕ್ಕೆ ಅಡ್ಡಿಯಿಲ್ಲ
ತುರ್ತು ಕೆಲಸಗಳಿಗೆ ಟೆಂಡರ್ ಕರೆಯಲು ಅನುಮತಿ ನೀಡಲಾಗುವುದು. ನಗರಸಭೆಯಿಂದ ಪತ್ರ ಬಂದ ಕೂಡಲೇ ವ್ಯವಸ್ಥೆ ಮಾಡುತ್ತೇನೆ. ಚುನಾವಣಾ ನೀತಿ ಸಂಹಿತೆ ತುರ್ತು ಕೆಲಸಗಳಿಗೆ ಅಡ್ಡಿ ಉಂಟು ಮಾಡುವುದಿಲ್ಲ. ಆದರೆ ಅದಕ್ಕೆ ಮೊದಲು ಜಿಲ್ಲಾಧಿಕಾರಿ ಅನುಮತಿ ಪಡೆದುಕೊಳ್ಳಬೇಕೆಂಬ ನಿಯಮವಿದೆ.
– ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ.
— ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.