ಚುನಾವಣೆ ನಿರೀಕ್ಷಿಸುತ್ತಿದೆ ಬೆಳ್ತಂಗಡಿ ಪ.ಪಂ
Team Udayavani, Oct 1, 2018, 11:08 AM IST
ಬೆಳ್ತಂಗಡಿ: ದ.ಕ.ಜಿಲ್ಲೆಯಲ್ಲಿ ಒಂದು ಹಂತದಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪೂರ್ತಿಗೊಂಡಿದ್ದು, ಅವಧಿ ಮುಗಿದಿರುವ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ ಸೆ. 10ಕ್ಕೆ ಬೆಳ್ತಂಗಡಿ ಪ.ಪಂ.ನ ಹಿಂದಿನ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು, ಚುನಾವಣೆ ನಿರೀಕ್ಷೆಯಲ್ಲಿದೆ.
ಈಗಾಗಲೇ ಪ.ಪಂ.ನ 11 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು, ನವೆಂಬರ್ -ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದಿನ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಯಾಗಿ ದ.ಕ.ಜಿಲ್ಲಾಧಿಕಾರಿ ನೇಮಕಗೊಳಿಸಿ, ಆದೇಶ ನೀಡಿದ್ದಾರೆ.
ಕಾಂಗ್ರೆಸ್ 8; ಬಿಜೆಪಿ 3
ಈ ಹಿಂದೆ ಪ.ಪಂ.ನಲ್ಲಿ ಕಾಂಗ್ರೆಸ್ 8, ಬಿಜೆಪಿ 3 ಸ್ಥಾನಗಳನ್ನು ಹೊಂದಿ, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಳಿಕ ಓರ್ವ ಕಾಂಗ್ರೆಸ್ ಸದಸ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ತಮ್ಮ ಅಧಿಕಾರ ಮುಗಿದ ಬಳಿಕ ಪಂ.ನ ಅಧ್ಯಕ್ಷರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್-ಬಿಜೆಪಿ ಜತೆಗೆ ಜೆಡಿಎಸ್, ಎಸ್‌ಡಿಪಿಐ ಕೂಡ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಎಸ್‌ಡಿಪಿಐನ ಬಂಟ್ವಾಳಮ ಉಳ್ಳಾಲದಲ್ಲಿ ಹೆಚ್ಚಿನ ಸ್ಥಾನ ಪಡೆದಿರುವ ಕಾರಣ ಅವರ ಉತ್ಸಾಹವನ್ನೂ ಹೆಚ್ಚಿಸಿದ್ದು, ಇಲ್ಲೂ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಎಲ್ಲ ಪಕ್ಷಗಳ ಒಳಗೊಳಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಲವು ಆಕಾಂಕ್ಷಿಗಳು ಲಾಬಿಯನ್ನೂ ಆರಂಭಿಸಿ ದ್ದಾರೆ. ಕೊನೆ ಹಂತದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಳಗೊಂಡು, ಅತೃಪ್ತರು ಬಂಡಾಯವಾಗಿ ಸ್ಪರ್ಧಿಸಿದರೆ, ಲೆಕ್ಕಾಚಾರಗಳು ಬುಡ ಮೇಲಾಗುವ ಸಾಧ್ಯತೆಯೂ ಇದೆ.
ನಿಕಟಪೂರ್ವ ಅಧ್ಯಕ್ಷರ ರಾಜೀನಾಮೆ
ಪಂ.ನ ನಿಕಟಪೂರ್ವ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಂದಾಳು ಮುಗುಳಿ ನಾರಾಯಣ ರಾವ್ ಅವರು ಕಾಂಗ್ರೆಸ್‌ನ ಪ್ರಾಥ ಮಿಕ ಸದಸ್ಯತ್ವ, ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದರೂ ಪಕ್ಷೇತರರಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇವರ ಜತೆ ಮತ್ತೆ ಮಾತುಕತೆ ನಡೆಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಇತ್ತೀಚೆಗೆ ಬೆಳ್ತಂಗಡಿಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ತಿಳಿಸಿದ್ದಾರೆ.
ಮೀಸಲಾತಿ ಹೀಗಿದೆ
ಬೆಳ್ತಂಗಡಿ ವಾರ್ಡ್ ನಂ. 1 – ಹಿಂ.ವ. (ಎ) ಮಹಿಳೆ, ವಾರ್ಡ್ ನಂ. 2-ಪ.ಜಾ., ವಾರ್ಡ್ ನಂ. 3 – ಸಾಮಾನ್ಯ, ವಾರ್ಡ್ ನಂ. 4 – ಸಾಮಾನ್ಯ ಮಹಿಳೆ, ವಾರ್ಡ್ ನಂ. 5 – ಸಾಮಾನ್ಯ, ವಾರ್ಡ್ ನಂ. 6 – ಸಾಮಾನ್ಯ ಮಹಿಳೆ, ವಾರ್ಡ್ ನಂ. 7 – ಪ.ಪಂ., ವಾರ್ಡ್ ನಂ. 8 – ಹಿಂ.ವ. (ಎ), ವಾರ್ಡ್ ನಂ. 9 – ಸಾಮಾನ್ಯ ಮಹಿಳೆ, ವಾರ್ಡ್ ನಂ. 10 – ಪ.ಜಾ. ಮಹಿಳೆ, ವಾರ್ಡ್ ನಂ. 11 – ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಅಭಿವೃದ್ಧಿಗೆ ಅಡ್ಡಿಯಿಲ್ಲ
ಮುಂದಿನ ತಿಂಗಳು ಚುನಾವಣೆ ಘೋಷಣೆಯಾಗಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚುನಾವಣೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದಂತೆ ಕೆಲಸ ಮಾಡಲಾಗುತ್ತಿದೆ.
– ಮದನ್‌ಮೋಹನ್ ಸಿ.
ಆಡಳಿತಾಧಿಕಾರಿ, ಪ.ಪಂ.
ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.