ಚುನಾವಣ ಮಾರ್ಗದರ್ಶಿ ಕೈಪಿಡಿ ಬಿಡುಗಡೆ
Team Udayavani, Apr 10, 2019, 6:00 AM IST
ಚುನಾವಣ ಮಾರ್ಗದರ್ಶಿ ಎಂಬ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಬೆಳ್ತಂಗಡಿ: ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್
ಡಾ| ಮುರಳಿಮೋಹನ್ ಚೂಂತಾರು ಅವರು ಬೆಳ್ತಂಗಡಿ ಗೃಹರಕ್ಷಕ ಘಟಕಕ್ಕೆ ಭೇಟಿ ನೀಡಿ ಚುನಾವಣ ಪೂರ್ವ ತಯಾರಿ ಸಂಬಂಧವಾಗಿ ಗೃಹರಕ್ಷಕರಿಗೆ ಚುನಾವಣ ಮಾರ್ಗದರ್ಶಿ ಎಂಬ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.
ಚುನಾವಣಾ ಸಂದರ್ಭ ಯಾವ ರೀತಿ ವ್ಯವಹರಿಸಬೇಕು, ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಕೈಪಿಡಿಯಲ್ಲಿ ಚುನಾವಣ ಸಂದರ್ಭ ಗೃಹರಕ್ಷಕರ ಜವಾಬ್ದಾರಿ, ಮಾಡುವಿಕೆ- ಮಾಡದಿರುವ ಕುರಿತು ಪರಿಪೂರ್ಣ ಮಾಹಿತಿ ನೀಡಲಾಗಿದೆ.
ಎಲ್ಲ ಗೃಹರಕ್ಷಕರು ಚುನಾವಣೆ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಶಾಂತಿಯುತ ಮತ್ತು ನ್ಯಾಯಯುತವಾದ ಮತದಾನ ನಡೆಯುವ ಪ್ರಕ್ರಿಯೆಯಲ್ಲಿ ಪೊಲೀಸ ರೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಲಾೖಲ, ಹಿರಿಯ ಗೃಹರಕ್ಷಕರಾದ ಅಪ್ಪು, ಬಾಬು, ಚಾಕೋ, ಡೆನ್ನಿಸ್ ಹಾಗೂ 55 ಮಂದಿ ಗೃಹರಕ್ಷಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.