ಮಂಗಳೂರು ಪಾಲಿಕೆಗೆ ಹೊಸ ಆಡಳಿತ; 3.87 ಲಕ್ಷ ಮತದಾರರೇ ನಿರ್ಣಾಯಕ!
Team Udayavani, Sep 30, 2019, 5:24 AM IST
ಮಹಾನಗರ: ಮನಪಾಲಿಕೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದ್ದು ಮುಂದಿನ ಆಡಳಿತ ಯಾರಿಗೆ ಎಂಬುದನ್ನು ನಗರದ 3.87 ಲಕ್ಷ ಮತದಾರರು ನಿರ್ಣ ಯಿಸಲಿದ್ದಾರೆ. ಚುನಾವಣೆ ದಿನಾಂಕವನ್ನು ಚುನಾವಣ ಆಯೋಗ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ಆದರೂ ರಾಜಕೀಯ ಪಕ್ಷಗಳು ಮೆಲ್ಲಗೆ ಲೆಕ್ಕಾಚಾರ ಆರಂಭಿಸಿವೆ. ಸದ್ಯದ ಮಾಹಿತಿ ಪ್ರಕಾರ, 1,99,989 ಪುರು ಷರು, 1,87,465 ಮಹಿಳೆಯರು ಸೇರಿದಂತೆ ಒಟ್ಟು 3,87,517 ಮತ ದಾರರು ಇಲ್ಲಿಯವರೆಗೆ ನೋಂದಣಿ ಮಾಡಿ ದ್ದಾರೆ. ಇನ್ನಷ್ಟು ಮತದಾರರ ಸೇರ್ಪಡೆ ಪ್ರಕ್ರಿಯೆ ಕೆಲವೇ ದಿನದಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.
2013ರ ಚುನಾವಣೆಯಲ್ಲಿ 1,58,121 ಪುರುಷರು, 1,68,874 ಮಹಿಳೆಯರು ಸಹಿತ 3,26,995 ಮತ ದಾರರ ಹೆಸರು ಮತಪತ್ರದಲ್ಲಿ ನೋಂದಣಿಯಾಗಿತ್ತು. ಈ ಪೈಕಿ 2,07,070 ಜನರು (ಶೇ 63.28) ಮತ ಚಲಾಯಿಸಿದ್ದರು. 52ನೇ ಕಣ್ಣೂರು ವಾರ್ಡ್‌ನಲ್ಲಿ ಗರಿಷ್ಠ ಶೇ.75.75, 38ನೇ ಬೆಂದೂರ್ ವಾರ್ಡ್‌ನಲ್ಲಿ ಕನಿಷ್ಠ ಶೇ.47.35ರಷ್ಟು ಮತದಾನವಾಗಿತ್ತು.
ವಲಯ ಕಚೇರಿಗಳ ವ್ಯಾಪ್ತಿಯ ವಾರ್ಡ್‌ಗಳು
ವಲಯ- 1. ಸುರತ್ಕಲ್: ಸುರತ್ಕಲ್ ಪ.-ವಾರ್ಡ್ ನಂ.1,(ಜನಸಂಖ್ಯೆ 9,346). ಸುರ
ತ್ಕಲ್ ಪೂ.- 2, (7,109) ಕಾಟಿಪಳ್ಳ ಪೂರ್ವ-3,(8,599) ಕಾಟಿಪಳ್ಳ ಕೃಷ್ಣಾಪುರ- 4, (9522) ಕಾಟಿಪಳ್ಳ ಉತ್ತರ- 5 (9,935) ಇಡ್ಯಾ ಪೂ.- 6 (9,336) ಇಡ್ಯಾ ಪ.- 7 (8,046) ಹೊಸಬೆಟ್ಟು- 8 (9,535) ಕುಳಾಯಿ- 9- (10,649). ಬೈಕಂಪಾಡಿ- 10 (7,503) ಪಣಂಬೂರು- 11 (9,930) ಬೆಂಗ್ರೆ- 60(8,542) ಒಟ್ಟು ಜನಸಂಖ್ಯೆ -1,08,052.
ವಲಯ- 2. ಕೇಂದ್ರ ಕಚೇರಿ, ಲಾಲ್‌ಬಾಗ್: ಪಂಜಿ ಮೊಗರು- 12 (ಜನಸಂಖ್ಯೆ 8,555) ಕುಂಜತ್ತಬೈಲು ಉ.- 13 ( 8615) ಕುಂಜತ್ತಬೈಲು ದ.- 14 (7,137 ) ಮರಕಡ- 15( 8,342) ಬಂಗ್ರ ಕೂಳೂರು -16 (8,300) ದೇರೆಬೈಲು ಉ.- 17 (10,393); ಕಾವೂರು- 18 (11,781) ದೇರೆಬೈಲು ದ. – 24(9,367). ದೇರೆಬೈಲು ಪ.- 25 (8,253) ದೇರೆಬೈಲು ದ.ಪ.- 26 (9,023) ಬೋಳೂರು- 27 (7,077) ಮಣ್ಣಗುಡ್ಡ- 28 (6,741) ಕಂಬ- 29 (6,650) ಕೊಡಿಯಾಲಬೈಲ್- 30 (6380) ಬಿಜೈ- 31 (8,370) ಫಳ್ನೀರು -39 ( 7740) ಕೋರ್ಟ್- 40 (6,917) ಸೆಂಟ್ರಲ್ ಮಾರ್ಕೆಟ್- 41(5,829) ಡೊಂಗರಕೇರಿ- 42 (7,149) ಕುದ್ರೋಳಿ- 43 (6,250) ಬಂದರು- 44 (6,749) ಪೋರ್ಟು- 45 (7,449) ಕಂಟೋನ್ಮೆಂಟ್- 46 (6,908) ಮಿಲಾಗ್ರಿಸ್- 47 (7,998) ಅತ್ತಾವರ- 55(8398) ಮಂಗಳಾದೇವಿ – 56 (8,216) ಹೊಗೆಬಜಾರ್- 57(7,244) ಬೋಳಾರ- 58 (6,378) ಒಟ್ಟು ಜನಸಂಖ್ಯೆ -2,18,209 ವಲಯ- 3 ಕದ್ರಿ: ಪಚ್ಚನಾಡಿ- 19 (8,120) ತಿರುವೈಲ್- 20 (9,146) ಪದವು ಪಶ್ಚಿಮ- 21 (8,354) ಕದ್ರಿ ಪದವು- 22 (10,955) ದೇರೆಬೈಲು ಪೂರ್ವ- 23 10096; ಕದ್ರಿ ಉತ್ತರ- 32, 7158; ಕದ್ರಿ ದಕ್ಷಿಣ- 33- 6,497; ಶಿವಬಾಗ್- 34, (6,396) ಪದವು ಸೆಂಟ್ರಲ್- 35 (8,859) ಪದವು ಪೂರ್ವ- 36 (7,460) ಮರೋಳಿ- 37 (7,797) ಬೆಂದೂರು- 38 (7,322) ಕಂಕನಾಡಿ ವೆಲೆನ್ಸಿಯಾ- 48 (8,509) ಕಂಕನಾಡಿ- 49 (9,350) ಅಳಪೆ ದಕ್ಷಿಣ- 50 (7,026) ಅಳಪೆ ಉತ್ತರ – 51 (7,954) ಕಣ್ಣೂರು- 52 (8,075)., ಬಜಾಲ್- 53 (8,602) ಜೆಪ್ಪಿನಮೊಗರು- 54 (7,314) ಜೆಪ್ಪು- 59 (7,717) ಒಟ್ಟು ಜನಸಂಖ್ಯೆ 1,62,707.
ಐದು ವರ್ಷಗಳಲ್ಲಿ
403 ಕೋಟಿ ವೆಚ್ಚ
2014-15ರಿಂದ 2018-19ರವರೆಗಿನ ಆಡಳಿತಾವಧಿಯಲ್ಲಿ ಒಟ್ಟು 11,688 ಕಾಮ ಗಾರಿಗಳನ್ನು ಕೈಗೊಂಡು, ಒಟ್ಟು 403.5 ಕೋಟಿ ರೂ. ವಿನಿಯೋಗಿಸಲಾಗಿದೆ. 2014-15ರಲ್ಲಿ 27.99 ಕೋಟಿ ರೂ. ವೆಚ್ಚ ದಲ್ಲಿ 1201 ಕಾಮಗಾರಿ, 2015-16ರಲ್ಲಿ 85.45 ಕೋಟಿ ರೂ. ವೆಚ್ಚದಲ್ಲಿ 2343 ಕಾಮಗಾರಿ, 2016-17ರಲ್ಲಿ 64.08 ಕೋಟಿ ರೂ. ವೆಚ್ಚದಲ್ಲಿ 2401 ಕಾಮಗಾರಿ, 2017-18ರಲ್ಲಿ 102.32 ಕೋಟಿ ರೂ. ಮೊತ್ತದಲ್ಲಿ 3174 ಕಾಮಗಾರಿ, ಇನ್ನು 2018-19ರಲ್ಲಿ 123.66 ಕೋಟಿ ರೂ. ವೆಚ್ಚದಲ್ಲಿ 2569 ಕಾಮ ಗಾರಿ ಕೈಗೆತ್ತಿಕೊಂಡಿರುವುದಾಗಿಪಾಲಿಕೆಯ ದಾಖಲೆ ಹೇಳುತ್ತಿದೆ.
ಮನಪಾ ಚುನಾವಣೆಗಳ ಹಿನ್ನೋಟ
ನಗರಸಭೆಯಿಂದ ನಗರಪಾಲಿಕೆಯಾಗಿ ಮಂಗಳೂರು ವಿಸ್ತಾರಗೊಂಡು ಮೊದಲ ಚುನಾವಣೆ ನಡೆದು 1984ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ 1990ರಲ್ಲಿಯೂ ಕಾಂಗ್ರೆಸ್ ಅಧಿಕಾರ ಪಡೆದಿತ್ತು. 1995ರಿಂದ 1997ರವರೆಗೆ ಮಂಗಳೂರು ಪಾಲಿಕೆ ಆಡಳಿತ ಆಡಳಿತಾಧಿಕಾರಿ ಕೈಯಲ್ಲಿತ್ತು. 1997 ಚುನಾವಣೆಯಲ್ಲಿ ಪೂರ್ಣ ಬಹುಮತ ಯಾರಿಗೂ ಸಿಗದಿದ್ದಾಗ (ಬಿಜೆಪಿ 24, ಜೆಡಿಎಸ್ 6, ಕಾಂಗ್ರೆಸ್ 30)ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. 2002ರಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್ 40 ಸ್ಥಾನ ಪಡೆದ ಕಾರಣದಿಂದ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆದುಕೊಂಡಿತ್ತು. ಆದರೆ, 2007ರಲ್ಲಿ ಬಿಜೆಪಿ ಇಲ್ಲಿ ಜಯಿಸಿತ್ತು. ಬಿಜೆಪಿಗೆ 35 ಹಾಗೂ ಕಾಂಗ್ರೆಸ್‌ಗೆ 20 ಸ್ಥಾನ ದೊರಕಿತ್ತು. ವಿಪರ್ಯಾಸವೆಂದರೆ, ಈ ಅವಧಿಯ ಕೊನೆಯ ವರ್ಷ ಬಹುಮತವಿದ್ದರೂ ಬಿಜೆಪಿಯ ಲೋಪದಿಂದಾಗಿ ಕಾಂಗ್ರೆಸ್‌ಗೆ (ಗುಲ್ಜಾರ್ ಬಾನು)ಮೇಯರ್ ಸ್ಥಾನ ಲಭಿಸಿತ್ತು. 2007ರಲ್ಲಿ ಬಿಜೆಪಿ ಕೈಯಲ್ಲಿದ್ದ ಪಾಲಿಕೆಯನ್ನು 2013ರಲ್ಲಿ ಕಾಂಗ್ರೆಸ್ ತನ್ನ ಕೈವಶ ಮಾಡಿಕೊಂಡಿತ್ತು. ಕಾಂಗ್ರೆಸ್‌ನ ಮಹಾಬಲ ಮಾರ್ಲ (2014-15) ಜೆಸಿಂತಾ ವಿಜಯ ಅಲ್ಫೆ†àಡ್ (2015 -16) ಕೆ. ಹರಿನಾಥ್ (2016-17) ಕವಿತಾ ಸನಿಲ್ (2017-18) ಭಾಸ್ಕರ್ ಕೆ. (2018-19) ಮೇಯರ್ ಆಗಿದ್ದರು. ಸದ್ಯ ಆಡಳಿತಾಧಿಕಾರಿ ಕರ್ತವ್ಯದಲ್ಲಿದ್ದಾರೆ.
ಇಲ್ಲಿಯವರೆಗಿನ ಮೇಯರ್‌ಗಳು
01 ಸದಾಶಿವ ಭಂಡಾರಿ (1984 85 )
02 ಅಬ್ದುಲ್ ಖಾದರ್ (1985 86)
03 ಡಾ| ಸಿ. ಕೆ. ಬಂಟ್ವಾಳ (1986 87)
04 ಅಜಿತ್ ಕುಮಾರ್ (1987 88)
05 ಪಿ.ಎಂ. ಕ್ಯಾಸ್ಟಲಿನೊ ( 1988 89)
06 ಸದಾಶಿವ ಭಂಡಾರಿ (1990 91)
07 ಬಿ. ಸುಂದರ್ (1991 92)
08 ವಾಮನ ಸಾಲ್ಯಾನ್ ( 1992 93)
09 ಕೃಷ್ಣಪ್ಪ ಮೆಂಡನ್ (1993 5 ತಿಂಗಳು)
10 ಯೂನಿಸ್ ಬ್ರಿಟ್ಟೊ (1993 94)
11 ರಮೇಶ್ ಕೋಟ್ಯಾನ್ ( 1994 95)
12 ದೇವಣ್ಣ ಶೆಟ್ಟಿ ( 1997 98)
13 ಹಿಲ್ಡಾ ಆಳ್ವ (1998 99)
14 ರಮೇಶ್ ಕೋಟ್ಯಾನ್ ( 1999 2000)
15 ಸುಂದರಿ (2000 2001)
16 ಅಬ್ದುಲ್ ಅಜೀಜ್ (2001 2002)
17 ಎಂ. ಶಶಿಧರ ಹೆಗ್ಡೆ ( 2002 2003)
18 ಕೆ. ದಿವಾಕರ್ ( 2003 2004)
19 ಪುರಂದರದಾಸ್ ಕೂಳೂರು (2004 2005)
20 ಕೆ. ಅಶ್ರಫ್ ( 2005 2006)
21 ವಿಜಯಾ ಅರುಣ್ (2006 2007)
22 ಗಣೇಶ್ ಹೊಸಬೆಟ್ಟು ( 2008 2009)
23 ಎಂ. ಶಂಕರ ಭಟ್ (2009 2010)
24 ರಜನಿ ದುಗ್ಗಣ ( 2010 2011)
25 ಪ್ರವೀಣ್ (2011 2012)
26 ಗುಲ್ಜಾರ್‌ಬಾನು (2012 2013)
27 ಮಹಾಬಲ ಮಾರ್ಲ (2014 15)
28 ಜೆಸಿಂತಾ ವಿಜಯ ಆಲ್ಫೆ†àಡ್ (2015 16)
29 ಕೆ.ಹರಿನಾಥ್ (2016 17)
30 ಕವಿತಾ ಸನಿಲ್ (2017 2018)
31 ಭಾಸ್ಕರ್ ಕೆ. (2018 2019)
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
ಮಂಜನಾಡಿ ಗ್ಯಾಸ್ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.