ಕೆಎಸ್‌ಆರ್‌ಟಿಸಿಯಿಂದ ಎಲೆಕ್ಟ್ರಿಕ್ ಬಸ್ ಚಿಂತನೆ
ವಿದೇಶಿ ಮೂಲದ ಕಂಪೆನಿ ಸಹಯೋಗ ಶೂನ್ಯ ಬಂಡವಾಳದಡಿ ಕಾರ್ಯಾರಂಭ
Team Udayavani, Sep 11, 2019, 5:42 AM IST
ಮಂಗಳೂರು: ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರಬೇಕಾದರೆ ದೇಶದಲ್ಲೇ ನಂಬರ್ ವನ್ ಸಾರಿಗೆ ಎಂದು ಕರೆಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶೂನ್ಯ ಬಂಡವಾಳದಲ್ಲಿ ಎಲೆಕ್ಟ್ರಿಕ್ ಹೈಬ್ರಿಡ್ ಬಸ್‌ಗಳನ್ನು ವಿವಿಧ ಭಾಗಗಳಿಂದ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿ ವಿದೇಶಿ ಮೂಲದ ಕಂಪೆನಿಯೊಂದರ ಜತೆ ರಾಜ್ಯ ಸರಕಾರವು ಮಾತುಕತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ತಿಂಗಳಲ್ಲಿ ಈ ಯೋಜನೆಗೆ ಅಧಿಕೃತವಾಗಿ ಅಂಕಿತ ಬೀಳಲಿದೆ. ನೂತನ ಪ್ರಸ್ತಾವದ ಪ್ರಕಾರ ವಿದೇಶಿ ಮೂಲದ ಕಂಪೆನಿಯೊಂದು ಹಣ ಹೂಡಲು ಮುಂದಾಗಿದ್ದು, ಬಸ್ ಖರೀದಿ, ನಿರ್ವಹಣೆ ಅವರದ್ದೇ ಜವಾಬ್ದಾರಿಯಾಗಿರುತ್ತದೆ. ನಿರ್ವಾಹಕ, ಚಾಲಕರ ನೇಮಕಾತಿ ಜವಾಬ್ದಾರಿಯನ್ನು ಮಾತ್ರ ಕೆಎಸ್ಸಾರ್ಟಿಸಿ ವಹಿಸಲಿದೆ. ಸಿಬಂದಿ ಸಂಬಳವನ್ನು ಆ ಸಂಸ್ಥೆಯೇ ನೀಡಲಿದೆ.
ವಿದೇಶಿ ಮೂಲದ ಕಂಪೆನಿಯು ಈಗಾಗಲೇ ದೇಶದ ವಿವಿಧ ರಾಜ್ಯ ಗಳಿಗೆ ಈ ಪ್ರಸ್ತಾವವನ್ನು ಮುಂದಿ ಟ್ಟಿದ್ದು, ರಾಜ್ಯದ ನೂತನ ಸಾರಿಗೆ ಸಚಿವರ ಬಳಿಯೂ ಮಾತುಕತೆ ನಡೆಸಿದೆ. ಶೇ. 60ರಷ್ಟು ಆದಾಯ ಕೆಎಸ್ಸಾರ್ಟಿಸಿಗೆ ಮತ್ತು ಶೇ. 40ರಷ್ಟನ್ನು ಆ ಸಂಸ್ಥೆಗೆ ನೀಡುವ ಪ್ರಸ್ತಾಪವಾಗಿದೆ. ಸಾಧ್ಯಾಸಾಧ್ಯತೆಗಳ ಬಗ್ಗೆ ಸದ್ಯ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.
“ಫೇಮ್’ಯೋಜನೆಯಲ್ಲಿ 50 ಬಸ್
“ಶೂನ್ಯ ಬಂಡವಾಳದ ಯೋಜನೆ ಒಂದೆಡೆಯಾದರೆ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು “ಫೇಮ್’ ಯೋಜನೆಯ ಎರಡನೇ ಹಂತದಲ್ಲಿ ಕೆಎಸ್ಸಾರ್ಟಿಸಿಗೆ 50 ಎಲೆಕ್ಟ್ರಿಕ್ ಬಸ್‌ಗೆ ಸಹಾಯ ಧನ ನೀಡಲು ಈಗಾಗಲೇ ಒಪ್ಪಿಗೆ ಸೂಚಿಸಿದೆ. ಫೇಮ್ ಯೋಜನೆಯ ಮುಖೇನ ನಗರ ಮತ್ತು ಅಂತರ್ ನಗರ ಸಾರಿಗೆ ಸೇವೆಗೂ ಸಹಾಯಧನ ನೀಡಲು ನಿರ್ದರಿಸಿದ್ದು, ಗುತ್ತಿಗೆ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ ಪಡೆದು ಕಾರ್ಯಾಚರಣೆ ಮಾಡಬೇಕಿದೆ. ಸದ್ಯವೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು’ ಎಂದು ಕೆಎಸ್ಸಾರ್ಟಿಸಿ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಪ್ರಯೋಗ
ವಿದೇಶಿ ಕಂಪೆನಿಯ ಸಹಯೋಗದೊಂದಿಗೆ ಶೂನ್ಯ ಬಂಡವಾಳದಲ್ಲಿ ಅಸ್ಸಾಂ ರಾಜ್ಯದ ಸಾರಿಗೆ ನಿಗಮವು ಬಸ್ ಕಾರ್ಯಾಚರಣೆ ನಡೆಸಲು ಸದ್ಯ ಮುಂದಾಗಿದೆ. ಅಲ್ಲಿನ ವ್ಯವಸ್ಥೆಯನ್ನು ನೋಡಿಕೊಂಡು ಕೆಎಸ್ಸಾರ್ಟಿಸಿ ಈ ರೀತಿಯ ಎಲೆಕ್ಟ್ರಿಕ್ ಬಸ್ ಸೇವೆ ಪ್ರಾರಂಭಿಸುವತ್ತ ಗಮನಹರಿಸಲಿದೆ.
ಕಾರ್ಯಾಚರಣೆಯ ಬಗ್ಗೆ ವಿದೇಶಿ ಕಂಪೆನಿಯೊಂದಿಗೆ ಮಾತುಕತೆ ನಡೆದಿದೆ. ಯೋಜನೆಯ ಸಾಧ್ಯಾಸಾಧ್ಯತೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದರ ಪ್ರಕಾರ ವ್ಯವಹಾರದ ಶೇ. 60ರಷ್ಟು ನಮ್ಮ ನಿಗಮಕ್ಕೆ ಮತ್ತು ಶೇ. 40ರಷ್ಟು ವಿದೇಶಿ ಕಂಪೆನಿಗೆ ಬಂಡವಾಳ ಹಂಚಿಹೋಗಲಿದೆ.
– ಲಕ್ಷ್ಮಣ ಸವದಿ, ಸಾರಿಗೆ ಸಚಿವ
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.