ಗೆದ್ದ  – ಸೋತವರ ಮುಖ ನೋಡಿ ಆನೆಗಳು ಬರದೇ ಇರ್ತಾವ?


Team Udayavani, May 7, 2018, 4:15 PM IST

7-May-14.jpg

ಸುಳ್ಯ: ಯಾರು ಗೆದ್ದು ಬಂದರೂ ಆಗುವುದೇನೂ ಇಲ್ಲ. ನಮ್ಮ ತೋಟಗಳಿಗೆ ಆನೆಗಳು ಬರುವುದೇನೂ ನಿಲ್ಲುವುದಿಲ್ಲ. ಅದಕ್ಕೆ ಏನಾದರೂ ತಡೆ ಉಂಟಾ, ಇಲ್ಲ!.

ಇದು ಕೃಷಿ ಅವಲಂಬಿಸಿದ್ದು, ಅತಿ ಹೆಚ್ಚು ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗುವ ಗುತ್ತಿಗಾರು ಜಿ.ಪಂ. ಕ್ಷೇತ್ರದ ಕಡಮಕಲ್ಲು, ಕೊಲ್ಲಮೊಗ್ರು ಭಾಗದ ಜನತೆ ಚುನಾವಣೆಯ ಹೊಸ್ತಿಲಲ್ಲಿ ಮಾತನಾಡುವ ರೀತಿ.

ಚುನಾವಣೆ ಈ ಬಾರಿ ಹೇಗಾಗಬಹುದು ಎಂದು ಮಾತಾಡಿದರೆ ಅವರಿಗೆ ಅದರ ಕುರಿತು ಉತ್ಸಾಹವೇ ಇಲ್ಲ. ಅವರಿಗೆ ಅವರ ತೋಟದಲ್ಲಿ ಇಂದು ಎಷ್ಟು ತೆಂಗಿನ ಸಸಿ ನಾಶವಾಗಿದೆ, ಅಡಿಕೆ ಗಿಡ, ಬಾಳೆ ಗಿಡ ಎಷ್ಟು ಹಾಳಾಗಿದೆ, ಒಟ್ಟು ಹಾನಿ ಎಷ್ಟು ಎಂಬುದರ ಚಿಂತೆಯೇ ಹೊರತು ಯಾರೂ ಗೆದ್ದರೂ ಸೋತರೂ ಮುಖ್ಯವಲ್ಲ.

‘ನಾವು ಯಾಕೆ ವೋಟು ಹಾಕುವುದು? ನಮ್ಮಲ್ಲಿ ಈಗಾಗಲೇ ಸೂಕ್ಷ್ಮ ವಲಯ ಅಂತ ಯೋಜನೆ ಬಂದು ಕೃಷಿ ಮಾಡುವುದನ್ನೇ ನಿಲ್ಲಿಸಿದ್ದೇವೆ. ಯಾಕೆ ಕೃಷಿ ಮಾಡಬೇಕು? ಹೇಗೂ ನಮಗೆ ಇಲ್ಲಿ ಉಳಿಗಾಲವಿಲ್ಲ. ಇರುವ ಫ‌ಸಲನ್ನಾದರೂ ಉಳಿಸಿ ಉಣ್ಣುವಾ ಅಂದರೆ ರಾತ್ರಿ ಬೆಳಗಾಗುವುದರ ಒಳಗೆ ಕಾಡಾನೆಗಳು ಬಂದು ತೋಟ ನೆಲಸಮ ಆಗುತ್ತದೆ. ಮತ್ತೆ ವೋಟು ಹಾಕಿದರೆಷ್ಟು ಬಿಟ್ಟರೆಷ್ಟು? ನಮ್ಮ ಪಾಡು ನಮಗೆ ಬಿಡಿ’ ಎನ್ನುತ್ತಾರೆ ಕಲ್ಮಕಾರು ನಿವಾಸಿ ಕೃಷಿಕ ಹರ್ಷಕುಮಾರ ಡಿ.ಎಸ್‌.

‘ಅಯ್ಯೋ ನಮ್ಮಲ್ಲಿ ದೊಡ್ಡ ರಾಜಕಾರಣಿಗಳೇ ಇರುವುದು ಮಾರಾಯರೇ. ಆದರೇ ನಮ್ಮೂರಿನ ರಸ್ತೆ ನೋಡಿದಿರಾ? ಅಬ್ಟಾಬ್ಬ ಆ ರಸ್ತೆಯಲ್ಲಿ ಸರಕಾರಿ ಬಸ್ಸು ಹೋಗುವುದೇ ಇಲ್ಲ, ಜೀಪೇ ಗತಿ. ಅದರಲ್ಲಿ ಚಾಲಕ ಸೀಟಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಆಚೆ-ಈಚೆ ಜಾರಿಕೊಂಡೇ ಚಲಾಯಿಸಿ ಊರು ತಲುಪಿಸುತ್ತಾರೆ. ಇಂತ ರಸ್ತೆ ಇರುವಾಗ ನಾವು ವೋಟು ಯಾಕೆ ಹಾಕುವುದು?’ ಹೀಗಂತ ಗುತ್ತಿಗಾರು-ಮಡಪ್ಪಾಡಿ ರಸ್ತೆ ಅವ್ಯವಸ್ಥೆ ಕುರಿತು ಅಹವಾಲು ಹೇಳಿಕೊಂಡರು ಹಾಡಿಕಲ್ಲು ನಿವಾಸಿ ಧರ್ಮಪಾಲ.

ಎಲ್ಲ ಪಕ್ಷದವರು ಮನೆಗೆ ಬಂದು ನಮಗೇ ಈ ಬಾರಿ ಮತ ಕೊಡಿ ಅಂತಾರೆ. ಆಯಿತಣ್ಣ ಈ ಸಲ ನಿಮಗೇ ಅಂತ ಹೇಳಿ
ಕಳುಹಿಸುತ್ತೇವೆ. ಮೂಲ ಸೌಕರ್ಯಗಳ ಸಮಸ್ಯೆ ಇದೆ. ಅದರ ಕುರಿತು ಅವರಲ್ಲಿ ಅಹವಾಲು ಹೇಳಿದರೆ ಪ್ರಯೋಜನ ಆಗದು. ಹಾಗೇನಾದರೂ ಸಮಸ್ಯೆ ಹೇಳಿಕೊಂಡರೂ ವೋಟು ಕೇಳಲು ಬಂದವರು ವಿಷಯ ಬದಲಾಯಿಸಿ ಬೇರೆಡೆಗೆ ಗಮನ ಸೆಳೆಯುತ್ತಾರೆ ಅಂತ ಯೇನೆಕಲ್ಲು ಮಾದನಮನೆ ನಿವಾಸಿ ಸುಂದರ ಗೌಡ ಹೇಳಿದರು.

ಚುನಾವಣೆ ಹೊತ್ತಿಗೆ ಭಿನ್ನ ಭಿನ್ನ ಹಿನ್ನೆಲೆಯ, ಬಹುಬಗೆಯ ಸವಾಲುಗಳನ್ನು ಎದುರಿಸುವ ಮತದಾರರ ಮಾತುಗಳನ್ನು
ಕೇಳುವುದು ಒಂದು ವಿಭಿನ್ನ ಅನುಭವ. ಅದು ಚುನಾವಣೆಯ ಹೊತ್ತಿಗೆ ರಾಜಕೀಯ ಎಬ್ಬಿಸಿದ ಸಂಚಲನದ ಪ್ರತಿಬಿಂಬವೂ ಹೌದು, ಜನರ ನಿತ್ಯ ಬದುಕಿನ ದರ್ಶನವೂ ಹೌದು. 

ನಕಲ್‌ ಬಾಧಿತ ಪ್ರದೇಶ 
ನಮ್ಮ ಮನೆಗೆ ನಕ್ಸಲರು ಬಂದಿದ್ದರು. ಯಾರಿಗೂ ಹೇಳಬೇಡಿ, ಹೇಳಿದರೆ ಕುಟುಂಬದವರ ಮುಂದೆಯೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅದಾದ ಮೇಲೆ ಪೊಲೀಸರಿಗೆ ಮಾಹಿತಿ ಹೋಗಿ ಅಧಿಕಾರಿಗಳು, ಜನಪ್ರತಿನಿಧಿ  ಗಳು ಪ್ರತೀ ವರ್ಷ ಚುನಾವಣೆ ಹೊತ್ತಿಗೆ ಬರುತ್ತಾರೆ, ಹೋಗುತ್ತಾರೆ. ಬೇರೆ ಕಡೆ ಜಾಗ ಕೊಡುತ್ತೇವೆ ಅಂದಿದ್ದರು, ಅದೂ ಕೊಡಲಿಲ್ಲ. ಇರುವ ಭೂಮಿಗೆ 5 ಸೆಂಟ್ಸ್‌ ಹಕ್ಕುಪತ್ರವೂ ಕೊಡಿಸಲಿಲ್ಲ. ಇಲಾಖೆಯಿಂದ ಇಲಾಖೆಗೆ ಅಲೆದಾಡಿ ಸುಸ್ತಾಗಿ ಹೋಗಿದೆ.

ಇದನ್ನೆಲ್ಲ ಮನೆಗೆ ಮತ ಕೇಳಲು ಬಂದವರಿಗೆ ಹೇಳಿದರೆ ಅವರು ಮೂಗಿಗೆ ತುಪ್ಪ ಸವರುವರೀತಿಯಲ್ಲಿ ಮಾತಾಡಿ ಜಾಗ ಖಾಲಿ ಮಾಡುತ್ತಾರೆ- ಇದು ನಕ್ಸಲ್‌ ಪೀಡಿತ ಭಾಗದ ಕುಟುಂಬದ ಯಜಮಾನ ಬೆಳ್ಯಪ್ಪ ಪಳ್ಳಿಗದ್ದೆ ಅವರ ಮಾತು.

ವೋಟು ಬರುವಾಗ ಎಲ್ಲರೂ ನಮಸ್ಕಾರ ಕೊಡುತ್ತಾರೆ, ಮಾತಾಡಿಸುತ್ತಾರೆ. ಇಲ್ಲದಿದ್ದರೆ ಯಾರಿಗೂ ನಾವು ಕಾಣುವುದಿಲ್ಲ. ವೋಟು ಕಳೀಲಿ, ಆಮೇಲೆ ಅಡ್ಡ ಬಂದರೂ ಅವರಿಗೆ ಗೊತ್ತಾಗುವುದೇ ಇಲ್ಲ.
– ಕುಸುಮಾವತಿ,
ಕೂಲಿ ಕಾರ್ಮಿಕ ಮಹಿಳೆ, ಹರಿಹರ 

 ಬಾಲಕೃಷ್ಣ ಭೀಮಗುರ್ಲಿ 

ಟಾಪ್ ನ್ಯೂಸ್

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

rain

Tamil Nadu;ಸೈಕ್ಲೋನ್‌ ದುರ್ಬಲವಾದ್ರೂ ಭಾರೀ ಮಳೆ?

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.