ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಲಿಕ್ಸರ್ ಮಿನರಲ್ ವಾಟರ್‌ಪ್ಲಾಂಟ್
Team Udayavani, Jul 5, 2017, 3:45 AM IST
ಮೂಡಬಿದಿರೆ: ಆಹಾರ ಧಾನ್ಯಗಳ ಸಂಸ್ಕರಣಾ ಯಂತ್ರೋಪಕರಣಗಳಿಗಾಗಿ ವಿಶ್ವದ 18 ದೇಶಗಳಲ್ಲಿ ಹೆಸರಾಗಿರುವ ಎಸ್‌ಕೆಎಫ್ ಉದ್ಯಮ ಸಮೂಹವು ಶುದ್ಧ ನೀರಿನ ಉತ್ಪಾದನೆ, ಬಳಕೆಯ ಆಂದೋಲನ ನಡೆಸುತ್ತಿದ್ದು ಸಂಸ್ಥೆಯ “ಎಲಿಕ್ಸರ್ ಮಿನರಲ್ ವಾಟರ್ ಪ್ಲಾಂಟ’ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಡಿ. ಹಷೇìಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಸ್ಥಾಪಿಸಲಾಯಿತು.
ಎಲಿಕ್ಸರ್ ಮಿನರಲ್ ವಾಟರ್‌ನ ಶ್ರೇಷ್ಠ ಗುಣಮಟ್ಟವನ್ನು ಮೆಚ್ಚಿ ಪ್ರಶಂಸಿಸಿದ ಹೆಗ್ಗಡೆ ಅವರು ಇಂಥ ಘಟಕಗಳನ್ನು ತಮ್ಮ ಪ್ರತಿಷ್ಠಾನದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾಪಿಸಲು ತಮ್ಮ ಅನುಮೋದನೆ ನೀಡಿದರು. ಭಾರತೀಯರಿಗೆ ಖನಿಜಯುಕ್ತ ಕುಡಿಯುವ ನೀರನ್ನು ಒದಗಿಸುವ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾದ ಅಭಿಯಾನಕ್ಕೆ ಶುಭ ಹಾರೈಸಿದ ಅವರು ಈ ಅಭಿಯಾನದೊಂದಿಗೆ ಕೈ ಜೋಡಿಸಲು ಸಮ್ಮತಿ ನೀಡಿದರು.
ಸಹಜ ಖನಿಜಯುಕ್ತ ನೀರು
ಎಸ್‌ಕೆಎಫ್‌ನ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ ಅವರು ಎಲಿಕ್ಸರ್ ಬಗ್ಗೆ ಮಾಹಿತಿ ನೀಡಿದರು. ಎಲಿಕ್ಸರ್ ಆರ್/ಯುವಿ/ಯುಎಫ್/ಟಿಡಿಎಸ್ ಕಂಟ್ರೋಲ್ ತಂತ್ರಜ್ಞಾನವು ನೀರಿನಲ್ಲಿರುವ ಕಲ್ಮಶಗಳನ್ನೆಲ್ಲ ನಿವಾರಿಸಿ, ನೀರಿನ ಟಿಡಿಎಸ್, ಪಿಎಚ್ ಮಟ್ಟವನ್ನು ಸಹಜ ಖನಿಜಯುಕ್ತ ನೀರಿನ ಮಟ್ಟಕ್ಕೆ ತಂದು ನಿಲ್ಲಿಸುವುದು. ಅವರವರದೇ ಆದ ಜಲಮೂಲದಿಂದ ಶೇ. 100 ಪರಿಶುದ್ಧ, ಖನಿಜಯುಕ್ತ ರುಚಿಕರ ನೀರನ್ನು ಈ ಘಟಕದಿಂದ ಪಡೆಯಬಹುದು. ಪ್ಲಾಸ್ಟಿಕ್ ಬಾಟಲಿ ಗಳನ್ನು ನಿವಾರಿಸಿ, ಹಸಿರು ಪರಿಸರದೊಂದಿಗೆ “ಸ್ವತ್ಛ ಭಾರತ’ವನ್ನು ನಿರ್ಮಿಸಲೂ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯ ಕಾಟಿಪಳ್ಳ, ಸುರತ್ಕಲ್, ಚಿಲಿಂಬಿ, ಬೋಂದೆಲ್, ಪಾಂಡೇಶ್ವರ ಮತ್ತು ಅಶೋಕ ನಗರ ಮೊದಲಾದೆಡೆಗಳಲ್ಲಿ ನಡೆಸಿದ ಪರೀಕ್ಷೆಗಳಿಂದ 10ರಲ್ಲಿ 9 ಸ್ಯಾಂಪಲ್‌ಗಳ ನೀರು ಗರಿಷ್ಠ ಮಟ್ಟದಲ್ಲಿ ಕೋಲಿ ಫಾರ್ಮ್
ಬ್ಯಾಕ್ಟೀರಿಯಾಗಳು ಕಂಡುಬಂದಿದ್ದು ಅವೆಲ್ಲವೂ ಕುಡಿ ಯಲು ಯೋಗ್ಯವಲ್ಲ ಎಂದು ಪ್ರಮಾಣಿಸಲ್ಪಟ್ಟಿವೆ. ಇಂಥ
ನೀರಿನಲ್ಲಿರುವ ಸೀಸ, ಫ್ಲೋರೈಡ್, ಆರ್ಸೆನಿಕ್, ಕೀಟನಾಶಕಗಳಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗು ವುದಲ್ಲದೆ, ರಕ್ತಹೀನತೆ ಚರ್ಮವ್ಯಾಧಿ, ಕ್ಯಾನ್ಸರ್, ಮೂಳೆ, ಸಂಧಿವೈಕಲ್ಯ ಕಾಡುವ ಫ್ಲೋರೋಸಿಸ್, ಮೂತ್ರಪಿಂಡಕ್ಕೆ ಹಾನಿ ಸಂಭವಿಸಬಹುದು. ಎಲಿಕ್ಸರ್ ಘಟಕದಿಂದ ಲಭಿಸುವ ಶುದ್ಧ ನೀರು ಸ್ವತ್ಛ ಭಾರತದೊಂದಿಗೆ ಆರೋಗ್ಯ ಪೂರ್ಣ ಭಾರತಕ್ಕೂ ಕೊಡುಗೆ ನೀಡಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.