ಕೋವಿಡ್  ಲಾಕ್‌ಡೌನ್‌ ಪರಿಣಾಮ  ಪುನಃಶ್ಚೇತನಕ್ಕೆ ಬೇಕಿದೆ ತುರ್ತು ಕ್ರಮ


Team Udayavani, Jul 2, 2021, 8:20 AM IST

ಕೋವಿಡ್  ಲಾಕ್‌ಡೌನ್‌ ಪರಿಣಾಮ  ಪುನಃಶ್ಚೇತನಕ್ಕೆ ಬೇಕಿದೆ ತುರ್ತು ಕ್ರಮ

ಮಂಗಳೂರು: ಕರಾವಳಿ ಉದ್ದಿಮೆ ಕ್ಷೇತ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಉಳಿಯಲು ಕೂಡಲೇ ಆಗಬೇಕಾಗಿರುವುದು ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಸಹಾಯಹಸ್ತ.

ಬರೀ ಕರಾವಳಿಯಷ್ಟೇ ಅಲ್ಲ; ರಾಜ್ಯದ ಎಂಎಸ್‌ಎಂಇ ಪ್ರಸ್ತುತ ಎದುರಿಸು ತ್ತಿರುವ ಸಮಸ್ಯೆ ಯೆಂದರೆ ಉತ್ಪನ್ನಗಳ ಮಾರಾಟ ಮತ್ತು ಹಣ ಕಾಸು ಹರಿವಿನ ಸಮಸ್ಯೆ, ದುಡಿಮೆ ಬಂಡವಾಳದ ಕೊರತೆ ಮತ್ತು ಕಾರ್ಮಿಕರ ಕೊರತೆ. ಅವುಗಳ ನಿವಾ ರಣೆಗೆ ಗಮನ ಕೊಡಬೇಕಿದೆ.

ಈಗಾಗಲೇ ಸಾಲದ ಹೊರೆಯಲ್ಲಿರುವ ಉದ್ದಿಮೆದಾರರು ಪ್ರಸ್ತುತ ಪರಿಸ್ಥಿತಿಯಲ್ಲಿ ಇನ್ನಷ್ಟು ಸಾಲ ಮಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಅವರಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಅಥವಾ ಸಬ್ಸಿಡಿ ನೀಡಿದರೆ ಹೆಚ್ಚು ಸಹಾಯವಾಗುತ್ತದೆ.

ಎಂಎಸ್‌ಎಂಇ ಪುನಃಶ್ಚೇತನಕ್ಕೆ ಹಣಕಾಸು ಸೌಲಭ್ಯದ ಹರಿವು ಮತ್ತು ಕೆಲವು ರಿಯಾಯಿತಿಗಳು ಸಿಗಬೇಕಿವೆ. ಇದರಲ್ಲಿ ಪುನಃಶ್ಚೇತನ ನೆರವು ನಿಧಿಯ ಜತೆಗೆ ಅರ್ಥಿಕ ಬಾಧ್ಯತೆಗಳಿಂದ ಸ್ವಲ್ಪಕಾಲ ವಿರಾಮ ಒದಗಿಸಲು ಸರಕಾರ ಗಮನಹರಿಸಬೇಕಿದೆ ಎನ್ನುತ್ತಾರೆ ಉದ್ಯಮಿಗಳು.

ಪರಿಹಾರ ಪ್ಯಾಕೇಜ್‌ ನಿರೀಕ್ಷೆ  :

ಎಂಎಸ್‌ಎಂಇಗಳಿಗಾಗಿ ಕಳೆದ ವರ್ಷ ಘೋಷಿಸಿದ ಪರಿಹಾರ ಪ್ಯಾಕೇಜ್‌ ಈ ಬಾರಿಯೂ ನೀಡುವುದು, ಎಪ್ರಿಲ್‌ನಿಂದ ಜುಲೈ ವರೆಗಿನ ಸಾಲಗಳು, ದುಡಿಮೆ ಬಂಡವಾಳ ಇತ್ಯಾದಿ ಮೇಲಿನ ಬಡ್ಡಿ ಮನ್ನಾ ಮತ್ತು ಮುಂದಿನ 6 ತಿಂಗಳ ವರೆಗೆ ಸಾಲ ಮರುಪಾವತಿಯನ್ನು ಮುಂದೂಡುವುದು, ಮುಂದಿನ ಎರಡು ವರ್ಷಗಳ ವರೆಗೆ ಎಂಎಸ್‌ಎಂಇ ಸಾಲಗಾರರಿಗೆ ಎಲ್ಲ ರೀತಿಯ ಸಾಲಗಳ ಮೇಲೆ ಶೇ. 6ರಷ್ಟು ಮೃದು ಸಾಲ, ಎಲ್ಲ ಸ್ಲ್ಯಾಬ್‌ಗಳಲ್ಲಿ ಟಿಡಿಎಸ್‌ ಅನ್ನು ಶೇ. 50ರಷ್ಟು ಕಡಿಮೆ ಮುಂತಾದ ಆರ್ಥಿಕ ಉತ್ತೇಜನಗಳನ್ನು ಕ್ಷೇತ್ರ ನಿರೀಕ್ಷಿಸುತ್ತಿದೆ.

ಕೈಗಾರಿಕೆಗಳು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಜಿಎಸ್‌ಟಿ ರಿಟರ್ನ್ಸ್

ಸಲ್ಲಿಸಲು 5 ಕೋಟಿ ರೂ.ಗಳ ವರೆಗಿನ ವ್ಯವಹಾರ ನಡೆಸುವ ಎಂಎಸ್‌ಎಂಇಗಳಿಗೆ 6 ತಿಂಗಳು ಮತ್ತು 5 ಕೋಟಿ ರೂ.ಗಳಿಗಿಂತ ಹೆಚ್ಚಿನ ವ್ಯವಹಾರ ನಡೆಸುವ ಘಟಕಗಳಿಗೆ 3 ತಿಂಗಳು ಕಾಲಾವಕಾಶ ನೀಡಲು ಹಾಗೂ ಈ ಹಿಂದೆ ವ್ಯಾಟ್‌ ಅಡಿಯಲ್ಲಿ ಕೈಗಾರಿಕೆಗಳಿಗೆ ಇದ್ದಂತೆ ವಿಶೇಷವಾಗಿ ಮಾಸಿಕ ರಿಟರ್ನ್, ತ್ತೈಮಾಸಿಕ ಪಾವತಿ ವ್ಯವಸ್ಥೆ ಒದಗಿಸಲು ಸರಕಾರವನ್ನು ಎಂಎಸ್‌ಎಂಇ ಕ್ಷೇತ್ರ ಈಗಾಗಲೇ ಒತ್ತಾಯಿಸಿದೆ.

ವಿದ್ಯುತ್‌ ದರದಲ್ಲಿ ಸ್ವಲ್ಪ ಸಮಯದ ವರೆಗೆ ಒಂದಷ್ಟು ರಿಯಾಯಿತಿ, ವಿದ್ಯುತ್‌ ತೆರಿಗೆ ಕಡಿತಗೊಳಿಸುವುದು ಮುಂತಾದ ಕ್ರಮಗಳೂ ಕ್ಷೇತ್ರದ ಆರ್ಥಿಕ ಸಂಕಷ್ಟ ನಿವಾರಣೆಯಲ್ಲಿ ಸಹಕಾರಿಯಾಗಲಿವೆ ಎನ್ನುತ್ತವೆ ಉದ್ಯಮಗಳು.

ಎಂಎಸ್‌ಎಂಇಗಳು ಸಹಜ ಸ್ಥಿತಿಗೆ ಮರುಳುವಂತಾಗಲು ಅವುಗಳ ಮೇಲಿನ ಹೊರೆ ಕಡಿಮೆ ಮಾಡುವ ಮತ್ತು ಅವುಗಳ ಚೇತರಿಕೆಯ ನಿಟ್ಟಿನಲ್ಲಿ ಕೆಲವು ತುರ್ತು ಕ್ರಮಗಳನ್ನು ಕ್ಷೇತ್ರ ಎದುರು ನೋಡುತ್ತಿದೆ ಎನ್ನುತ್ತಾರೆ ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಜಿತ್‌ ಕಾಮತ್‌ ಮತ್ತು ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಐ.ಆರ್‌. ಫೆರ್ನಾಂಡಿಸ್‌.

ಶೇ. 50ರ ನಿರ್ಬಂಧ ತೆರವು :

ಸಾಮಾನ್ಯವಾಗಿ ಸಣ್ಣ ಕೈಗಾರಿಕೆ ಘಟಕ ಗಳು ಸೀಮಿತ ಸಂಖ್ಯೆಯ ಕೆಲಸಗಾರ ರೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಶೇ. 50ರಷ್ಟು ಕಾರ್ಮಿಕರನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ನಿರ್ಬಂಧ ಕೈಗಾರಿಕೆಗಳನ್ನು ಸಂಕಷ್ಟಕ್ಕೀಡು ಮಾಡಿದ್ದು ಶೇ. 50ರ ನಿರ್ಬಂಧ ತೆರವು ಅವಶ್ಯ ಎಂದು ಉದ್ದಿಮೆದಾರರು ಬಯಸುತ್ತಿದ್ದಾರೆ.

ಸರಕಾರದ ನೆರವು ಹರಿಯಬೇಕು :

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳಲ್ಲಿ ಸುಮಾರು 6 ಸಾವಿರ ಕೋ.ರೂ. ಹೂಡಿಕೆ ಯಾಗಿದ್ದು, 2.80 ಲಕ್ಷ ಉದ್ಯೋ ಗಾ ವ ಕಾಶಗಳನ್ನು ಸೃಷ್ಟಿಸಿದೆ. ಹಿಂದಿನ ಲಾಕ್‌ಡೌನ್‌ ವೇಳೆ ರಾಜ್ಯಾದ್ಯಂತ ಶೇ. 20ರಷ್ಟು$ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳು ಮುಚ್ಚಿ 12ರಿಂದ 15 ಲಕ್ಷ ಉದ್ಯೋಗ ನಷ್ಟ ಉಂಟಾಗಿದೆ. 2ನೇ ಲಾಕ್‌ಡೌನ್‌ ವೇಳೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿ ಸಿದೆ. ಇಂತಹ ಕಠಿನ ಪರಿಸ್ಥಿತಿಯಲ್ಲಿ ಸರಕಾರ ಸೂಕ್ತ ಪರಿಹಾರಗಳನ್ನು ಘೋಷಿಸದಿದ್ದರೆ ಶೇ. 25ರಿಂದ ಶೇ. 30ರಷ್ಟು ಕೈಗಾರಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಗಳಿದ್ದು, ಸುಮಾರು 15ರಿಂದ 20 ಲಕ್ಷ ಉದ್ಯೋಗ ನಷ್ಟ ಉಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕೋವಿಡ್ ಸಂಕಷ್ಟದಿಂದಾಗಿ ರಾಜ್ಯದಲ್ಲಿ ಎಂಎಸ್‌ಎಂಇ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು, ಸರಕಾರ ಸೂಕ್ತ ಪರಿಹಾರಗಳನ್ನು ಘೋಷಿಸದಿದ್ದಲ್ಲಿ ಶೇ. 25ರಿಂದ ಶೇ. 30ರಷ್ಟು ಕೈಗಾರಿಕೆಗಳು ಸಂಪೂರ್ಣ ವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಗಳಿವೆ. ಎಂಎಸ್‌ಎಂಇಗಳು ಸಹಜ ಸ್ಥಿತಿಗೆ ಮರಳು ವಂತಾಗಲು ಅವುಗಳ ಹಿತಾ ಸಕ್ತಿ ಯನ್ನು ಕಾಪಾಡುವಲ್ಲಿ  ತ್ವರಿತ ವಾಗಿ ಸೂಕ್ತ ಪ್ಯಾಕೇಜ್‌ ಘೋಷಿಸು ವಂತೆ ಕಾಸಿಯಾ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಈಗಾಗಲೇ ಕೋರಿದೆ. – ಕೆ.ಬಿ. ಅರಸಪ್ಪ, ಅಧ್ಯಕ್ಷರು, ಕಾಸಿಯಾ

 

ಕೇಶವ ಕುಂದರ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ

Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ

ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ

ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ

Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ

Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.