ಬಿರುಸಿನಿಂದ ನಡೆಯುತ್ತಿದೆ ತುರ್ತು ಕಾಮಗಾರಿ
ಪಡುಪಣಂಬೂರು ಗ್ರಾ.ಪಂ.
Team Udayavani, May 28, 2019, 6:00 AM IST
ಪಡುಪಣಂಬೂರು ಪಂಚಾಯತ್‌ನ ಕಲ್ಲಾಪು ಪ್ರದೇಶದಲ್ಲಿ ಚರಂಡಿ ಸ್ವಚ್ಛವಾಗಿರುವುದು.
ಪಡುಪಣಂಬೂರು: ಕಳೆದ ವರ್ಷದಲ್ಲಿ ಇಲ್ಲಿನ ಗ್ರಾಮ ಪಂಚಾಯತ್‌ನ ಅನೇಕ ಕಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಪ್ರದೇಶಗಳನ್ನು ಮೊದಲ ಆದ್ಯತೆ ಯಂತೆ ಮುಂಜಾಗ್ರತಾ ಕ್ರಮದಿಂದ ಸುವ್ಯವಸ್ಥೆ ಮಾಡುವ ಕೆಲಸ ಭರದಿಂದ ಸಾಗುತ್ತಿದೆ.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ತೋಕೂರು, ಬೆಳ್ಳಾಯರು ಪ್ರದೇಶದಲ್ಲಿನ ಭೂ ಕುಸಿತ, ತೋಕೂರು ದೇವಸ್ಥಾನದ ಬಳಿಯ ತಡೆಗೋಡೆ ಕುಸಿತ, ವಿವಿಧ ಚರಂಡಿಗಳಲ್ಲಿನ ಹೂಳಿನಿಂದ ಮಳೆ ನೀರು ಹರಿಯದೇ ತೊಂದರೆ ಯಾಗಿದ್ದನ್ನು ಮೊದಲ ಹಂತದ ತುರ್ತು ಕಾಮಗಾರಿ ಎಂಬ ನೆಲೆಯಲ್ಲಿ ದುರಸ್ತಿ ನಡೆಯುತ್ತಿದೆ.
ಪಾದೂರು ಪೈಪ್‌ಲೈನ್ ಯೋಜನೆಯ ಕಾಮಗಾರಿಯಿಂದ ತೊಂದರೆಗೊಳಗಾದ ಪ್ರದೇಶವನ್ನು ಸಹ ಸುಸ್ಥಿಯಲ್ಲಿಡಲಾಗಿದೆ. ಭೂ ಕುಸಿತ ಪ್ರದೇಶದಲ್ಲಿ ಈಗಾಗಲೇ ಮೇಲ್ಮಟ್ಟದಲ್ಲಿ ಬರುವ ನೀರು ಸರಾಗವಾಗಿ ಹರಿಯಲು ಸೂಕ್ತವಾದ ನಾಲೆಗಳನ್ನು ನಿರ್ಮಿಸಲಾಗಿದೆ.
ಚರಂಡಿ,ಮೋರಿ ಸ್ವಚ್ಛತೆ
ಮಳೆ ನೀರು ರಸ್ತೆಗೆ ಬೀಳದಿರುವಂತೆ ಚರಂಡಿ ಮತ್ತು ಮೋರಿಗಳಲ್ಲಿನ ಹೂಳನ್ನು ತೆಗೆಯುವ ಕೆಲಸವನ್ನು ಮಾಡಲಾಗುತ್ತಿದೆ. ಪಡುಪಣಂಬೂರು, ಬೆಳ್ಳಾಯರು, 10ನೇ ತೋಕೂರು ಗ್ರಾಮದಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪಂಚಾಯತ್ ತಿಳಿಸಿದೆ.
ತೋಕೂರು ಪ್ರದೇಶದಲ್ಲಿ ಎತ್ತರದ ಗುಡ್ಡೆ ಪ್ರದೇಶದಿಂದ ಕಳೆದ ವರ್ಷ ಸಾಕಷ್ಟು ಹಾನಿಯಾಗಿದ್ದನ್ನು ಗಮನಿಸಿದ ಪಂಚಾಯತ್ ಖಾಸಗಿ ಬಿಲ್ಡರ್‌ಗಳ ಮೂಲಕವೇ ಈ ಬಾರಿ ಇದಕ್ಕೆ ಮುಕ್ತಿ ನೀಡಲಾಗಿದೆ. ಗುಡ್ಡೆ ಪ್ರದೇಶವನ್ನು ಸಮತಟ್ಟು ಮಾಡು ವಾಗ ಮುಂಜಾಗ್ರತೆಯನ್ನು ಅನುಸ ರಿಸಲು ಸಹ ಸೂಚನೆ ನೀಡಲಾಗಿದೆ. ಕುಸಿಯುವ ಮಣ್ಣಿನ ಗುಡ್ಡೆಗೆ ಆಯಾಯ ಸೈಟು ಮಾಲಕರೇ ಜವಬ್ದಾರಿ ಎಂದು ಎಚ್ಚರಿಕೆಯನ್ನು ಸಹ ನೀಡಿದೆ.
ಸಂಘ ಸಂಸ್ಥೆಗಳ ವಿಶೇಷ ನೆರವು
ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಸಂಘ ಸಂಸ್ಥೆಗಳು ತಮ್ಮ ಸ್ವಚ್ಚತಾ ಅಭಿಯಾನದಲ್ಲಿ ಚರಂಡಿಯ ದುರಸ್ತಿ, ತ್ಯಾಜ್ಯದ ವಿಲೇವಾರಿ ಮಾಡಿದ್ದಾರೆ. ಇದು ಮಳೆಗಾಲದಲ್ಲಿನ ಮುನ್ನೆಚ್ಚರಿಕೆ ಕ್ರಮಕ್ಕೆ ಸಹಕಾರ ಆಗಿದೆ. ಪಂಚಾಯತ್‌ನಿಂದಲೂ ತುರ್ತಾಗಿ ಸ್ಪಂದಿಸಲು ಸಜ್ಜಾಗಿದ್ದೇವೆ.
- ಮೋಹನ್‌ದಾಸ್,ಅಧ್ಯಕ್ಷರು,ಪಡುಪಣಂಬೂರು ಗ್ರಾ.ಪಂ.
ನೀರು ಹರಿಯಲು ವ್ಯವಸ್ಥೆ
ಗುಡ್ಡೆ ಕುಸಿತ ಹಾಗೂ ಚರಂಡಿಯ ಹೂಳು ಕಳೆದ ವರ್ಷ ಪಂಚಾಯತ್ ವ್ಯಾಪ್ತಿಯಲ್ಲಿ ತೊಂದರೆಯಾಗಿತ್ತು. ಈ ಬಾರಿ ಮೊದಲ ಆದ್ಯತೆಯನ್ನು ಅದಕ್ಕೆ ನೀಡಿದ್ದೇವೆ. ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿನ ನೀರು ಸರಾಗವಾಗಿ ಹರಿಯಲು ವ್ಯವಸ್ಥಿತವಾಗಿ ಮಾಡಲಾಗಿದೆ. ಒಂದೆರಡು ಕಡೆಗಳಲ್ಲಿ ಮಳೆ ನೀರು ಇಂಗಿಸುವ ಈ ಹಿಂದಿನ ಯೋಜನೆಯು ಸಹಕಾರಿಯಾಗಲಿದೆ.
– ಅನಿತಾ ಕ್ಯಾಥರಿನ್,ಪಿಡಿಒ,ಪಡುಪಣಂಬೂರು ಗ್ರಾ. ಪಂ.
– ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.