ಹಣದ ಜತೆಗಿರಲಿ ಭಾವನಾತ್ಮಕ ಸಂಬಂಧ
Team Udayavani, Mar 26, 2018, 5:04 PM IST
ಒಂದು ಮನೆಯ ಅಥವಾ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಯ ನಿರ್ವಹಣೆಯು ಅತ್ಯಂತ ಸೂಕ್ಷ್ಮ ಜವಾಬ್ದಾರಿಯಾಗಿದೆ. ನಮ್ಮ ಹಣಕಾಸು ನಿರ್ವಹಣೆಯ ಮೇಲೆ ನಮ್ಮ ಸಂತೋಷ, ಸಂಭ್ರಮ ನೆಲೆ ನಿಂತಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗದಂತೆ ನಿಭಾಯಿಸುವಲ್ಲಿ ಚತುರರಾಗಿದ್ದರೆ ಮಾತ್ರ ಉಳಿ ತಾಯ ಮಾಡಬಹುದು. ಆದಾಯದ ಪರಿಧಿಯೊಳಗೆ ವ್ಯವಸ್ಥಿತ ಖರ್ಚು ಇರಲೇಬೇಕು. ಮಾಸಾಂತ್ಯದಲ್ಲಿ ಕೈಸೇರುವ ವೇತನದಲ್ಲಿ ನಾವು ಮುಂದಿನ ದಿನಗಳಿಗೆ ಯೋಜನೆ ಹಾಕಿಕೊಳ್ಳಬೇಕು. ಇದರಿಂದ ಸುಲಲಿತವಾಗಿ ಜೀವನ ಸಾಗಿಸಬಹುದು.
ನಮ್ಮ ಮುಂಬರುವ ಹಣಕಾಸಿನ ವ್ಯವಹಾರವನ್ನು ಸುಲಭವಾಗಿರಿಸಿಕೊಳ್ಳಲು ನೆರವಾಗಬಹುದಾದ ಬಜೆಟ್ ಅನ್ನು ರಚಿಸಿಕೊಳ್ಳುವುದು ಅಗತ್ಯ. ನಿಮ್ಮ ಹಣಕಾಸಿನ ಪರಿಸ್ಥಿತಿಯ ನಿಖರವಾದ ಚಿತ್ರಣವನ್ನು ಪಡೆಯಲು ನಿಮ್ಮ
ಖರ್ಚು ಮತ್ತು ಆದಾಯವನ್ನು ಟ್ರ್ಯಾಕ್ ಮಾಡುವುದು ಬಹಳ ಅನಿವಾರ್ಯ. ನೀವು ಖರ್ಚು ಮಾಡಿದ ಮೊತ್ತದ ರಸೀದಿಗಳನ್ನು ಉಳಿಸಿ ಅಥವಾ ನೋಟ್ ಬುಕ್‌ನಲ್ಲಿ ಬರೆಯಿರಿ. ಪ್ರತಿ ತಿಂಗಳು ನಿಮ್ಮ ಬಿಲ್‌ಗಳನ್ನು ಪರಿಶೀಲಿಸಿ
ಮತ್ತು ಆ ಖರ್ಚುಗಳನ್ನು ನಿಮ್ಮ ಬಜೆಟ್‌ಗೆ ಸೇರಿಸಿಕೊಳ್ಳಿ.
ನಾವು ಖರ್ಚಿಗೆ ದಾರಿಯಾಗುವ ಆಹಾರ, ಉಡುಪು, ಮನೋರಂಜನೆ ಇತ್ಯಾದಿಗಳನ್ನು ಗಮ ನಿಸಿ. ಅತ್ಯಧಿಕ
ಮಾಸಿಕ ಮೊತ್ತವನ್ನು ಹೊಂದಿರುವ ವರ್ಗಗಳು ಅಥವಾ ನೀವು ಆಶ್ಚರ್ಯ ಕರವಾಗಿ ಪರಿಗಣಿಸುವ ಖರ್ಚುಗಳ
ಮೇಲೆ ನಿಯಂತ್ರಣ ಸಾಧಿಸಿದಾಗ ಹಣ ಉಳಿಸಲು ಉತ್ತಮ ಮಾರ್ಗಗಳಾಗಬಹುದು.
ನಿಮ್ಮ ಖರೀದಿಗಳನ್ನುಟ್ರ್ಯಾಕ್ ಮಾಡಿದ ಅನಂತರ, ಪ್ರತಿ ವರ್ಗದ ಮಾಸಿಕ ಅಥವಾ ಸಾಪ್ತಾಹಿಕ ಖರ್ಚುಗಳಿಗೆ ಮಿತಿಯನ್ನು ರಚಿಸಿ. ಆ ಅವಧಿಯಲ್ಲಿ ನಿಮ್ಮ ಆದಾಯಕ್ಕಿಂತ ಒಟ್ಟು ಬಜೆಟ್ ಚಿಕ್ಕದಾಗಿದ್ದರೆ ನೀವು ಉಳಿತಾಯದ ಕಡೆಗೆ ಚಲಿಸುತ್ತಿದ್ದೀರಿ ಎಂದರ್ಥ.
ಆನ್‌ಲೈ ನ್ ಶಾಪಿಂಗ್ ಕುರಿತು ಜಾಗರೂಕತೆಯಿಂದಿರಿ
ಹೌದು ಆನ್‌ಲೈನ್ ಶಾಪಿಂಗ್ ಬಂದ ಬಳಿಕ ಕ್ಯಾಸ್ ಲೆಸ್ ವ್ಯಾಪಾರ ಸುಲಭವಾಗಿದೆ. 10 ರೂ. ಮೊಬೈಲ್ ರೀರ್ಚಾಜ್‌ಗೂ ಆನ್‌ಲೈ ನ್‌ನತ್ತ ಮುಖಮಾಡುವ ಕಾಲವಿದು. ಇದು ಸುಲಭವಾಗಿದ್ದರೂ ಉಳಿತಾಯ ಖಾತೆಗಳು ಬರಿದಾಗಲು ಕಾರಣವಾಗುತ್ತಿದೆ ಎಂಬುದು ಕೂಡ ಅಷ್ಟೇ ಸತ್ಯ. ನಾವು ಪ್ರತಿಯೊಂದಕ್ಕೂ ಕಾರ್ಡ್ ನೀಡಿ ಸ್ವೆ„ಪ್ ಮಾಡಿಸಿಕೊಳ್ಳುವುದರ ಜತೆಗೆ ನಮ್ಮ ಉಳಿತಾಯ ಖಾತೆಗಳು ಬಹಳ ಬೇಗನೆ ಕ್ಯಾಸ್‌ಲೆಸ್ ಆಗುವ ಅಪಾಯ ಇದೆ. 5- 6 ವರ್ಷಗಳ ಹಿಂದೆ ಈ ವಿದ್ಯಮಾನಗಳು ಹುಟ್ಟಿಕೊಂಡಿರಲಿಲ್ಲ. ತತ್‌ಪರಿಣಾಮ ಮನೆಯ ಕೊತ್ತಂಬರಿ ಡಬ್ಬ, ಕಂಪಾಸ್ ಬಾಕ್ಸ್, ಲಘು ಟಾಂಕಿ ಮಾದರಿಯ ಕಾಣಿಕೆ ಡಬ್ಬಿಗಳು ಭಾರವಾಗುತ್ತಿದ್ದವು. ಆದರೆ ಇಂದು ಡೆಬಿಟ್ ಮೊತ್ತದ ಸ್ವೀಕೃತಿ ಪತ್ರಗಳಿಂದ ನಮ್ ಪರ್ಸ್ ತುಂಬಿದೆ.
ನೋಟುಗಳ ಮೂಲಕ ವ್ಯಾಪಾರ ನಡೆಸುತ್ತಿದ್ದ ಸಮಯದಲ್ಲಿ ನಮ್ಮ ಹಣಕಾಸಿನ ಮೆಲೆ ಪೂರ್ಣ ಪ್ರಮಾಣದ ಹಿಡಿತವನ್ನು ಸಾಧಿಸಲು ಸುಲಭವಾಗಿತ್ತು. ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ಹಣದ ಮೇಲೆ ಅತಿಯಾದ ಕಾಳಜಿ ಯಿತ್ತು. ಆದರೆ ಇದು ಎಲ್ಲವೂ ಪರೋಕ್ಷವಾಗಿ ನಡೆಯುತ್ತಿರುವುದರಿಂದ ನಮ್ಮಲ್ಲಿ ಖರ್ಚಾಗುವ ಮೊತ್ತ ಆ ಕ್ಷಣದಲ್ಲಿ ಅರಿವಿಗೆ ಬರುವುದಿಲ್ಲ. ಇದರಿಂದ ಹಣಕಾಸಿನ ಮೇಲೆ ನಮ್ಮ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೇರಳವಾಗುತ್ತಿದೆ. ನೋಟಿನ ವ್ಯವಹಾರದ ಸಂದರ್ಭದಲ್ಲಿ ನಮ್ಮಲ್ಲಿರವ ಮೊತ್ತವನ್ನು ಉಳಿಸುವುದರ ಕಡೆಗೆ ನಮ್ಮ ಮನಸ್ಸು ಹರಿಯುತ್ತಿತ್ತು. ಇಂದು ಕ್ಯಾಸ್‌ಲೆಸ್ ವಿದ್ಯಮಾನದಿಂದ ಹಣದ ಜತೆಗಿನ ಭಾವನಾತ್ಮಕ ಸಂಬಂಧಗಳು ಅಳಿ ಸು ತ್ತಿವೆ. ಹಾಗಂತ ಆಧುನಿಕ ಸೌಲಭ್ಯಗಳಿಂದ ವಿಮುಖರಾದರೆ ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ನಾವು ಹಿಂದುಳಿಯ ಬೇಕಾಗುತ್ತದೆ. ಹೀಗಾಗಿ ಹಿತ ಮಿತವಾಗಿ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಹಣದ ವಿಚಾರದಲ್ಲೂ ಇದೇ ತಂತ್ರ ಆಳವಡಿಸಿಕೊಳ್ಳುವುದು ಉತ್ತಮ.
ಉಳಿತಾಯಕ್ಕೂ ಇರಲಿ ದಾರಿ
ತಿಂಗಳ ಬಜೆಟ್‌ನಲ್ಲಿ ಉಳಿತಾಯಕ್ಕೂ ದಾರಿ ಇಡುವುದು ಉತ್ತಮ. ಆರ್‌ಡಿ, ಎಫ್ ಡಿಯಂತಹ ಖಾತೆಗಳನ್ನು ತೆರೆದು ಇದರಲ್ಲಿ ಸಣ್ಣಮಟ್ಟದಲ್ಲಿ ನಗದು ತುಂಬಿದರೂ ವರ್ಷಾಂತ್ಯಕ್ಕೆ ದೊಡ್ಡ ಮೊತ್ತದ ಹಣ ನಮ್ಮ ಕೈಯಲ್ಲಿದ್ದಂತಾಗುವುದು. ಅಲ್ಲದೇ ತುರ್ತು ಸಂದರ್ಭಗಳಲ್ಲಿ ಇದನ್ನು ಬಳಸಿಕೊಳ್ಳಬಹುದು.
ನಮ್ಮಲ್ಲಿರುವ ಆಧುನಿಕ ಅವಕಾಶಗಳನ್ನು ಬಳಸಿಕೊಳ್ಳೋಣ. ಅದರ ಜತೆಗೆ ಅನಗತ್ಯವಾಗಿ ಸಂಭವಿಸಬಹುದಾದ ಖರ್ಚುಗಳಿಗೆ ಕಡಿವಾಣ ಹಾಕಲು ಮರೆಯದಿರೋಣ. ಹಣ ನೀಡುವ ಸಂದರ್ಭದಲ್ಲಿ, ನಮ್ಮ ಜತೆಗೆ ಮೊತ್ತ ಇದ್ದ ವೇಳೆ ನಗದು ರೂಪದಲ್ಲಿ ಪಾವತಿ ಮಾಡುವ ಮೂಲವನ್ನೇ ಅನುಸರಿಸೋಣ. ಹಣದೊಂದಿಗೆ ಭಾವನಾತ್ಮಕ ಸಂಬಂಧ ಬೆಸೆ ದರೆ, ಸ್ವ್ಯೆಪ್‌ಮಾಡುವುದರ ಜತೆಗೆ ಸ್ವಲ್ಪ ಸೇವಿಂಗ್ಸ್ ಕಡೆಗೆ ಒತ್ತು ನೀಡಿದರೆ ಕ್ಯಾಸ್‌ಲೆಸ್ ಅಕೌಂಟ್‌ನಿಂದ ಪಾರಾಗಬಹುದು.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.