ಉದ್ಯೋಗ ಖಾತರಿ ಯೋಜನೆ: ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ


Team Udayavani, Jul 16, 2017, 3:40 AM IST

Employmen.gif

ಪಾಣಾಜೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ  ಬಡವರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಸರಿಯಾಗಿ ಸ್ಪಂದಿಸುವಂತೆ ಸರಕಾರಕ್ಕೆ ಬರೆಯಲು ಪಾಣಾಜೆ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಯಿತು.

ಪಾಣಾಜೆ ಗ್ರಾ.ಪಂ. ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಅವರ ಅಧ್ಯಕ್ಷತೆಯಲ್ಲಿ ಸಿ.ಎ.ಬ್ಯಾಂಕ್‌ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.ಪ್ರಸಕ್ತ ಸಾಲಿನ ವರದಿ ಮಂಡನೆಯಾದ ಬಳಿಕ ವಿಷಯ ಪ್ರಸ್ತಾಪಿಸಿದ ನಾರಾಯಣ ಪ್ರಕಾಶ್‌ ನೆಲ್ಲಿತ್ತಿಮಾರು ಅವರು ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಕಾಮಗಾರಿಗಳಿಗೆ ಸಮರ್ಪಕ ರೀತಿಯಲ್ಲಿ ಮೌಲ್ಯಮಾಪನ ಅಗುತ್ತಿದೆಯೊ ಎಂಬ ಬಗ್ಗೆಯೂ ಸಂದೇಹ ಇದೆ. ಅಲ್ಲದೆ ಕಾಮಗಾರಿ ನಡೆದು ಎಷ್ಟೋ ಸಮಯದ ನಂತರ ಬಿಲ್ಲು ಸಿಗುತ್ತದೆ. ಇದರಿಂದ ಸಾಲ ಮಾಡಿ ಸಾಮಾಗ್ರಿ ತಂದು ಕೆಲಸ ಮಾಡುವಾಗ ಹಣ ನೀಡಲು ತಡವಾದರೆ ಮಾಲೀಕನಿಗೆ ಉತ್ತರಿಸುವವರು ಯಾರು. ಇದರಿಂದಾಗಿ ಬಡವರಿಗೆ ಬಹಳ ಅನ್ಯಾಯವಾಗುತ್ತಿದೆ.ಯಾರೊ ಎಲ್ಲಿಂದಲೊ ಬಂದು ತನಿಖೆ ಮಾಡುವ ಬದಲು  ಎಲ್ಲಾ ಕಾಮಗಾರಿಗಳ ತನಿಖೆ ಮತ್ತು ಮೌಲ್ಯಮಾಪನವನ್ನು ಪಂಚಾಯತ್‌ ಗೆ ನೀಡಿದರೆ ಶೀಘ್ರವಾಗಿ ಅನುಷ್ಟಾನ ಆಗುತ್ತದೆ.  ಮಾತ್ರವಲ್ಲ ಪಂಚಾಯತ್‌ ಸದಸ್ಯರಿಗೂ ಜವಾಬ್ದಾರಿ ಬರುತ್ತದೆ ಎಂದರಲ್ಲದೆ ಈ ಬಗ್ಗೆ  ಕಾನೂನಿನಲ್ಲಿ ತಿದ್ದುಪಡಿ ಮಾಡಲು ಸರಕಾರಕ್ಕೆ ಬರೆಯಲು ಒತ್ತಾಯಿಸಿದಾಗ ಬರೆಯುವುದೆಂದು ನಿರ್ಣಯಿಸಲಾಯಿತು.

ಈಗ ಇರುವ ಪಿಡಿಒ ಅವರೇ ಬೇಕು 
ಗ್ರಾಮ ಸಭೆಯ ನೋಟೀಸ್‌ ನಲ್ಲಿ ಪಂ. ಅಭಿವೃದ್ಧಿ ಅ ಕಾರಿಯ ಹೆಸರು ದೇವಪ್ಪ ಪಿ.ಅರ್‌. ಎಂದು ಇದೆ ಅವರು ಯಾರು?  ಇಲ್ಲಿ ಇ¨ªಾರೆಯೆ ಸ್ಪಷ್ಟೀಕರಣ ನೀಡಿ ಎಂದು ರವೀಂದ್ರ ಭಂಡಾರಿ ಬೈಂಕ್ರೋಡು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮೊನ್ನೆ ಒಬ್ಬರು ಬಂದು ಹೋಗಿ¨ªಾರೆ. ಆದರೆ ಅವರು ಅ ಧಿಕಾರ ತೆಗೆದು ಕೊಂಡಿಲ್ಲ. ಅಲ್ಲದೆ  ಇವತ್ತು ಬರಲಿಲ್ಲ ಎಂದರು. ಆಗ, ನಮಗೆ ಬೇರೆ ಯಾರೂ ಬರುವುದು ಬೇಡ. ಈಗ ಇರುವ ಪಿಡಿಒ ಒಳ್ಳೆಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿ¨ªಾರೆ. ಆದುದರಿಂದ ಅವರೇ ಮುಂದುವರಿಯಲಿ. ಅವರನ್ನು ಎಂದಿಗೂ ನಾವು ಬಿಟ್ಟು ಕೊಡಲು  ತಯಾರಿಲ್ಲ ಎಂದು ನಾರಾಯಣ ಪ್ರಕಾಶ್‌ ಹಾಗೂ ಸಾರ್ವಜನಿಕರೂ ಧ್ವನಿ ಗೂಡಿಸಿದಾಗ ಸುರೇಂದ್ರ ರೈ ಅವರನ್ನೇ ಖಾಯಂ ಪಿಡಿಒ ಆಗಿ ಕೊಡಲು ಮೇಲಾ ಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು. 

ಎಚ್‌ಟಿ ಲೈನನ್ನು ಸ್ಥಳಾಂತರಿಸಿ ಸಮಸ್ಯೆ ನೀಗಿಸಲು ಆಗ್ರಹ
ಬೆಟ್ಟಂಪಾಡಿಯವರಿಗೆ ವಿದ್ಯುತ್‌ ಇದ್ದರೆ ಪಾಣಾಜೆಗೆ ಬೆಳಗ್ಗೆ ಹೆಚ್ಚಿನ ಸಾರಿ ವಿದ್ಯುತ್‌ ಇರುವುದಿಲ್ಲ. ಇಂತಹ ತಾರತಮ್ಯ ಯಾಕೆ ಎಂದು ಸಾರ್ವಜನಿಕರು ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಮೆಸ್ಕಾಂ ಇಲಾಖೆಯ ವತಿಯಿಂದ ಬೆಟ್ಟಂಪಾಡಿ ಉಪಕೇಂದ್ರದ ಜೆ.ಇ. ಪುತ್ತು ಅವರು ಮಾಹಿತಿ ನೀಡುತ್ತಿದ್ದ ವೇಳೆ ಪ್ರಸ್ತಾಪಿಸಿದ ಸಾರ್ವಜನಿಕರು ಈ ರೀತಿ ಆಗುವುದರಿಂದ ಬಹಳ ಸಮಸ್ಯೆಯಾಗುತ್ತಿದೆ ಎಂದರು. ನಾರಾಯಣ ಪ್ರಕಾಶ್‌ ಅವರು ಮಾತನಾಡಿ, ಎಚ್‌.ಟಿ. ಲೈನನ್ನು ಕಾಡಿನಿಂದ ತೆಗೆದು ಮುಖ್ಯ ರಸ್ತೆಯ ಬದಿಯಲ್ಲಿ ಮಾಡಲು ಅದೆಷ್ಟೋ ಕಾಲದಿಂದ ಹೇಳುತ್ತಾ ಬಂದಿರುತ್ತೇವೆ. ಹಾಗೆ  ಮಾಡಿದರೆ ಮರ ಲೈನ್‌ ಗೆ ಬೀಳುವುದು ತಪ್ಪುತ್ತದೆ ಅಲ್ಲದೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ ಎಂದಾಗ ಆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. 

ಬೀದಿ ನಾಯಿಗಳಿಗೆ ಲಸಿಕೆ
ಪಶು ವೈದ್ಯಾ ಕಾರಿ ಡಾ| ಪುಷ್ಪರಾಜ್‌ ಶೆಟ್ಟಿ ಮಾಹಿತಿ ನೀಡುತ್ತಿದ್ದ ವೇಳೆ, ಬೀದಿ ನಾಯಿಗಳ ಕಾಟದಿಂದ ಮಕ್ಕಳಿಗೆ ಹಾಗೂ ಪಾದಾಚಾರಿಗಳಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಕೃಷ್ಣ ಮಣಿಯಾಣಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ವೈದ್ಯರು ನಾಯಿಗಳನ್ನು ಬೀದಿಗೆ ಬಿಡುವುದು ಸಾರ್ವಜನಿಕರ ತಪ್ಪು. ಆದರೆ ಅದನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶ ಇಲ್ಲ. ಹುಚ್ಚು ನಾಯಿಗಳು ಆಗದಂತೆ ತಡೆಗಟ್ಟಲು ರೋಗ ನಿರೋಧಕ ಲಸಿಕೆ ನೀಡಲು ಒಂದು ಶಿಬಿರವನ್ನು ಮಾಡುವ ಅದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. 

ಎಂ.ಬಿ.ಬಿ.ಎಸ್‌. ವೈದ್ಯರನ್ನು ನೇಮಿಸಿ
ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಕ್ಷಣಾ ಕಾರಿ ಪದ್ಮಾವತಿ ಎಂ.ಅರ್‌. ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ರವೀಂದ್ರ ಭಂಡಾರಿ ಪಾಣಾಜೆ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಆಯುರ್ವೇದ ವೈದ್ಯರು ಇದ್ದು ಹೆಚ್ಚಿನ ಸೌಲಭ್ಯ ಇದೆ. ಆದರೆ ಗಡಿನಾಡ ಪ್ರದೇಶವಾದ ಕಾರಣ ತೀವ್ರ ಸ್ವರೂಪದ ಕಾಯಿಲೆಯ ಚಿಕಿತ್ಸೆಗೆ ದೂರದ ಪುತ್ತೂರಿಗೆ ಹೋಗಬೇಕಾಗುತ್ತದೆ. ಆದುದರಿಂದ ತಕ್ಷಣ ಇಲ್ಲಿಗೆ ಎಂ.ಬಿ.ಬಿ.ಎಸ್‌. ಆದ ಒಂದು ವೈದ್ಯರನ್ನು ನೇಮಿಸಬೇಕೆಂದು ಇಲಾಖೆಗೆ ಬರೆಯಲು ಒತ್ತಾಯಿಸಿದಾಗ ಅಂತೆಯೇ ನಿರ್ಣಯಿಸಲಾಯಿತು.

ಗ್ರಾಹಕರಿಗೆ ನಗು ಮೊಗದ ಸೇವೆ ನೀಡಿ
ಸಿಂಡಿಕೇಟ್‌ ಬ್ಯಾಂಕಿನ ಪ್ರಬಂಧಕ ಹರಿದಾಸ್‌ ಪೈ ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ನಾರಾಯಣ ಪ್ರಕಾಶ್‌ ಅವರು ನಿಮ್ಮ ಬ್ಯಾಂಕ್‌ ನ ಬಗ್ಗೆ ನಮಗೆ  ಒಳ್ಳೆ ಅಭಿಪ್ರಾಯ ಇದೆ.ಆದರೆ ಹಳ್ಳಿ ಪ್ರದೇಶವಾದ ಕಾರಣ ಇಲ್ಲಿ ಅನಕ್ಷರಸ್ಥರು, ಮಹಿಳೆಯರು ಬ್ಯಾಂಕ್‌ಗೆ ಬಂದಾಗ ಅವರಿಗೆ ಅರ್ಜಿ ಭರ್ತಿ ಮೊದಲಾದ ಕೆಲಸಗಳಿಗೆ ಸಿಬಂದಿಗಳು ಸಹಕಾರ ನೀಡಿ ನಗುಮೊಗದ ಸೇವೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದಾಗ ನಮ್ಮ ಕೆಲಸದ ಒತ್ತಡದಲ್ಲಿ ಕೆಲವು ಬಾರಿ ತೊಂದರೆ ಆಗಿರಬಹುದು ವಿನಃ ಉದ್ದೇಶ ಪೂರ್ವಕವಾಗಿ ಅಲ್ಲ. ಮುಂದೆ ಹಾಗಾಗದಂತೆ ನೋಡಿ ಕೊಳ್ಳುವ ಬಗ್ಗೆ ಪ್ರಬಂಧರು ತಿಳಿಸಿದರು. ಕನ್ನಡ ತಿಳಿದ ಸಿಬಂದಿಗಳನ್ನು ಬ್ಯಾಂಕ್‌ನಲ್ಲಿ ನೇಮಿಸುವಂತೆಯೂ ಸಭೆಯಲ್ಲಿ ಒತ್ತಾಯಿಸಿದರು.

ಪ್ರತಿಯೊಬ್ಬರು ಪಾಲ್ಗೊಳ್ಳಬೇಕು
ತಾಲ್ಲೂಕು ಪಂಚಾಯತ ಸದಸ್ಯೆ ಮೀನಾಕ್ಷಿ ಮಂಜುನಾಥ್‌ ಮಾತನಾಡಿ, ಪ್ರತಿಯೊಬ್ಬರೂ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಆರೋಗ್ಯಕರ ಚರ್ಚೆ ನಡೆದರೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗುತ್ತದೆ. ಪ್ರತಿ ಇಲಾಖೆಯಲ್ಲಿಯೂ ನಮಗೆ ಬೇರೆ ಬೇರೆ ಸೌಲಭ್ಯ ಇದೆ. ಎÇÉಾ ಇಲಾಖೆಗೆ ಆಗಾಗ ಭೇಟಿ ನೀಡುತ್ತ ಸವಲತ್ತುಗಳನ್ನು ಪಡೆದು ಕೊಳ್ಳುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೇಲ್ವಿಚಾರಕಿ ನಾಗರತ್ನ, ಪಾಣಾಜೆ ಸಹಕಾರಿ ಸಂಘದಿಂದ ಮುಖ್ಯಕಾರ್ಯನಿರ್ವಹಣಾ ಕಾರಿ ಲಕ್ಷ್ಮಣ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಅನ್ನಪೂರ್ಣೆಶ್ವರಿ, ಜಿÇÉಾ ಪಂಚಾಯತ್‌ ನ ಸಹಾಯಕ ಇಂಜಿನಿರ್ಯ ಪರಮೇಶ್ವರ, ಕೃಷಿ ಇಲಾಖೆಯ ಸಹಾಯಕ ಕೃಷಿ ಅ ಕಾರಿ ಜತ್ತಪ್ಪ ಗೌಡ, ತೋಟಗಾರಿಕೆ ಇಲಾಖೆಯ ಹೊಳೆಬಸಪ್ಪ ಕುಂಬಾರ, ಕಂದಾಯ ಇಲಾಖೆಯ ಗ್ರಾಮಕರಣಿಕ ಮಂಜುನಾಥ ಮಾಹಿತಿ ನೀಡಿದರು. ಪುತ್ತೂರು ಪಶುವೈದ್ಯಾ ಕಾರಿ ಡಾ| ಪ್ರಕಾಶ್‌ ಮಾರ್ಗದರ್ಶಿ ಅಕಾರಿಯಾಗಿದ್ದರು.

ಸಭೆಯಲ್ಲಿ ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಶಾಹುಲ್‌ ಹಮೀದ್‌, ಜಗನ್ಮೊಹನ ರೈ ಕೆದಂಬಾಡಿ, ಕೇಶವ ಮುರಳಿ, ಜಯಂತ ಕುರ್ಮಾ, ಮಮತಾ, ಯಶೋದಾ, ಮೈಮುನಾತುಲ್‌ ಮೆಹ್ರಾ, ರತ್ನಕುಮಾರಿ ಉಪಸ್ಥಿತರಿದ್ದರು. ಪಿಡಿಒ ಸುರೇಂದ್ರ ರೈ ಸ್ವಾಗತಿಸಿ ವರದಿ ವಾಚಿಸಿ ವಂದಿಸಿದರು. ಸಿಬಂದಿ ವಿಶ್ವನಾಥ, ಅರುಣಕುಮಾರ್‌, ಸೌಮ್ಯಲತಾ, ರೂಪಾಶ್ರೀ ಸಹಕರಿಸಿದರು.

ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಇಲ್ಲ
ಪಂಚಾಯತ್‌ನ ನೆಟ್‌ವರ್ಕ್‌ ಕೆಲಸಗಳಿಗೆ ಬಿಎಸ್‌ಎನ್‌ಎಲ್‌ನ ಸಂಪರ್ಕ ಹೊಂದಿದೆ. ಆದರೆ ವಾರದಲ್ಲಿ ಹೆಚ್ಚಿನ ದಿನ ನೆಟ್‌ವರ್ಕ್‌ ಸಿಗುತ್ತಿಲ್ಲ ಎಂದು ಪ್ರಸ್ತಾಪಿಸಿದ ನಾರಾಯಣ ಪ್ರಕಾಶ್‌ ಅವರು ತಿಂಗಳಿಗೆ ರೂ. 5 ಸಾವಿರವನ್ನು ಧರ್ಮಕ್ಕೆ ಪಂಚಾಯತ್‌ ಕಟ್ಟುತ್ತಿದೆ. ಆದರೆ ನೆಟ್‌ವರ್ಕ್‌ ಸರಿ ಸಿಗದೆ ಕೆಲಸ ಆಗುತ್ತಿಲ್ಲ. ಆದುದರಿಂದ ಅದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲು ತಿಳಿಸಿದರು.

ಟಾಪ್ ನ್ಯೂಸ್

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.