‘ನಿರಂತರ ಸಂಶೋಧನೆಯಲ್ಲಿ ತೊಡಗಿ’
Team Udayavani, Apr 11, 2018, 12:23 PM IST
ಮಹಾನಗರ: ವಿದ್ಯಾರ್ಥಿಗಳು ನಿರಂತರ ಸಂಶೋಧನ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದು ದೇರಳಕಟ್ಟೆ ಯೇನಪೊಯ ಕಾಲೇಜ್ ಆಫ್ ಫಾರ್ಮಸಿ ಮತ್ತು ರಿಸರ್ಚ್ ಸೆಂಟರಿನ ಪ್ರಾಂಶುಪಾಲ ಡಾ| ಮಹಮದ್ ಗುಲ್ಜಾರ್ ಅಹಮದ್ ಅವರು ತಿಳಿಸಿದರು.
ಬೆಂಗಳೂರು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಹಾಗೂ ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಕೆಂಜಾರಿನ ಶ್ರೀದೇವಿ ಫಾರ್ಮಸಿ ಕಾಲೇಜಿನಲ್ಲಿ ದಿ ನ್ಯೂ ಪ್ಯಾರಾ ಡೈಮ್ ಶಿಫ್ಟ್ ಇನ್ ಫಾರ್ಮಸಿ ಪ್ರೊಫೆಶನ್ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮುಖ್ಯಅತಿಥಿಯಾಗಿ ಮಾತನಾಡಿದರು.
ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾ ಸ್ಯುಟಿಕಲ್ ಸೈನ್ಸಸ್ ಕಾಲೇಜಿನ ಪ್ರಾಂಶುಪಾಲ ಡಾ| ಸಿ. ಎಸ್. ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದ ಮಹತ್ವದ ಕುರಿತು ವಿವರಿಸಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಶ್ರೀದೇವಿ ತಾಂತ್ರಿಕ ವಿದ್ಯಾಲಯದ ನಿರ್ದೇಶಕ ಡಾ| ಕೆ.ಇ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಣೆ
ಸಂಪನ್ಮೂಲ ವ್ಯಕ್ತಿಗಳಾದ ಕೃಪೇಶ್ ಕೃಷ್ಣನ್, ಸಲಿಲ್ ಕಲ್ಯಾಣ್‌ಪುರ್, ಡಾ| ಮಂಥನ್ ಜನೋಡಿಯ, ಡಾ|ಮಹಾದೇವ್ ರಾವ್, ಡಾ| ಎಂ.ಕೆ. ಉನ್ನಿಕೃಷ್ಣನ್ ಅವರು ಬೇರೆ ಬೇರೆ ವಿಷಯಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತಯಾರಿಸಿದ ಇ- ಪೋಸ್ಟರನ್ನು ಪರಿಶೀಲಿಸಿ ಬಹುಮಾನ ವಿತರಿಸಿದರು.
120ಕ್ಕೂ ಅಧಿಕ ಮಂದಿ ಭಾಗಿ
ಶ್ರೀದೇವಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಜಗದೀಶ್ ವಿ. ಕಾಮತ್ ಸ್ವಾಗತಿಸಿದರು. ಅಮಿತಾ ಶೆಟ್ಟಿ, ಸೌಮ್ಯಾ ಪೂಜಾರಿ, ಡಾ| ಸಿಲ್ಮಾ ಮಿನೇಜಸ್, ಜೆನ್ನಿ ಥೋಮಸ್, ಸ್ಮಿತಾ ಮತ್ತು ಬೈಜು ಮ್ಯಾಥ್ಯೂಸ್ ಸಹಕರಿ
ಸಿದರು. ವಿಚಾರ ಸಂಕಿರಣದಲ್ಲಿ ಬೇರೆ ಬೇರೆ ಕಾಲೇಜುಗಳಿಂದ 120ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದರು.
ಶ್ರೀದೇವಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳಾದ ಆನ್ನ್ ಎಲಿಝಬೆತ್ ಜಾರ್ಜ್, ಅನಿಲ ಜೋಸ್, ತೆರೆಸಾ ಆಲ್ಫೋನ್ಸಾ ಜೋಸ್, ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಕಾಲೇಜಿನ ಸಹಪ್ರಾಧ್ಯಾಪಕ ಶ್ರೀನಿವಾಸ್ ಹೆಬ್ಟಾರ್, ಯೇನಪೊಯ ಕಾಲೇಜ್ ಆಫ್ ಫಾರ್ಮಸಿಯ ಸಹಪ್ರಾಧ್ಯಾಪಕಿ ಸಂತೋಷಿ ನಾಯಕ್ ಮತ್ತು ಶ್ರೀದೇವಿ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕಿ ಸೌಮ್ಯಾ ಪೂಜಾರಿ ಬಹುಮಾನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.