ಸಮಾಜ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿ : ಸುರೇಶ್
Team Udayavani, Jul 27, 2017, 7:45 AM IST
ಕಿನ್ನಿಗೋಳಿ: ಸಮಾಜದಲ್ಲಿ ಪರಸ್ಪರ ಸ್ನೇಹ, ಸೌಹಾರ್ದವನ್ನು ಬೆಳೆಸಿ, ಸೇವೆಗಾಗಿ ಅದರ ಲಾಭವನ್ನು ವಿನಿಯೋಗಿಸಿ ಸಮಾಜ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿಯ 3181 ಜಿಲ್ಲಾ ಗರ್ವನರ್ ಎಂ.ಎಂ.ಸುರೇಶ್ ಚೆಂಗಪ್ಪ ಹೇಳಿದರು.
ಅವರು ಜು.25 ರಂದು ಕಿನ್ನಿಗೋಳಿ ರೋಟರಿಯ ರಜತ ಭವನದಲ್ಲಿ ಕಿನ್ನಿಗೋಳಿಯ ರೋಟರಿ ಕ್ಲಬ್ ಅಧಿಕೃತ ಭೇಟಿ ಸಂದರ್ಭದಲ್ಲಿ ಮಾತನಾಡಿದರು.
ಸಹಾಯಕ ಗವರ್ನರ್ ಜೊಸ್ಸಿ ಪಿಂಟೋ ಪರಿಸರ ಜಾಗೃತಿ ಹಾಗೂ ಮಾರಕ ರೋಗ ತಡೆಗೆಟ್ಟುವಿಕೆಯ ಬಗ್ಗೆ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ, ರೋಟರಿಯಂತಹ ಸೇವಾ ಸಂಸ್ಥೆಗಳು ಜನಪರವಾಗಿ ಸೇವೆ ನೀಡುತ್ತ ಸಮಾಜ ದಲ್ಲಿ ಗೌರವ ಸಂಪಾದನೆ ಮಾಡಿವೆ ಎಂದರು.
ವಲಯ ಸೇನಾನಿ ಬಾಲಚಂದ್ರ ಸನಿಲ್ ರೋಟರಿಯ ಮುಖವಾಣಿ ಸಿಂಚನವನ್ನು ಬಿಡುಗಡೆಗೊಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ನಿಕಟಪೂರ್ವ ಅಧ್ಯಕ್ಷ ರಮಾನಂದ ಪೂಜಾರಿ, ರೋಟರಿ ಜಿಲ್ಲೆಯ ಪ್ರಥಮ ಮಹಿಳೆ ದಮಯಂತಿ ಉಪಸ್ಥಿತರಿ ದ್ದರು. ಅಧ್ಯಕ್ಷೆ ಸೆವ್ರಿನ್ ಲೋಬೋ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಆಚಾರ್ಯ ವರದಿ ವಾಚಿಸಿದರು. ಎಸ್.ವಿ. ಶೆಣೈ, ಹೆರಿಕ್ ಪಾಯಸ್ ಪರಿಚಯಿಸಿದರು. ಸ್ವರಾಜ್ ಶೆಟ್ಟಿ ವಂದಿಸಿದರು. ವೇದವ್ಯಾಸ ಉಡುಪ ಕಾರ್ಯಕ್ರಮ ನಿರೂಪಿಸಿದರು.
ಟಿಬಿ ಕಾಯಿಲೆ ಮುಕ್ತಗೊಳಿಸಲು ಯೋಜನೆ
112 ವರ್ಷ ಇತಿಹಾಸವಿರುವ ರೋಟರಿ ಸಂಸ್ಥೆ ದೇಶ, ವಿದೇಶಗಳಲ್ಲಿ ವ್ಯಾಪಿಸಿ ಕೊಂಡಿದ್ದು, ಪೋಲಿಯೋ ಮುಕ್ತ ಮಾಡುವಲ್ಲಿ ಸಂಸ್ಥೆ ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದೆ. ಭಾರತ ದೇಶ ಪೋಲಿಯೋ ಮುಕ್ತ ದೇಶವಾಗಿದೆ ಎಂದು ರೋಟರಿಯ ಗವರ್ನರ್ ಎಂ.ಎಂ. ಸುರೇಶ್ ಚೆಂಗಪ್ಪ ಹೇಳಿದರು. ಅವರು ಕಿನ್ನಿಗೋಳಿ ದುರ್ಗಾ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಲ ದೇಶವನ್ನು ಟಿಬಿ ಕಾಯಿಲೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿ ವರ್ಗ ಹಾಗೂ ವೈದ್ಯಕೀಯ ಸಲಹೆಗಾರರನ್ನು ಸೇರಿಸಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಹಾಗೂ ರೋಟರಿ ಜಿಲ್ಲೆಯಲ್ಲಿ ಪರಿಸರ ಜಾಗೃತಿಯ ಬಗ್ಗೆ ಲಕ್ಷ ಸಸಿ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಅದ್ಯತೆ ಮೇರೆಗೆ ಸೋಲಾರ್ ದೀಪ ಅಳವಡಿಸುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ರೋಟರಿಯ ಸತೀಶ್ ರಾವ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.