ಎಂಜಿನಿಯರ್‌ಗಳಿಗೆ ಪ್ರತಿದಿನ ಹೊಸತು ಡಾ| ಶುಭಾಂಗ
Team Udayavani, Sep 16, 2018, 10:40 AM IST
ಮಂಗಳೂರು: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪರಿಶ್ರಮ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯ. ಪ್ರತಿದಿನ ಹೊಸತನ್ನು ಕಲಿಯುತ್ತಾ ಕಾರ್ಯನಿರ್ವಹಿಸುವುದು ಈ ಕ್ಷೇತ್ರದ ವೈಶಿಷ್ಟé ಎಂದು ಎನ್‌ಐಟಿಕೆ ಸುರತ್ಕಲ್‌ನ ಇ ಆ್ಯಂಡ್ ಇ ವಿಭಾಗದ ಪ್ರೊಫೆಸರ್ ಡಾ| ಕೆ.ಎಸ್. ಶುಭಾಂಗ ಹೇಳಿದರು.
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 158ನೇ ಜನ್ಮದಿನಾಚರಣೆಯ ಅಂಗವಾಗಿ ಶನಿವಾರ ನಡೆದ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಎಂಜಿನಿಯರ್ ಡೇ-2018 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ದ ಇನ್‌ಸ್ಟಿಟ್ಯೂಶನ್ ಆಫ್ ಎಂಜಿನಿ ಯರ್ (ಇಂಡಿಯಾ), ಕೊಡಗು, ದ.ಕ. ಮತ್ತು ಉಡುಪಿ ಎಂಜಿನಿಯರ್ ಅಸೋಸಿಯೇಶನ್ ಹಾಗೂ ಇನ್‌ಸ್ಟಿಟ್ಯೂಶನ್ ಆಫ್ ವ್ಯಾಲೂವರ್ ಮಂಗಳೂರು ಘಟಕಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ನಗರದ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ನಡೆಯಿತು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವೇಗವಾಗಿ ಕ್ಷೇತ್ರ ಪರಿಣತಿ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾಜೆಕ್ಟೆçಲ್‌ನ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಅನಿರುದ್ಧ ರಾವ್ ಕಟಪಾಡಿ ಅವರಿಗೆ ಡಾ| ಬಿ.ಆರ್. ಸಾಮಗ ಯುವ ಸಿವಿಲ್ ಎಂಜಿನಿಯರ್ ಪ್ರಶಸ್ತಿ, ಡಾ| ವಿದ್ಯಾ ಶೆಟ್ಟಿ ಕೆ. ಅವರಿಗೆ ಮಂಗಳೂರು ಲೋಕಲ್ ಸೆಂಟರ್ ಯಂಗ್ ಎಂಜಿನಿಯರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಎಸ್. ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಐಇಐ, ಎಂಎಲ್‌ಸಿಯ ಅಧ್ಯಕ್ಷ ಡಾ| ಕೆ. ಪಾಂಡುರಂಗ ವಿಠಲ್, ಕಾರ್ಯದರ್ಶಿ ಡಾ| ಬಿ.ಎಂ. ಸುನಿಲ್, ಇನ್‌ಸ್ಟಿಟ್ಯೂಶನ್ ಆಫ್ ವ್ಯಾಲೂವರ್ ಮಂಗಳೂರು ಘಟಕದ ಅಧ್ಯಕ್ಷ ಪ್ರೊ| ಜಿ.ಆರ್. ರೈ, ಕಾರ್ಯದರ್ಶಿ ಎಸ್.ಎನ್. ಭಟ್, ಕೊಡಗು, ದ.ಕ. ಮತ್ತು ಉಡುಪಿ ಎಂಜಿನಿಯರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಂ. ದಿವಾಕರ್ ಶೆಟ್ಟಿ, ಕೆಪಿಟಿ ಪ್ರಾಂಶುಪಾಲ ವಿಜಯ್‌ಕುಮಾರ್ ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಕಾರ್ಯಾ ಧ್ಯಕ್ಷ ಸತೀಶ್ ರಾವ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.