ಸರಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್‌ ಕಲಿಕೆ ಭಾಗ್ಯ


Team Udayavani, Apr 28, 2019, 6:00 AM IST

35

ಬೆಳ್ಳಾರೆ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಯೋಜನೆಗೆ ಆಯ್ಕೆ ಯಾಗಿರುವ ಬೆಳ್ಳಾರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಆಂಗ್ಲ ಭಾಷಾ ಸಂವಹನ ಕೌಶಲ್ಯ ತರಬೇತಿ ಪಡೆಯುತ್ತಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಪಾಲಕರ ಕೊರಗು ಹಾಗೂ ಇಂಗ್ಲಿಷ್‌ ವ್ಯಾಮೋಹದಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದರ ನಡುವೆಯೂ ಇಲ್ಲಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಇಂಗ್ಲಿಷ್‌ ಭಾಷಾ ಸಂಹವನ ತರಗತಿ ಪಡೆಯುತ್ತಿರುವುದು ವಿಶೇಷ.

ಬೆಳ್ಳಾರೆಯಲ್ಲಿ ಪಬ್ಲಿಕ್‌ ಸ್ಕೂಲ್ ಯೋಜನೆಯಡಿ ಅಭಿವೃದ್ಧಿ ಚಟುವಟಿಕೆಗಳು ನಿರಂತರವಾಗಿ ನಡೆ ಯುತ್ತಿದೆ. ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ ಕಾಲೇಜು ಹೀಗೆ ಮೂರು ವಿದ್ಯಾಸಂಸ್ಥೆಗಳನ್ನು ಒಳ ಗೊಂಡಿರುವ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯ ಸ್ಥಾನವನ್ನು ಅಲಂಕರಿಸಿದೆ. ಯೋಜನೆ ಯಡಿ ಕಟ್ಟಡ ಕಾಮಗಾರಿ ಹಾಗೂ ಅಭಿವೃದ್ಧಿ ಚಟುವಟಿಕೆಗಳು ನಡೆದಿದ್ದು, ಯೋಜನೆಯ ಅನುದಾನದ ಒಂದು ಭಾಗವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಟ್ಟು ಅಂಗ್ಲ ಭಾಷಾ ಸಂವಹನ ಕೌಶಲವನ್ನು ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸಮಾನವಾಗಿ ಇಲ್ಲಿನ ಸರಕಾರಿ ಶಾಲೆಯ ಮಕ್ಕಳಿಗೂ ಕನ್ನಡದೊಂದಿಗೆ ಆಂಗ್ಲ ಭಾಷೆಯ ಕಲಿಕೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇದರ ಉದ್ದೇಶ.

144 ವಿದ್ಯಾರ್ಥಿಗಳು

ಪ್ರಾಥಮಿಕ ಶಾಲೆಯ 4ರಿಂದ 6ನೇ ತರಗತಿವರೆಗಿನ 70 ವಿದ್ಯಾರ್ಥಿಗಳು, 7ರಿಂದ 9ನೇ ತರಗತಿವರೆಗಿನ 74 ವಿದ್ಯಾರ್ಥಿಗಳು ಆಂಗ್ಲ ಭಾಷಾ ಶಿಕ್ಷಣದ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ದಿನ ಬೆಳಗ್ಗಿನಿಂದ ಮಧ್ಯಾಹ್ನದವರಗೆ ತರಗತಿಗಳು ನಡೆಯುತ್ತಿದ್ದು, ಇಬ್ಬರು ವಿಶೇಷ ಶಿಕ್ಷಕಿಯರನ್ನು ನಿಯೋಜಿಸ ಲಾಗಿದೆ. ಆಂಗ್ಲಭಾಷಾ ವ್ಯಾಕರಣ, ಸಾಮಾನ್ಯ ಇಂಗ್ಲಿಷ್‌, ಮಾತುಗಾರಿಕೆ, ಗುಂಪು ಚಟುವಟಿಕೆ, ಆಂಗ್ಲಾ ಭಾಷಾ ಅಭಿನಯದ ನಾಟಕ, ಗುಂಪು ಚರ್ಚೆ ಗಳನ್ನೊಂಡ ಸಂಹವನ ಕೌಶಲವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲಭಾಷಾ ಕಲಿಕೆಯ ತರಗತಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಸೆಳೆಯುವ ವಿನೂತನ ಪ್ರಯತ್ನವನ್ನು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಮಾಡುತ್ತಿದೆ.

ರಜಾ ಸಮಯದಲ್ಲೂ ತರಗತಿ
ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಪೋಷಕರ ಮಾರ್ಗದರ್ಶನದಡಿ ಸರಕಾರಿ ಶಾಲಾ ಮಕ್ಕಳಿಗೂ ರಜೆಯ ಸದುಪಯೋಗಕ್ಕಾಗಿ ಆಂಗ್ಲ ಭಾಷೆಯ ಸಂವಹನ ತರಗತಿ ಆರಂಭಿಸಿದ್ದೇವೆ. ಪೋಷಕರ ಹಾಗೂ ವಿದ್ಯಾರ್ಥಿಗಳ ಉತ್ತಮ ಸ್ಪಂದನೆ ದೊರೆತರೆ ದಸರಾ ರಜಾ ಸಮಯದಲ್ಲೂ ತರಗತಿಗಳನ್ನು ನಡೆಸಲಾಗುವುದು.
– ಉಮಾಕುಮಾರಿ, ಉಪಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್‌ ಸ್ಕೂಲ್, ಬೆಳ್ಳಾರೆ

ಬಹಳ ಪ್ರಯೋಜನ

ವಿವಿಧ ಚಟುವಟಿಕೆಗಳೊಂದಿಗೆ ತರಗತಿಗಳನ್ನು ನಡೆಸುವುದರಿಂದ ನಮಗೆ ತುಂಬಾ ಪ್ರಯೋಜನ ವಾಗಿದೆ. ಸರಕಾರಿ ಶಾಲೆಯಲ್ಲೂ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಭಾಷೆಯ ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ವಿದ್ಯಾರ್ಥಿನಿ
– ಚಂದನಲಕ್ಷ್ಮೀ ನೆಟ್ಟಾರು,

-ಉಮೇಶ್‌ ಮಣಿಕ್ಕಾರ

ಟಾಪ್ ನ್ಯೂಸ್

army

Jammu & Kashmir: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ಹ*ತ್ಯೆ

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

Do you know why cricketers chew gum? Here’s the reason

Chewing Gum: ಕ್ರಿಕೆಟಿಗರು ಚೂಯಿಂಗ್ ಗಮ್ ಜಗಿಯುವುದು ಯಾಕೆ ಗೊತ್ತಾ? ಇಲ್ಲಿದೆ ಕಾರಣ

Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್‌ ಹನುಮಂತ ಪ್ರತಿಮೆ ಅನಾವರಣ

Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್‌ ಹನುಮಂತ ಪ್ರತಿಮೆ ಅನಾವರಣ

4

Renukaswamy Case: ಹೈಕೋರ್ಟ್‌ ನಲ್ಲಿ ದರ್ಶನ್‌ ಜಾಮೀನು ಅರ್ಜಿ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Puttur: ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ

Ashok-Rai

Rai Estate: ಪುತ್ತೂರಿನಲ್ಲಿ ನ. 2ರಂದು “ಅಶೋಕ ಜನ- ಮನ’ ಕಾರ್ಯಕ್ರಮ

2

Puttur: ಬೀಡಿ ಕಳವು; ಆರೋಪಿ ಬಂಧನ

16

Kadaba: ಮರಳುಗಾರಿಕೆ ಅಡ್ಡೆಗೆ ದಾಳಿ; ಮರಳು ಸಹಿತ ವಾಹನ ವಶ

road-mishap-11

Puttur: ಬೈಕ್‌-ಸ್ಕೂಟರ್‌ ಅಪಘಾತ; ಗಾಯ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

army

Jammu & Kashmir: ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ಹ*ತ್ಯೆ

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ

ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.