ಪುಸ್ತಕ ಓದುವ ಹವ್ಯಾಸದಿಂದ ಬದುಕಿನ ಮೌಲ್ಯ ವೃದ್ಧಿ: ಸಂಧ್ಯಾ ಪೈ


Team Udayavani, Jan 9, 2021, 3:00 AM IST

ಪುಸ್ತಕ ಓದುವ ಹವ್ಯಾಸದಿಂದ ಬದುಕಿನ ಮೌಲ್ಯ ವೃದ್ಧಿ: ಸಂಧ್ಯಾ ಪೈ

ಮಂಗಳೂರು,: ಪುಸ್ತಕಗಳನ್ನು ಓದುವುದರಿಂದ ವಿಷಯ ಸಂಗ್ರಹದ ಜತೆಗೆ ಬಹಳಷ್ಟು  ಮೌಲ್ಯಗಳನ್ನು ಬದುಕಿನಲ್ಲಿ ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ, ನಾವೆಲ್ಲರೂ ಓದುವ ಹವ್ಯಾಸವನ್ನು ರೂಢಿಸಿ ಕೊಳ್ಳ ಬೇಕು ಎಂದು ತರಂಗ ವಾರ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್‌. ಪೈ ಅವರು ಹೇಳಿದರು.

ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನಲ್ಲಿ ಶುಕ್ರವಾರ ನಡೆದ “ಉದಯವಾಣಿ-ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ದೀಪಾವಳಿ ವಿಶೇಷಾಂಕ ಧಮಾಕಾ-2020’ರ ವಿಜೇತ ಅದೃಷ್ಟ ಶಾಲಿಗಳಿಗೆ ಬಹುಮಾನ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಉದಯವಾಣಿಯ ದೀಪಾವಳಿ ವಿಶೇಷ ಸಂಚಿಕೆಯನ್ನು ಜನರು ಆಸಕ್ತಿ ಯಿಂದ ಓದುತ್ತಾರೆ ಎನ್ನುವುದು ಈ ಬಹುಮಾನ ವಿಜೇತರನ್ನು ಕಂಡಾಗ ಗೊತ್ತಾಗುತ್ತದೆ. ಬಹುಮಾನ ಯಾವತ್ತೂ ಅನಿರೀಕ್ಷಿತವಾಗಿ ಬರುತ್ತದೆ. ಜೀವನದಲ್ಲಿ ಅನಿರೀಕ್ಷಿತವಾಗಿ ಸಿಗುವ ಸಂತಸವು ನಿರೀಕ್ಷಿತ ವಿದ್ಯಮಾನಗಳಿಂದ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಬಹುಮಾನ ವಿಜೇತರನ್ನು ಅಭಿನಂದಿಸಿದರು.

ಚಿನ್ನ-ಮಾನವ ಸಂಬಂಧ ಪುರಾತನ :

ಚಿನ್ನ ಮತ್ತು ಮನುಷ್ಯನ ನಡುವಣ ಸಂಬಂಧ ಪುರಾತನವಾಗಿದ್ದು, ವೇದ ಕಾಲದಿಂದಲೂ ಇದೆ ಎಂದು ಹೇಳಲಾಗುತ್ತಿದೆ. ಚಿನ್ನದ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾ ಗುತ್ತಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವು ದರಿಂದ ಉತ್ತಮ ಲಾಭ ಗಳಿಸಲು ಸಾಧ್ಯವಿದೆ ಎಂದು ಸಂಧ್ಯಾ ಎಸ್‌. ಪೈ ಹೇಳಿದರು. ಕೋವಿಡ್‌-19 ಕಾರಣ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ನಷ್ಟ ಸಂಭವಿಸಿದರೂ ಇದೀಗ ಚೇತರಿಕೆ ಕಾಣುತ್ತಿದೆ ಎಂದು ಹೇಳಿದರು.

ಓದುವ ಹವ್ಯಾಸ ಹೆಚ್ಚಳ :

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಕೊರೊನಾ ಸಂಕಷ್ಟದ ವೇಳೆ ಜನರು ಓದುವ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿಕೊಂಡಿದ್ದರು ಎನ್ನುವುದು ಗಮನಾರ್ಹ. ಈ ಕಾರಣಕ್ಕೆ ಈ ಬಾರಿಯ ಉದಯವಾಣಿ ದೀಪಾವಳಿ ವಿಶೇಷಾಂಕದ ಮಾರಾಟ ಕೂಡ ಶೇ.40ರಿಂದ ಶೇ. 50ರಷ್ಟು ಏರಿಕೆಯಾಗಿದೆ. ಬಹುಮಾನ ವಿಜೇತರು ರಾಜ್ಯಾದ್ಯಂತ ವಿಸ್ತರಿಸಿರು ವುದು ಇದಕ್ಕೆ ನಿದರ್ಶನ. ಇದು ಉದಯವಾಣಿ ಬಗ್ಗೆ ಓದುಗರಿಗೆ ಇರುವ ಅಭಿಮಾನದ ಸಂಕೇತ ಎಂದು ಹೇಳಿದರು.

ಉದಯವಾಣಿ-ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದು, ಎರಡು ಸಂಸ್ಥೆಗಳ ನಡುವಿನ ಸಹಯೋಗ ಇದೇ ರೀತಿ ಮುಂದು ವರಿಯಲಿ ಎಂದು ಅವರು ಹಾರೈಸಿದರು.

ಸಂಬಂಧ ಇನ್ನಷ್ಟು ಬೆಳೆಯಲಿ :

ಎಸ್‌.ಎಲ್‌.ಶೇಟ್‌ ಡೈಮಂಡ್‌ ಹೌಸ್‌ನ ಆಡಳಿತ ಪಾಲುದಾರ ರವೀಂದ್ರ ಶೇಟ್‌ ಮಾತನಾಡಿ, ಪಾರದರ್ಶಕ ಹಾಗೂ ಜನಪರ ನಿಲುವಿನಿಂದಾಗಿ  ಉದಯವಾಣಿಯು ಕರಾವಳಿಯ ನಂಬರ್‌ ವನ್‌ ಪತ್ರಿಕೆಯಾಗಿ ಬೆಳೆದಿದೆ. ಈ ಪತ್ರಿಕೆಯ ಜತೆ ಸಹಯೋಗ ಹೊಂದಿ ದೀಪಾವಳಿ ವಿಶೇಷಾಂಕ ಧಮಾಕಾದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮಗೆ ಸಂತಸ ತಂದಿದೆ. ಗ್ರಾಹಕರೊಂದಿಗೆ ನಮ್ಮ ಹಾಗೂ ಉದಯವಾಣಿಯೊಂದಿಗಿನ ಓದುಗರ ಈ ವಿಶ್ವಾಸಾರ್ಹ ಪರಂಪರೆ ಹಾಗೂ ಸಂಬಂಧ ಇನ್ನಷ್ಟು ಬೆಳೆಯಲಿ ಹಾಗೂ ಮುಂದುವರಿಯಲಿ ಎಂದು ಆಶಿಸಿ ವಿಜೇತರನ್ನು ಅಭಿನಂದಿಸಿದರು.

ಶೀಘ್ರದಲ್ಲಿ ಇನ್ನೊಂದು ಮಳಿಗೆ  :

ಗ್ರಾಹಕರ ಸಂತೃಪ್ತಿಯೇ ಧ್ಯೇಯವಾಗಿಟ್ಟುಕೊಂಡು ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಕಳೆದ 74 ವರ್ಷಗಳಿಂದ ಗ್ರಾಹಕ ಸ್ನೇಹಿ ವ್ಯವಹಾರ ನಡೆಸುತ್ತಿದೆ. ಶೀಘ್ರದಲ್ಲಿ ಲೇಡಿಹಿಲ್‌ನಲ್ಲಿ  ಇನ್ನೊಂದು ಸುಸಜ್ಜಿತ ಚಿನ್ನಾಭರಣ ಮಳಿಗೆ ಆರಂಭಿಸಲಾಗುವುದು ಎಂದು ರವೀಂದ್ರ ಶೇಟ್‌ ಹೇಳಿದರು.

ಸಮಾರಂಭದಲ್ಲಿ ಸಂಸ್ಥೆಯ ಪಾಲುದಾರರಾದ ಶರತ್‌ ಶೇಟ್‌, ಪ್ರಸನ್ನ ಶೇಟ್‌, ಪ್ರಸಾದ್‌ ಶೇಟ್‌, ದೀಪ್ತಿ ಶೇಟ್‌ ಉಪಸ್ಥಿತರಿದ್ದರು. ಕಂಚನ್‌ ಶೇಟ್‌ ಅವರು ಬಹುಮಾನ ವಿಜೇತರನ್ನು ಅಭಿನಂದಿಸಿ ಹೊಸ ವರ್ಷದ ಶುಭಾಶಯ ಕೋರಿದರು.

ಎಂಎಂಎನ್‌ಎಲ್‌ ಮ್ಯಾಗಸಿನ್ಸ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌ ನ್ಯಾಶನಲ್‌ ಹೆಡ್‌ ಆನಂದ್‌ ಕೆ. ಪ್ರಸ್ತಾವನೆಗೈದು, ಈ ಬಾರಿ 3,600 ಓದುಗರು ಪ್ರತಿಕ್ರಿಯಿಸಿದ್ದು, ಆ ಪೈಕಿ 2,300 ಮಂದಿ ಸರಿ ಉತ್ತರ ಕಳುಹಿಸಿದ್ದರು. ಅವರಲ್ಲಿ ಒಟ್ಟು 27 ಅದೃಷ್ಟಶಾಲಿಗಳ ಆಯ್ಕೆ ಮಾಡಲಾಗಿದೆ. ಒಟ್ಟು 1.50 ಲಕ್ಷ ರೂ. ಮೌಲ್ಯದ ಬಹುಮಾನ ನೀಡಲಾಗುತ್ತಿದೆ ಎಂದರು.

ಉದಯವಾಣಿಯ ಮ್ಯಾಗಸಿನ್‌ ಸಂಪಾದಕ ಪೃಥ್ವೀರಾಜ್‌ ಕವತ್ತಾರ್‌ ಸ್ವಾಗತಿಸಿದರು. ಉದಯವಾಣಿಯ ಮಂಗಳೂರಿನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು. ವರದಿಗಾರ ದಿನೇಶ್‌ ಇರಾ ನಿರೂಪಿಸಿದರು.

ಉದಯವಾಣಿ ತಪ್ಪದೆ ಓದುತ್ತಾ ಬಂದಿದ್ದೇನೆ :

ಬಂಪರ್‌ ಬಹುಮಾನ ವಿಜೇತರಾದ ಹುಬ್ಬಳ್ಳಿಯ ನೇತ್ರಾವತಿ ಅಣ್ಣಪ್ಪ ಪರವಾಗಿ ಅವರ ಪತಿ ಅಣ್ಣಪ್ಪ  ಅವರು, ಮಾತನಾಡಿ  “ನಾನು ಉದಯವಾಣಿಯನ್ನು ತಪ್ಪದೆ ಓದುತ್ತಾ ಬಂದಿದ್ದೇನೆ. ಇದೀಗ ದೀಪಾವಳಿ ವಿಶೇಷಾಂಕ ಧಮಾಕಾ ಬಹುಮಾನ ಬಂದಿರುವುದು ತುಂಬಾ ಖುಷಿ ಉಂಟು ಮಾಡಿದೆ ಎಂದರು.

ಉದಯವಾಣಿಯಿಂದ ಓದುವ ಆಸಕ್ತಿ  :

ಪ್ರಥಮ ಬಹುಮಾನ ವಿಜೇತರಾದ ಗಾಯತ್ರಿ ನಾಯಕ್‌ ಪರವಾಗಿ ಅವರ ಪತಿ ದಿನಕರ ಅವರು ಮಾತನಾಡಿ, “ಉದಯವಾಣಿಯು ನನ್ನಲ್ಲಿ ಪತ್ರಿಕೆ ಓದುವ ಹವ್ಯಾಸ ಮತ್ತು ಆಸಕ್ತಿ ಬೆಳೆಸಿದೆ. ದೀಪಾವಳಿ ವಿಶೇಷಾಂಕ ಮತ್ತು ತರಂಗವನ್ನು ಮೊದಲ ಸಂಚಿಕೆಯಿಂದಲೂ ಓದುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಉದಯವಾಣಿ ಜನರ ವಿಶ್ವಾಸಾರ್ಹತೆಯನ್ನು ಗಳಿಸಿದ್ದು, ಅಚ್ಚು ಮೆಚ್ಚಿನ ಪತ್ರಿಕೆಯಾಗಿದೆ ಎಂದರು.

ಟಾಪ್ ನ್ಯೂಸ್

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Consumer-Court

Mangaluru: ಖಾಸಗಿ ಬಸ್‌ನಲ್ಲಿ ತಿಗಣೆ ಕಡಿತ: ಮಹಿಳೆಗೆ 1.29 ಲಕ್ಷ ರೂ. ಪರಿಹಾರ ನೀಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Bantwal: ಹಾಡಹಗಲೇ ಮನೆಯಿಂದ ನಗದು ಕಳವು

1-mm

State Olympics ಮಂಗಳೂರು, ಉಡುಪಿಯಲ್ಲಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

1-k-u

Karavali Utsav: ಶ್ವಾನ ಪ್ರದರ್ಶನ, ಚಲನಚಿತ್ರೋತ್ಸವ, ಯುವಮನ

Consumer-Court

Mangaluru: ಖಾಸಗಿ ಬಸ್‌ನಲ್ಲಿ ತಿಗಣೆ ಕಡಿತ: ಮಹಿಳೆಗೆ 1.29 ಲಕ್ಷ ರೂ. ಪರಿಹಾರ ನೀಡಿ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Bantwal: ಹಾಡಹಗಲೇ ಮನೆಯಿಂದ ನಗದು ಕಳವು

drowned

Kasaragod: ಬೆಂಗಳೂರಿನ ವ್ಯಕ್ತಿ ನೀರುಪಾಲು

1-mm

State Olympics ಮಂಗಳೂರು, ಉಡುಪಿಯಲ್ಲಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

1-MRPL

MRPL: ನಾಲ್ಕು ಪ್ರತಿಷ್ಠಿತ ಪಿಆರ್‌ಎಸ್‌ಐ ಶ್ರೇಷ್ಠ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.