ಯೇನಪೊಯ ಕ್ಯಾಂಪಸಿನಲ್ಲಿ ಅಣಬೆಗಳ ದಾಖಲೀಕರಣ
Team Udayavani, May 26, 2018, 10:34 AM IST
ಮಹಾನಗರ : ಒಂದು ವಿಶಿಷ್ಟ ಪ್ರಯತ್ನ ನಡೆಸಿರುವ ಯೇನಪೊಯಾ ಡೀಮ್ಡ್ ಯೂನಿವರ್ಸಿಟಿಯು ತನ್ನ ದೇರಳಕಟ್ಟೆ ಕ್ಯಾಂಪಿಸ್ಸಿನಲ್ಲಿರುವ ಎಲ್ಲ ಅಣಬೆಗಳ ದಾಖಲೀಕರಣ ಮಾಡಿದೆ. ಆರು ತಿಂಗಳ ಅವಧಿಯಲ್ಲಿ ಯೇನಪೊಯಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಅರಳಿದ ಎಲ್ಲ ಅಣಬೆ ಪ್ರಬೇಧಗಳನ್ನು ಅಧ್ಯಯನ ನಡೆಸಿ ಅವುಗಳ ದಾಖಲೆಯನ್ನು ಮಾಡಲಾಗಿದ್ದು, ಅಣಬೆ ಮತ್ತು ಅವುಗಳ ಪ್ರಬೇಧಗಳ ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ.
ಇಂತಹ ಅಪೂರ್ವ ಮಾಹಿತಿಯನ್ನು ‘ಮ್ಯಾಕ್ರೊಫಂಗಲ್ ರಿಸೋರ್ಸಸ್ ಆಫ್ ಯೇನಪೊಯಾ ಯೂನಿವರ್ಸಿಟಿ’ ಎಂಬ ಕೃತಿಯ ಮೂಲಕ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯದ ಕುಲಾಧಿಪತಿ ಯೇನಪೊಯ ಅಬ್ದುಲ್ಲಾ ಕುಂಞ ಅವರು ಕ್ಯಾಂಪಸಿನಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕುಲಪತಿ ಡಾ|ಎಂ.ವಿಜಯ ಕುಮಾರ್, ರಿಜಿಸ್ಟ್ರಾರ್ ಡಾ|ಜಿ.ಶ್ರೀಶಕುಮಾರ್ ಮೆನನ್ ಮತ್ತಿತರರು ಉಪಸ್ಥಿತರಿದ್ದರು. ಈ ಕೃತಿ ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ|ಎಂ.ಅಬ್ದುಲ್ ರಹಿಮಾನ್ ಅವರಿಗೆ ಅರ್ಪಿತವಾಗಿದೆ. ಯೇನಪೊಯ ತನ್ನ 32 ಎಕರೆ ಕ್ಯಾಂಪಸ್ ಅನ್ನು ಪರಿಸರ ಸ್ನೇಹಿವಲಯವನ್ನಾಗಿ ಮಾಡಲು ಶ್ರಮಿಸುತ್ತಿದ್ದು, ಹುಲ್ಲುಗಾವಲುಗಳು, ಅರ್ಬೊರೇಟಂ, ಬಿದಿರು ಪೊದೆಗಳು, ಔಷಧೀಯ ಸಸ್ಯ ತೋಟ, ಅಡಕೆ ತೋಟ, ಅಕೇಶಿಯ ತೋಪುಗಳಂತಹ ವಿವಿಧ ರೀತಿಯ ಸಸ್ಯ ಸಂಕುಲಗಳ ಮೂಲಕ ಕ್ಯಾಂಪಸ್ಸನ್ನು ಹಚ್ಚ ಹಸಿರಿನ ಭೂ ಪ್ರದೇಶವಾಗಿ ಮಾಡಲಾಗಿದೆ.
ಕ್ಯಾಂಪಸ್ಸಿನಲ್ಲಿ ದೊಡ್ಡದಾದ ಮಳೆನೀರು ಕೊಯ್ಲು ಕೊಳ, ಛಾವಣಿಯ ಮಳೆ ನೀರಿನ ಕೊಯ್ಲು, ತ್ಯಾಜ್ಯ ನೀರಿನ ಸಂಸ್ಕರಣ ಮತ್ತು ಮರುಬಳಕೆ ಸ್ಥಾವರ, ವರ್ಮಿ ಕಾಂಪೋಸ್ಟ್ ಘಟಕ ಮತ್ತು ಸೌರ ವಿದ್ಯುತ್ ಉತ್ಪಾದನಾ ಸೌಲಭ್ಯವನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯ ಈ ಕ್ಯಾಂಪಸಿನ ಪರಿಸರದ ನಿಯಮಿತ ಪರಿಶೋಧನೆ ನಡೆಸುವುದಲ್ಲದೆ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಲು ಇಕೊ ಕ್ಲಬ್ ಅನ್ನು ಕೂಡ ಪ್ರೋತ್ಸಾಹಿಸುತ್ತದೆ. ಇಲ್ಲಿಯ ಚಟುವಟಿಕೆಗಳು ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಸಂರಕ್ಷಣೆ ಕಾಳಜಿ ಮೂಡಿ ಮುಂದಿನ ದಿನಗಳಲ್ಲಿ ಇವುಗಳ ರಾಯಭಾರಿಗಳು ಅವರಾಗಲಿ ಎಂಬುದು ಸಂಸ್ಥೆಯ ಆಶಯವಾಗಿದೆ.
60 ಜಾತಿಯ ಅಣಬೆ
ಪ್ರೊ|ಕೆ.ಆರ್.ಶ್ರೀಧರ್ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಮ್ಯಾಕ್ರೋಫಂಗಲ್ ಅಧ್ಯಯನವನ್ನು ಕೈಗೊಂಡಿದ್ದು, ಡಾ| ಎನ್.ಸಿ. ಕರುಣ್ ಮತ್ತು ಡಾ|ಭಾಗ್ಯ ಬಿ. ಶರ್ಮಾ ಅವರು ಸಂಶೋಧನಾ ತಂಡದ ಸದಸ್ಯರು. 2016ರ ಜೂನ್-ನವೆಂಬರ್ ಅವಧಿಯಲ್ಲಿ ಅಧ್ಯಯನ ನಡೆಸಲಾಗಿದ್ದು, ಈ ಕ್ಯಾಂಪಸಿನಲ್ಲಿ ಕಂಡುಬಂದಿರುವ ಸುಮಾರು 60 ಜಾತಿಯ ಅಣಬೆಗಳಲ್ಲಿ ಸುಮಾರು 40 ಅಣಬೆಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪ್ರಕಟವಾದ 40 ಪ್ರಭೇದಗಳಲ್ಲಿ, 12 ಅಣಬೆ ಜಾತಿಗಳು ಖಾದ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.