2017 ಆರ್ಥಿಕ ಸುಧಾರಣಾ ವರ್ಷವಾಗಿ ದಾಖಲು
Team Udayavani, May 19, 2017, 2:32 PM IST
ಮಂಗಳೂರು: ದೇಶದಲ್ಲಿ ಹಲವಾರು ಮಹತ್ವದ ಪರಿವರ್ತನೆಗಳ ಮೂಲಕ 2017ನೇ ವರ್ಷವು ಆರ್ಥಿಕ ಸುಧಾರಣಾ ವರ್ಷವಾಗಿ ದಾಖಲಾಗಿದೆ ಎಂದು ಕೇಂದ್ರ ವಿತ್ತ, ಕಾರ್ಪೊರೇಟ್ ವ್ಯವಹಾರ ಖಾತೆ ಸಚಿವ ಅರ್ಜುನ್ ರಾಂ ಮೇಘಾವಾಲ್ ಹೇಳಿದರು.
ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟಾರ್ಟ್ ಅಪ್ ಮತ್ತು ಸ್ಟಾ éಂಡ್ ಅಪ್ ಯೋಜನೆಗಳ ಕುರಿತು ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಗುರುವಾರ ಜರಗಿದ ಮಾಹಿತಿ ಹಾಗೂ ಫಲಾನುಭವಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಕಷ್ಟು ಮುಂಚಿತವಾಗಿ ಬಜೆಟ್ ಮಂಡನೆ, ವಾರ್ಷಿಕ ಬಜೆಟ್‌ನೊಂದಿಗೆ ರೈಲ್ವೇ ಬಜೆಟ್ ವಿಲೀನಗೊಳಿಸಿರುವುದು, ಯೋಜನೆ ಮತ್ತು ಯೋಜನೇತರ ಎಂಬ ವಿಂಗಡಣೆಯನ್ನು ತೆಗೆದುಹಾಕಿರುವುದು ಮತ್ತು ಕ್ರಾಂತಿಕಾರಿ ಎಂದು ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜು. 1ರಿಂದ ಜಾರಿಗೆ ಬರುತ್ತಿರುವುದು ಸೇರಿದಂತೆ ಆರ್ಥಿಕ ರಂಗದಲ್ಲಿ ಹಲವಾರು ಮಹತ್ವದ ಸುಧಾರಣೆಗಳಾಗಿವೆ ಎಂದು ಸಚಿವ ಮೇಘಾವಾಲ್ ಹೇಳಿದರು.
ವಿಶ್ವಗುರು ಸ್ಥಾನದತ್ತ
ಭಾರತ ವಿಶ್ವಗುರು ಸ್ಥಾನದತ್ತ ದಾಪುಗಾಲು ಇಡುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಇತ್ತೀಚಿನ ವರದಿ ಪ್ರಕಾರ 2030ರಲ್ಲಿ ಭಾರತದ ಆರ್ಥಿಕತೆ ಜಪಾನ್, ಫ್ರಾನ್ಸ್, ಜರ್ಮನಿ ಹಾಗೂ ಇಂಗ್ಲೆಂಡನ್ನು ಹಿಂದಿಕ್ಕಲಿದ್ದು ಜಾಗತಿಕ ಆರ್ಥಿಕ ಶಕ್ತಿಧಿಯಾಗಿ ಮೂಡಿಬರಲಿದೆ ಎಂದರು. ಆರ್ಥಿಕ ಪ್ರಗತಿಯಲ್ಲಿ ಡಿಜಿಟಲ್ ವ್ಯವಹಾರ ಮಹತ್ತರ ಪಾತ್ರ ವಹಿಸಲಿದ್ದು ಬ್ಯಾಂಕ್‌ಗಳು ಅರಿವು ಮೂಡಿಸುವಲ್ಲಿ ಹೆಚ್ಚಿನ ಕ್ರಮ ವಹಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿರುವ ಮುದ್ರಾ, ಸ್ಟಾರ್ಟ್ ಅಪ್, ಸ್ಟಾ éಂಡ್ ಅಪ್ ಕ್ರಾಂತಿ
ಕಾರಿ ಯೋಜನೆಯಾಗಿದೆ. ಯುವಜನತೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಲಿದೆ. ಅರ್ಹರು ಸಾಲ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ನೆಲೆಯಲ್ಲಿ ಸ್ವತಃ ಪ್ರಧಾನಿಯವರೇ ಗ್ಯಾರಂಟಿದಾರರಾಗಿ ಸಾಲ ದೊರಕಿಸಿ ಕೊಡಲಾಗುತ್ತಿದೆ. ದೇಶದಲ್ಲಿ ಮುದ್ರಾ ಯೋಜನೆ ಗುರಿ ಮೀರಿ ಯಶಸ್ವಿಯಾಗಿದೆ ಎಂದವರು ಹೇಳಿದರು. ಮುದ್ರಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ಅವರು ವಿತರಿಸಿದರು.
ಸ್ವಾಗತಿಸಿ ಪ್ರಸ್ತಾವನೆಗೈದ ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ಕಿಲ್ ಇಂಡಿಯಾ, ಮೇಕ್ ಇಂಡಿಯ, ಮುದ್ರಾಯೋಜನೆ, ಸ್ಟಾರ್ಟ್‌ಅಪ್ ಮತ್ತು ಸ್ಟಾ éಂಡ್‌ಅಪ್ ಯೋಜನೆಗಳು ದ.ಕ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೊಂಡಿವೆ. ಇದರ ಪ್ರಯೋಜನ ಇನ್ನಷ್ಟು ಹೆಚ್ಚಿನ ಜನರಿಗೆ ತಲುಪುವ ನಿಟ್ಟಿನಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದರು. ಕಳೆದ 3 ವರ್ಷಗಳಲ್ಲಿ ಜಿಲ್ಲೆಗೆ ವಿವಿಧ ಯೋಜನೆಗಳಲ್ಲಿ 10,500 ಕೋ.ರೂ. ಬಿಡುಗಡೆಯಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಸುಮಾರು 6,000 ಕೋ.ರೂ. ಮೀಸಲಿರಿಸಲಾಗಿದೆ ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕ ಎಸ್. ಅಂಗಾರ, ಸಿಂಡಿಕೇಟ್ ಬ್ಯಾಂಕಿನ ಎಂಡಿ ಹಾಗೂ ಸಿಇಒ ಅರುಣ್ ಶ್ರೀವಾಸ್ತವ, ಕಾರ್ಪೊರೇಶನ್ ಬ್ಯಾಂಕಿನ ಎಂಡಿ ಹಾಗೂ ಸಿಇಒ ಜೈಕುಮಾರ್ ಗರ್ಗ್, ಕರ್ಣಾಟಕ ಬ್ಯಾಂಕಿನ ಎಂಡಿ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್., ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ರಾಜೇಂದ್ರ ಕುಮಾರ್, ಕೆನರಾ ಬ್ಯಾಂಕ್ ಜಿಎಂ ವಿರೂಪಾಕ್ಷಪ್ಪ, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅತಿಥಿಗಳಾಗಿದ್ದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಧಿಜರ್ ರಾಘವ ಯಜಮಾನ್ಯ ವಂದಿಸಿದರು. ದೇವದಾಸ ಶೆಟ್ಟಿ, ಉಮಾನಾಥ ಕೋಟ್ಯಾನ್ ನಿರೂಪಿಸಿದರು.
ಜಿಡಿಪಿ ಶೇ. 10ಕ್ಕೇರುವ ನಿರೀಕ್ಷೆ
ನೋಟು ಅಪಮೌಲ್ಯಗೊಳಿಸಿದ ಪರಿಣಾಮ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತವಾಗುತ್ತದೆ ಎಂದು ಕೆಲವರು ವಿಶ್ಲೇಷಣೆ ಮಾಡಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜಿಡಿಪಿಯಲ್ಲಿ ಏರಿಕೆಯಾಯಿತು. ಡಿಜಿಟಲ್ ವ್ಯವಹಾರದಿಂದ ದೇಶದ ಶೇ. 2ರಷ್ಟಿದ್ದ ಛಾಯಾ ಅರ್ಥಿಕತೆ (ಶ್ಯಾಡೋ ಎಕಾನಮಿ) ಗಣನೀಯವಾಗಿ ಕುಸಿತ ಕಂಡಿತು. ಕಾಳಧನದ ಕುಸಿತದಿಂದ ಖರೀದಿ, ಹೂಡಿಕೆ ಮತ್ತು ರಫ್ತಿನಲ್ಲಿ ಗಣನೀಯ ಏರಿಕೆಯಾಗುತ್ತದೆ. ಇದೆಲ್ಲದ ಪರಿಣಾಮವಾಗಿ ಜಿಡಿಪಿ ಪ್ರಮಾಣ ಶೇ. 10ಕ್ಕೆ ತಲುಪುವ ನಿರೀಕ್ಷೆ ಇದ್ದು ಇದರಲ್ಲಿ ದಕ್ಷಿಣ ಭಾರತ, ಕರ್ನಾಟಕ ರಾಜ್ಯದ ಪಾಲು ಗಣನೀಯವಾಗಿರುತ್ತದೆ ಎಂದು ಸಚಿವ ಅರ್ಜುನ್ ರಾಂ ಮೇಘಾÌಲ್ ವಿವರಿಸಿದರು.
ಕೇಂದ್ರ ಪರಿಸರ ಖಾತೆ ಸಚಿವ ಅವರ ಅನಿಲ್ ಮಾಧವ ದವೆ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಮುದ್ರಾಯೋಜನೆ: ಜಿಲ್ಲೆಯಲ್ಲಿ ಉತ್ತಮ ಸಾಧನೆ
ಮುದ್ರಾ ಯೋಜನೆಯಲ್ಲಿ ದೇಶದಲ್ಲಿ ಅತ್ಯುತ್ತಮ 10 ಸಾಧಕರ ಪಟ್ಟಿಯಲ್ಲಿ ದ.ಕ. ಜಿಲ್ಲೆ ಒಳಗೊಂಡಿದೆ. ಒಟ್ಟು 50,706 ಫಲಾನುಭವಿಗಳು, ಸಾಲ ಪಡೆದುಕೊಂಡಿದ್ದು, 702.71 ಕೋಟಿ ರೂ. ಸಾಲ ಬಿಡುಗಡೆಯಾಗಿರುತ್ತದೆ. ಸ್ಮಾರ್ಟ್ ಅಪ್ ಮತ್ತು ಸ್ಟಾ éಂಡ್ ಅಪ್ ಇಂಡಿಯಾ 80 ಪ್ರಸ್ತಾವನೆಗಳು ಮಂಜೂರಾಗಿದ್ದು 15.54 ಕೋಟಿ ರೂ. ಸಾಲ ಬಿಡುಗಡೆ ಮಾಡಲಾಗಿದೆ. ಒಟ್ಟು 3,68,562 ಖಾತೆಗಳನ್ನು ಜನ-ಧನ ಯೋಜನೆಯಡಿ ತೆರೆಯಲಾಗಿದ್ದು ಇದರಲ್ಲಿ 2,77,401 ರೂಪೇ ಕಾರ್ಡ್‌ಗಳನ್ನು ನೀಡಲಾಗಿದೆ. 2,25,980 ಖಾತೆಗಳು ಸಕ್ರಿಯವಾಗಿವೆ. ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ 2015-16ನೇ ಸಾಲಿನಲ್ಲಿ 228 ಫಲಾನುಭವಿಗಳಿಗೆ ಸಾಲ ಮಂಜೂರಾಗಿದ್ದು ಮಾರ್ಜಿನ್ ಮನಿ ಆಗಿ 8.95 ಕೋರೂ. ನೀಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.