‘ಪರಿಸರ ಜಾಗೃತಿ ಸಮಾಜಕ್ಕೆ ದೊಡ್ಡ ಕೊಡುಗೆ’
Team Udayavani, Jul 5, 2017, 3:30 AM IST
ಮಡಂತ್ಯಾರು: ಜನಸಂಖ್ಯೆ ಹೆಚ್ಚಳದಿಂದ ಭೂಬಳಕೆ ಹೆಚ್ಚಾಗಿ ಕಾಡು ನಾಶವಾಗುತ್ತಿದೆ. ಕಾಡಿನ ನಾಶದಿಂದ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಪ್ರತಿಯೊಬ್ಬರಲ್ಲಿಯೂ ಪರಿಸರ ಜಾಗೃತಿ ಮೂಡಿದರೆ ಅದುವೇ ಸಮಾಜಕ್ಕೆ ದೊಡ್ಡ ಕೊಡುಗೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಮಂಗಳವಾರ ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗ, ಮಂಗಳೂರು ಉಪ ವಿಭಾಗ, ಬೆಳ್ತಂಗಡಿ ವಲಯ ಹಾಗೂ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಮಚ್ಚಿನ ಗ್ರಾಮ ಮತ್ತು ಬೆಳ್ತಂಗಡಿ ತಾಲೂಕು ಮರದ ವ್ಯಾಪಾರಸ್ಥರು, ಬೆಳ್ತಂಗಡಿ ಸಾ ಮಿಲ್ಲು ಮಾಲಕರ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ‘ನೀರಿಗಾಗಿ ಅರಣ್ಯ 2017-18’, ‘ಕೋಟಿವೃಕ್ಷ ಆಂದೋಲನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ರಾಜ್ಯದಲ್ಲಿ ಬರ ಬರಲು ಕಾರಣ ಕಾಡಿನ ನಾಶ. ರಾಜ್ಯವನ್ನು ಉಳಿಸುವ ಇಚ್ಛೆ ಇದ್ದರೆ ಕಾಡು ಉಳಿಸಬೇಕು. ಗಿಡ ನೆಡುವುದಕ್ಕಿಂತ ಹೆಚ್ಚು ಮರ ಕಡಿಯುತ್ತಿದ್ದೇವೆ. ಮುಂದಿನ ಪೀಳಿಗೆ ಉಳಿಯಲು ಕಾಡು ಅತೀ ಅಗತ್ಯ ಎಂದು ಹೇಳಿದರು.
ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಲತಾ, ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯ ತಾಂತ್ರಿಕ ಸಹಾಯಕ ಎಸ್.ಎನ್. ಸತೀಶ್ ಬಾಬಾ ರೈ, ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ| ಹರ್ಷ ಎಂ. ಸಂಪಿಗೆತ್ತಾಯ, ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಬಿ.ಸುಬ್ಬಯ್ಯ ನಾಯ್ಕ, ಬೆಳ್ತಂಗಡಿ ಸಾ ಮಿಲ್ಲು ಸಂಘದ ಅಧ್ಯಕ್ಷ ಎಂ. ರಾಜೇಶ್ ಪ್ರಭು, ಬೆಳ್ತಂಗಡಿ ನಿವೃತ್ತ ಅರಣ್ಯ ಅಧಿಕಾರಿ ಸುಂದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು. ಡಾ| ಹರ್ಷ ಸಂಪಿಗೆತ್ತಾಯ ಸ್ವಾಗತಿಸಿದರು. ಸುಬ್ಬಯ್ಯ ನಾಯ್ಕ ವಂದಿಸಿದರು. ಪ್ರೇಮದಾಸ್ ಸಿಕ್ವೇರ ಮತ್ತು ಸತೀಶ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.
ಅರಣ್ಯ ಜಮೀನು ಅರಣ್ಯಕ್ಕೆ ಬಿಟ್ಟುಬಿಡಿ
ಅರಣ್ಯ ಅತಿಕ್ರಮಣ ಜಾಸ್ತಿ ಯಾಗಿದೆ. ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡುತ್ತಿರುವ ಪ್ರದೇಶಕ್ಕೆ ತೆರವುಗೊಳಿಸಲು ಹೋದರೆ ಒಕ್ಕಲೆಬ್ಬಿಸುವುದು ಎನ್ನುತ್ತಾರೆ. ರಾಜ್ಯದಲ್ಲಿ ಶೇ. 75ರಿಂದ 80ರಷ್ಟು ಭಾಗ ಕಂದಾಯಕ್ಕೆ ಸೇರಿದೆ. ಅರಣ್ಯ ಜಮೀನನ್ನು ಅರಣ್ಯಕ್ಕೆ ಬಿಟ್ಟು ಬಿಡಬೇಕು.
– ರಮಾನಾಥ ರೈ, ಅರಣ್ಯ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.