“ಪರಿಸರ ಸಂರಕ್ಷಣೆಗೆ ಹೆಚ್ಚಿನ ಗಮನ ಅಗತ್ಯ’
Team Udayavani, Mar 2, 2020, 6:12 AM IST
ಮಂಗಳೂರು: ಪರಿಸರ ಸಂರಕ್ಷಣೆಯ ಬಗ್ಗೆ ಪ್ರಸ್ತುತ ದಿನಗಳಲ್ಲಿ ಹೆಚ್ಚು ಆಸ್ಥೆ ನೀಡಿ ಮುನ್ನೆಚ್ಚರಿಕೆಯಿಂದ ಕಾರ್ಯ ನಡೆಸಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ ಎಂದು ಪರಿಸರ ಹೋರಾಟಗಾರ ಡಿಯಾಗೋ ಬಸಾöವ್ ಸಿದ್ಧಿ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ವತಿಯಿಂದ ಪರಿಸರಾಸಕ್ತರು ಸೇರಿಕೊಂಡು ನಗರದ ತಣ್ಣೀರುಬಾವಿ ಟ್ರೀಪಾರ್ಕ್‌ನ ಪ್ರಕೃತಿಯ ಮಡಿಲಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಎರಡನೇ ಪರಿಸರ ಸಮ್ಮೇಳನ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯದ ಪದ್ಮಶ್ರೀ ತುಳಸೀಗೌಡ ಮಾತನಾಡಿ, ಪರಿಸರ ಉಳಿಯದಿದ್ದರೆ ಭವಿಷ್ಯದಲ್ಲಿ ಈ ನೆಲದಲ್ಲಿ ನೆಮ್ಮದಿಯ ದಿನಗಳನ್ನು ಕಾಣಲು ಸಾಧ್ಯವೇ ಇಲ್ಲ. ಇದು ಕೇವಲ ಬಾಯಿ ಮಾತಿನ ಹೇಳಿಕೆಯಲ್ಲ; ಬದಲಾಗಿ ಮುಂಬರುವ ದಿನಗಳ ಆತಂಕ ಎಂದರು.
ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮಾತ ನಾಡಿ ವಿದ್ಯಾರ್ಥಿಗಳು, ಯುವ ಸಮುದಾಯಕ್ಕೆ ಪರಿಸರದ ಬಗ್ಗೆ ಆಸಕ್ತಿ ಹುಟ್ಟುವ ನೆಲೆಯಲ್ಲಿ ಮಾಡಿರುವ ಸಮ್ಮೇಳನ ಅರ್ಥಪೂರ್ಣ. ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಸಮ್ಮಾನ
ಎತ್ತಿನಹೊಳೆ ಸಹಿತ ವಿವಿಧ ಪರಿಸರ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾ ಲಯದಲ್ಲಿ ಹೋರಾಟ ನಡೆಸುತ್ತಿರುವ ಡಾ| ರವೀಂದ್ರನಾಥ ಶಾನುಭಾಗ್ ಅವರಿಗೆ “ನ್ಯಾಯಶ್ರೀ’, ಸುಕ್ರಿ ಬೊಮ್ಮಗೌಡ ಮತ್ತು ಕುತ್ತಾರು ತಿಮ್ಮಕ್ಕ ಅವರಿಗೆ “ಜನಪದ ಶ್ರೀ’, ತುಳಸಿಗೌಡ ಮತ್ತು ಡಿಯಾಗೋ ಬಸಾöವ್ ಸಿದ್ಧಿ ಅವರಿಗೆ “ವನಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಎನ್‌ಇಸಿಎಫ್ ರಾಜ್ಯಾಧ್ಯಕ್ಷ ಸ್ವರ್ಣ ಸುಂದರ್ ಸ್ವಾಗತಿಸಿ, ನಯನಾ ಶೆಟ್ಟಿ ನಿರೂಪಿಸಿದರು. ಎನ್‌ಇಸಿಎಫ್ ಸಂಚಾಲಕ ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ಕರಾವಳಿಯಲ್ಲಿ
ಕಡಲಾಮೆಗಳೇ ಇಲ್ಲ!
ಸಂಶೋಧನ ವಿದ್ಯಾರ್ಥಿ ಮಮತಾ ಕೆ.ಎಸ್. ಮಾತನಾಡಿ, ಲಕ್ಷಾಂತರ ಸಂಖ್ಯೆಯಲ್ಲಿ ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಡುತ್ತಿದ್ದ ಕಡಲಾಮೆ ಗಳು ಕಳೆದ ಏಳು ವರ್ಷಗಳಿಂದ ದಡಕ್ಕೆ ಬಂದಿಲ್ಲ. ಮಂಗಳೂರಿನಿಂದ ಕಾರವಾರದ ವರೆಗೆ ಕಡಲು ತೀವ್ರವಾಗಿ ಕಲುಷಿತಗೊಂಡಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಹಡಗುಗಳ ತ್ಯಾಜ್ಯ ತೈಲವನ್ನು ಸಮುದ್ರಕ್ಕೆ ಸುರಿಯುತ್ತಿರುವುದರಿಂದಲೂ ಜಲ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರ ಯೋಜನೆ ರೂಪಿಸಬೇಕು ಎಂದರು.
ಗಮನ ಸೆಳೆದ “ಕೋರ್ಟ್ ಕಲಾಪ’!
ಪರಿಸರ ಸಮ್ಮೇಳನದ ಹಿನ್ನೆಲೆಯಲ್ಲಿ ವಿಭಿನ್ನವಾಗಿ “ಕೋರ್ಟ್ ಕಲಾಪ’ ನಡೆಯಿತು. ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ ಶಾನುಭಾಗ್ ಭಾಗವಹಿಸಿದ್ದರು. ಸುಕ್ರಿ ಬೊಮ್ಮಗೌಡ, ತುಳಸೀ ಗೌಡ ವಾದ ಮಂಡಿಸಿ, ಒಂದು ಕಡೆ ಮರಗಳನ್ನು ಬೆಳೆಸುತ್ತಿದ್ದರೆ, ಮತ್ತೂಂದೆಡೆ ವಿವಿಧ ಯೋಜನೆಗಳಿಗೆ ಅವ್ಯಾಹತವಾಗಿ ಮರ ಹನನ ಮಾಡಲಾಗುತ್ತಿದೆ. ಹಾಗಾಗಿ ಸರಕಾರದ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸವೂ ಆಗಬೇಕು ಎಂದರು.
ಶಿವಮೊಗ್ಗದ ಪರಿಸರ ಹೋರಾಟಗಾರ ಅಖೀಲೇಶ್ ಚಿಪ್ಪಳಿ ಮಾತನಾಡಿ, ಪರಿಸರ ರಕ್ಷಣೆಗೆ ಮಾಧವ ಗಾಡ್ಗಿàಳ್ ವರದಿ ಜಾರಿಯಾಗಬೇಕು ಎಂದರು.
ವಕೀಲರಾದ ಸುಮಾ ಆರ್. ನಾಯಕ್, ಎಸ್.ಬಿ. ಪಾಟೀಲ್ ರಾಯಚೂರು, ಅಭಿಜಿತ್, ನಟರಾಜ್, ಜೀವನ್‌ದಾಸ್ ಶೆಟ್ಟಿ, ಜಿನೇಂದ್ರ ಬಿ., ರಮೇಶ ನಾಡಗೌಡ ಅಭಿಪ್ರಾಯ ಮಂಡಿಸಿದರು. ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಇಸಿಎಫ್ ಸಂಚಾಲಕ ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.