ಸಸ್ಯ ಪಾಲನ ಕೇಂದ್ರದಲ್ಲಿ ಪರಿಸರ ಪಾಠ
Team Udayavani, Mar 18, 2019, 4:58 AM IST
ಸುಬ್ರಹ್ಮಣ್ಯ : ಕಾಡಿನ ಹಸಿರೆಲ್ಲ ಮಾಯವಾಗುತ್ತಿದೆ. ನೀರು, ಗಾಳಿ, ಮಣ್ಣು ಕೂಡ ವಿಷವಾಗುತ್ತಿದೆ. ಇವನ್ನೆಲ್ಲ ಗಮನಿಸುವಾಗ ಭವಿಷ್ಯದ ಕುರಿತು ಭಯ ಮೂಡುತ್ತದೆ. ಹೀಗಾಗಿ ಎಳೆಯರಿಗೆ ಸೃಷ್ಟಿಯ ಸೌಂದರ್ಯ ಪರಿಚಯಿಸಿ ಭವಿಷ್ಯದ ಹೊಂಗನಸು ಬಿತ್ತುವ ಕೆಲಸ ಆಗಬೇಕು. ನಾಳೆಯ ವಾರಸುದಾರ ಮಕ್ಕಳಿಗೆ ಅರಿವು ಮೂಡಿಸುವ ಪರಿಸರ ಶಿಕ್ಷಣ ಇಂದಿನ ಅಗತ್ಯ. ಇದೆಲ್ಲವನ್ನು ಮನಗಂಡ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಆಂಗ್ಲ ಭಾಷಾ ವಿಭಾಗದ
ಮುಖ್ಯಸ್ಥರು ಪ್ರಕೃತಿಯಲ್ಲಿ ಒಂದು ದಿನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದರು.
ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ದ್ವಿತೀಯ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ ಪ್ರಕೃತಿಯೊಂದಿಗೆ ಒಂದು ದಿನದ ಕಾರ್ಯಕ್ರಮ ರವಿವಾರ ನಡೆಯಿತು. ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯದ ಸಹಕಾರದಲ್ಲಿ ಕಾಲೇಜಿನ ಸುಮಾರು 250 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರವಿವಾರ ರಜಾ ದಿನವಾಗಿದ್ದರೂ, ಮಕ್ಕಳು ಕಾಲೇಜಿಗೆ ಬಂದರು. ಅಲ್ಲಿಂದ ದೇವರಹಳ್ಳಿಯಲ್ಲಿನ ಕಲ್ಲಾಜೆ ಸಸ್ಯ ಪಾಲನ ಕ್ಷೇತ್ರಕ್ಕೆ ತೆರಳಿ ಪರಿಸರ ಸಂರಕ್ಷಣೆ ಪಾಠ ಕಲಿಯುವಿಕೆಯಲ್ಲಿ ತೊಡಗಿಸಿಕೊಂಡರು.
ಸ್ವಚ್ಛತಾ ಕಾರ್ಯ ನಡೆಸಿದರು
ಸಸ್ಯಪಾಲನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಅಲ್ಲಿರುವ ವಿವಿಧ ಜಾತಿಯ ಹಣ್ಣಿನ ಸಸಿಗಳು, ವಿವಿಧ ಜಾತಿಯ ಮರಗಳ ಸಸಿಗಳ ಬಗ್ಗೆ ಪರಿಚಯಿಸಿಕೊಂಡರು. ವಿದ್ಯಾರ್ಥಿಗಳು ಮಣ್ಣಿನಲ್ಲಿ ಬೆರೆತು ಬೀಜದುಂಡೆ ಸಿದ್ಧಪಡಿಸಿದರು. ಮಣ್ಣು ಅಗೆದು ನೀರು ಹಾಯಿಸಿ ಮಣ್ಣು ಹದಗೊಳಿಸಿ ಚಿಕ್ಕ ಉಂಡೆಗಳನ್ನಾಗಿ ಪರಿವರ್ತಿಸಿ ಅದರ ಮಧ್ಯೆ ಬೀಜವನ್ನು ಹುದುಗಿಸಿಟ್ಟು ಹಣ್ಣಿನ ಬೀಜದ ಉಂಡೆಗಳನ್ನು ಸಿದ್ಧಪಡಿಸಿದರು. ಇನ್ನುಳಿದ ಮಕ್ಕಳು ಸಸಿ ತುಂಬಿಸಿಡುವ ತೊ ಟ್ಟೆಗಳಿಗೆ ಮಣ್ಣು ತುಂಬಿಸಿ ಸಸಿಗಳನ್ನು ನೆಟ್ಟರು. ವಿದ್ಯಾರ್ಥಿನಿ ಯರು ಕೇಂದ್ರದಲ್ಲಿ ಸಂಗ್ರಹಿಸಿಡಲಾದ ಸಸಿಗಳ ಮಧ್ಯೆ ಬೆಳೆದು ಕೊಂಡಿರುವ ಅನುಪಯುಕ್ತ ಗಿಡಗಂಟಿ, ಕಳೆಗಳನ್ನು ತೆಗೆದು ಸ್ವತ್ಛ ಗೊಳಿಸಿದರು.
ಪ್ರಾಯೋಗಿಕ ಉದ್ದೇಶ
ಕಾಲೇಜು ಶಿಕ್ಷಣದ ಜತೆಗೆ ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಪಠ್ಯಕ್ರಮ ಚೌಕಟ್ಟಿನ ಜತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಶಿಕ್ಷಣವೂ ಕಡ್ಡಾಯವಾಗಿರಬೇಕು. ಇವೆಲ್ಲವನ್ನು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಜಾಗೃತಗೊಳಿಸುವ ಮೂಲಕ ಶಿಕ್ಷಣವನ್ನು ಆಹ್ಲಾದಕರವಾಗಿಯೂ ಕಲಿಕೆಯ ಫಲಶೃತಿಯನ್ನು ಶಿಸ್ತುಬದ್ಧವಾಗಿ ನಡೆಸಲು ಪ್ರಾಯೋಗಿಕ ಉದ್ದೇಶ ಇರಿಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೊಸತನ ಹುಡುಕುವ ಯತ್ನ
ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಮತ್ತು ಭೂಮಿಯನ್ನು ಹಸಿರಾಗಿ ಇಡಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಕೆ ಅಂಕ ಕೂಡ ನೀಡಲಾಗುತ್ತದೆ. ಶಿಕ್ಷಣದಲ್ಲಿ ಹೊಸತನ್ನು ಹುಡುಕುವ ಪ್ರಯತ್ನವಿದು.
– ಡಾ| ಗೋವಿಂದ
ಎನ್.ಎಸ್. ಮುಖ್ಯಸ್ಥರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.