ಕುಕ್ಕೆಯಲ್ಲಿ ಪರಿಸರ ಸ್ನೇಹಿ ತ್ಯಾಜ್ಯ ಘಟಕ
Team Udayavani, Dec 8, 2018, 9:57 AM IST
ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ವತ್ಛತೆ ಕಾಪಾಡುವುದು ಬಹು ದೊಡ್ಡ ಸಮಸ್ಯೆಯಾಗಿತ್ತು. ಕುಕ್ಕೆ ನಗರವನ್ನು ಸ್ವತ್ಛ ಸುಂದರವನ್ನಾಗಿಸುವ ದಶಕಗಳ ಬೇಡಿಕೆ ಈಗ ಈಡೇರುವ ಕಾಲ ಹತ್ತಿರವಾಗಿದೆ.
ಜಿ.ಪಂ. ಸಹಕಾರದಿಂದ ಸುಬ್ರಹ್ಮಣ್ಯ ಗ್ರಾ.ಪಂ. ವತಿಯಿಂದ ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸುವ ಕಾಮಗಾರಿ ಆರಂಭಗೊಂಡಿದೆ. ವಾರದಲ್ಲಿ ಘಟಕ ಕಾರ್ಯಾರಂಭಿಸಲಿದೆ. ರಾಜ್ಯದಲ್ಲಿ ಮೊದಲ ಪ್ರಯೋಗವಾಗಿ ಕುಕ್ಕೆಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದೆ.
ಗ್ರಾ.ಪಂ. ಮುತುವರ್ಜಿ
ಘಟಕ ಸ್ಥಾಪನೆಗೆ 34 ಲಕ್ಷ ರೂ. ವೆಚ್ಚ ವ್ಯಯಿಸಲಾಗುತ್ತಿದೆ. ಎರಡು ದಹನ ಚಿಮಿಣಿ ಅಳವಡಿಸುವ ಕಾರ್ಯ. ಘಟಕದಲ್ಲಿ ನಡೆಯುತ್ತಿದೆ. ಒಂದು ಯಂತ್ರ 17 ಲಕ್ಷ ರೂ. ಮೌಲ್ಯ ಹೊಂದಿದ್ದು, 2 ಯಂತ್ರಕ್ಕೆ ಒಟ್ಟು 34 ಲಕ್ಷ ರೂ. ವೆಚ್ಚ ತಗಲಲಿದೆ. ಗ್ರಾ.ಪಂ.ನ ಸ್ವಂತ ಅನುದಾನ ಹಾಗೂ 14ನೇ ಹಣಕಾಸು ನಿಧಿ ಮತ್ತು ಸ್ವತ್ಛ ಭಾರತ್ ಯೋಜನೆಯ ಸಹಕಾರದಿಂದ ಘಟಕ ತೆರೆಯಲಾಗುತ್ತಿದೆ. ಭರತ್‌ರಾಜ್ ಕಾರ್ಪೊರೇಶನ್ ಶೀತಲ್ ಮೆನ್ಸ್ ಸಂಸ್ಥೆ ಇದರ ಗುತ್ತಿಗೆ ವಹಿಸಿಕೊಂಡಿದೆ. ಕಾರ್ಯಾರಂಭ ಆದೇಶ ಪಡೆದು ಯಂತ್ರ ಅಳವಡಿಸುವ ಕಾರ್ಯ ಆರಂಭಿಸಿದೆ. ಮುಂದಿನ ಐದು ದಿನಗಳಲ್ಲಿ ಯಂತ್ರ ಜೋಡಣೆ ಕಾರ್ಯ ಮುಗಿದ ಬಳಿಕ ಘಟಕ ಕಾರ್ಯಾರಂಭ ಮಾಡಲಿದೆ. ಮುಂದಿನ 3 ತಿಂಗಳು ಕಾಲ ಗುತ್ತಿಗೆ ವಹಿಸಿ ಕೊಂಡ ಸಂಸ್ಥೆಯವರು ಇದರ ನಿರ್ವಹಣೆ ಮಾಡಲಿದ್ದು, ಈ ಅವಧಿಯಲ್ಲಿ ಸ್ಥಳೀಯ ಪಂಚಾಯತ್ ಸಿಬಂದಿಗೆ ಅವರು ತರಬೇತಿ ನೀಡುತ್ತಾರೆ. ಅನಂತರ ಪಂಚಾಯತ್‌ಗೆ ಘಟಕ ಹಸ್ತಾಂತರವಾಗಲಿದೆ.
ಗಂಟೆಗೆ 120 ಲೀ. ನೀರು
ಘಟಕ ನಿರ್ವಹಣೆಗೆ ಇಬ್ಬರು ಸಿಬಂದಿ ಆವಶ್ಯಕತೆ ಇದೆ. ಗಂಟೆಗೆ 120 ಲೀ. ನೀರು ಖರ್ಚಾಗಲಿದೆ. ಕಾರ್ಬನ್ ಡೈ- ಆಕ್ಸೆ „ಡ್ ಬೆರೆತ ನೀರನ್ನು ಮರು ಬಳಕೆಗೆ ಸಿದ್ಧಪಡಿಸುವ ತಂತ್ರಜ್ಞಾನವೂ ಇದರಲ್ಲಿ ಸೇರಿದ್ದು ವಿಶೇಷವಾಗಿದೆ. ಯಂತ್ರದಲ್ಲಿ ಉತ್ಪತ್ತಿಯಾಗುವ ಹಬೆಯನ್ನು ಆಹಾರ ತಯಾರಿಕ ಬಾಯ್ಲರ್‌ಗೆ, ವಿದ್ಯುತ್ ಉತ್ಪಾದನೆಗೆ ಬಳಸಬಹುದು. ಒಂದು ಬಾರಿ ಕಸ ಉರಿದಾಗ ಬೃಹತ್ ಪ್ರಮಾಣದ ಬೂದಿ ಲಭ್ಯವಾಗಲಿದ್ದು, ಗೊಬ್ಬರವಾಗಿ ಬಳಸಲು ಅವಕಾಶವಿದೆ.
ಸ್ವಚ್ಚ ಸಮಿತಿ ರಚನೆ
ಖಾಸಗಿ ಸಹಭಾಗಿತ್ವದಲ್ಲಿ ದತ್ತಿನಿಧಿ ಸ್ಥಾಪಿಸಿ ಪೌರ ಕಾರ್ಮಿಕರನ್ನು ಬಳಸಿ ನಿರ್ವಹಣೆ ಮಾಡುವುದು. ಹಾಗೆಯೇ ಸ್ಥಳೀಯ ಸ್ವಚ್ಚ ಸಮಿತಿ ರಚಿಸುವ ಚಿಂತನೆ ಇಟ್ಟುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಎನ್. ಎಸ್. ಅವರು ಹೇಳಿದರು.
‘ಉದಯವಾಣಿ’ ವರದಿ ಪರಿಣಾಮ
ಪ್ರವಾಸಿ ತಾಣ ಮತ್ತು ಭಕ್ತರ ಪುಣ್ಯ ಭೂಮಿ ಕುಕ್ಕೆಯಲ್ಲಿ ತ್ಯಾಜ್ಯ ನಿರ್ವಹಣೆಯೊಂದು ಸ್ಥಳೀಯಾಡಳಿತ ಮತ್ತು ದೇಗುಲಕ್ಕೆ ದೊಡ್ಡ ತಲೆನೋವಾಗಿತ್ತು. ನಗರದ ತ್ಯಾಜ್ಯ ಸಮಸ್ಯೆ ಕುರಿತು ‘ಉದಯವಾಣಿ’ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿತ್ತು.
ದಿನಕ್ಕೆ10 ಬಾರಿ ಲೋಡ್ !
ಇಂಜಾಡಿ ಬಳಿ ಹತ್ತು ಸೆಂಟ್ಸ್ ಜಾಗದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಘಟಕ ಸ್ಥಾಪನೆಯಾಗುತ್ತಿದೆ. ಇಂಧನ ಅಥವಾ ವಿದ್ಯುತ್ ಉಪಯೋಗಿಸದೆ, ಬೆಂಕಿ ಬಳಸಲಾಗುತ್ತಿದೆ. ಕಬ್ಬಿಣ ಮತ್ತು ಗ್ಲಾಸು ಹೊರತುಪಡಿಸಿ ಇತರ ಎಲ್ಲ ಕ್ಲಿಷ್ಟ ಘನ ವಸ್ತುಗಳು ಸುಟ್ಟು ಬೂದಿಯಾಗಲಿವೆ. ವಾಯು ಮಾಲಿನ್ಯದ ಸಮಸ್ಯೆ ಇಲ್ಲಿ ಉದ್ಭವವಾಗುವುದಿಲ್ಲ. ಉತ್ಪತ್ತಿಯಾಗುವ ವಿಷ ಅನಿಲ ಗಾಳಿಗೆ ಸೇರದಂತೆ ಪ್ರತ್ಯೇಕಿಸುವ ತಂತ್ರಜ್ಞಾನ ಇದರಲ್ಲಿದೆ. ಘಟಕದ ಯಂತ್ರ 300 ಕೆ.ಜಿ. ತ್ಯಾಜ್ಯ ಸುಡುವ ಸಾಮರ್ಥ್ಯ ಹೊಂದಿದೆ. ದಿನದಲ್ಲಿ 10 ಬಾರಿ ಯಂತ್ರಕ್ಕೆ ಘನ ತ್ಯಾಜ್ಯವನ್ನು ಲೋಡ್ ಮಾಡಬಹುದಾಗಿದೆ.
ಕಾರ್ಮಿಕರ ಕಡಿತ
ತ್ಯಾಜ್ಯ ಘಟಕದಲ್ಲಿ ಈಗಾಗಲೆ 8 ಕಾರ್ಮಿಕರಿದ್ದು, ನೂತನ ಘಟಕ ಕಾರ್ಯಾರಂಭ ಬಳಿಕ ಹೆಚ್ಚುವರಿ ಕಾರ್ಮಿಕರನ್ನು ಕೈ ಬಿಡುವ ಸಾಧ್ಯತೆ ಇದೆ. ಸುಮಾರು 6 ವರ್ಷದಿಂದ ಈ ಘಟಕದಲ್ಲಿ ತ್ಯಾಜ್ಯ ಕಸ ವಿಂಗಡಿಸುತ್ತಿರುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡುವುದು ಕೂಡ ಮುಖ್ಯವಾಗಿದೆ.
ಸ್ಥಳಕ್ಕೆ ಶೀಘ್ರ ಭೇಟಿ
ಸುಬ್ರಹ್ಮಣ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಪರಿಸರ ಸ್ನೇಹಿ ತ್ಯಾಜ್ಯ ಘಟಕದ ಸ್ಥಳಕ್ಕೆ ವಾರದೊಳಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಪ್ರಾಯೋಗಿಕ ನೆಲೆಯಲ್ಲಿ ಅಲ್ಲಿ ಘಟಕ ಕಾರ್ಯಾರಂಭಿಸಿದ ಬಳಿಕ ಮುಂದೆ ಇತರೆಡೆಗೆ ವಿಸ್ತರಿಸುವ ಚಿಂತನೆ ನಡೆಸಲಾಗುವುದು.
-ಡಾ| ಸೆಲ್ವಮಣಿ,
ದ.ಕ. ಜಿ.ಪಂ. ಸಿಇಒ
ಸಮಸ್ಯೆಗೆ ಕಡಿವಾಣ
ಘಟಕ ಸ್ಥಾಪನೆ ಬಳಿಕ ತ್ಯಾಜ್ಯ ಸಮಸ್ಯೆಗೆ ಕಡಿವಾಣ ಬೀಳಲಿದೆ. ಕಸಗಳನ್ನು ಮೂಲ ಹಂತದಲ್ಲೇ ಬೇರ್ಪಡಿಸುವ ಕುರಿತು ಮುಂದೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು.
-ಮುತ್ತಪ್ಪ ಪಿಡಿಒ,
ಸುಬ್ರಹ್ಮಣ್ಯ ಗ್ರಾ.ಪಂ.
ಬಾಲಕೃಷ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.