ಭಾಷಾ ಅಲ್ಪಸಂಖ್ಯಾಕರಿಗೂ ಸಮಾನ ಸೌಲಭ್ಯ: ಪೈ ಆಗ್ರಹ
Team Udayavani, Aug 26, 2019, 5:45 AM IST
ಮಂಗಳೂರು: ಧಾರ್ಮಿಕ ಅಲ್ಪಸಂಖ್ಯಾಕರಿಗೆ ನೀಡಲಾಗುತ್ತಿರುವ ಎಲ್ಲ ಸರಕಾರಿ ಸೌಲಭ್ಯಗಳನ್ನು ಭಾಷಾ ಅಲ್ಪಸಂಖ್ಯಾಕರಿಗೂ ನೀಡು ವಂತಾಗಬೇಕು ಎಂದು ಟಿ.ವಿ. ಮೋಹನದಾಸ್ ಪೈ ಒತ್ತಾಯಿಸಿದ್ದಾರೆ.
ರವಿವಾರ ಇಲ್ಲಿ ವಿಶ್ವ ಕೊಂಕಣಿ ಕೇಂದ್ರದ 10ನೇ ವರ್ಷದ ವಿದ್ಯಾರ್ಥಿ ವೇತನ ವಿತರಣ ಸಮಾರಂಭದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಕಲಂ 29 ಮತ್ತು 30ರಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾಕರಿಗೆ ನೀಡಲಾಗಿರುವ ಹಕ್ಕುಗಳ ಬಗ್ಗೆ ವಿವರಿಸಲಾಗಿದೆ. ಆದರೆ 70 ವರ್ಷಗಳಿಂದಲೂ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಮಾತ್ರ ವಿವಿಧ ಸೌಲಭ್ಯಗಳನ್ನು ನೀಡಿ ಭಾಷಾ ಅಲ್ಪಸಂಖ್ಯಾಕರನ್ನು ಸರಕಾರಗಳು ನಿರ್ಲಕ್ಷಿಸುತ್ತ ಬಂದಿವೆ ಎಂದು ಆರೋಪಿಸಿದರು.
ಕೊಂಕಣಿ ಭಾಷೆ ಮಾತನಾಡುವ ಹಿಂದೂ, ಮುಸ್ಲಿಂ, ಕ್ರೈಸ್ತ ಸಹಿತ ವಿವಿಧ ಸಮುದಾಯಗಳ ಜನರಿದ್ದಾರೆ. ಮುಸ್ಲಿಂ ಮತ್ತು ಕ್ರೈಸ್ತರಿಗೆ ಧಾರ್ಮಿಕ ಅಲ್ಪಸಂಖ್ಯಾಕರ ನೆಲೆಯಲ್ಲಿ ವಿವಿಧ ಸವಲತ್ತುಗಳು ಲಭಿಸುತ್ತವೆ. ಖಾರ್ವಿ, ಕುಡುಬಿ ಸಮುದಾಯದವರಿಗೆ ಇನ್ನೊಂದು ಇಲಾಖೆಯಡಿ ಸವಲತ್ತುಗಳು ಸಿಗುತ್ತವೆ. ಆದರೆ ಜಿಎಸ್‌ಬಿ ಸಮುದಾಯಕ್ಕೆ ಮಾತ್ರ ಯಾವ ಸವಲತ್ತು ಇಲ್ಲ ಎಂದರು.
ಜಿಎಸ್‌ಬಿ ಸಮುದಾಯದ 20 ಲಕ್ಷ ಜನರು ಮಾತ್ರ ಇದ್ದಾರೆ. ಆದ್ದರಿಂದ ಅವರನ್ನು ಭಾಷಾ ಅಲ್ಪಸಂಖ್ಯಾಕರೆಂದು ಪರಿಗಣಿಸಿ ವಿವಿಧ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿ ಸರಕಾರಕ್ಕೆ ಈ ಹಿಂದೆಯೇ ಪತ್ರ ಬರೆಯಲಾಗಿದೆ. ಆದರೆ ಸ್ಪಂದನೆ ದೊರೆತಿಲ್ಲ. ಮತ್ತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.