“ಜೋತಿಷಿ, ವಾಸ್ತುತಜ್ಞರು ಸಮಾಜಮುಖೀಯಾಗಿ ಸೇವೆ ಸಲ್ಲಿಸಿ’
ವಾಸ್ತು ವಿಜ್ಞಾನ ಪ್ರಮಾಣ ಪತ್ರ ಪ್ರದಾನ
Team Udayavani, Apr 9, 2019, 6:24 AM IST
ಮೂಡುಬಿದಿರೆ: ಜೋತಿಷ್ಯ ಮತ್ತು ವಾಸ್ತುತಜ್ಞರು ಸಮಾಜದಲ್ಲಿ ಶೋಷಿತರ ದುಃಖವನ್ನು ನಿವಾರಿಸಿ, ಸಮಾಜಮುಖೀಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿ ಗೌರವಾದರಗಳಿಗೆ ಪಾತ್ರರಾಗಬೇಕು ಎಂದು ಕೇಮಾರು ಶ್ರೀ ಸಾಂಧಿಪನೀಮಠದ ಈಶ್ವ ವಿಠ್ಠಲದಾಸ ಸ್ವಾಮೀಜಿ ಹೇಳಿದರು.
ಮಂಗಳೂರಿನ ಜೋತಿಷ್ಯ ಮತ್ತು ವಾಸ್ತು ವಿಜ್ಞಾನ ಕೇಂದ್ರದ ಗುರು ಪ್ರೊ| ಶೈಲೇಶ್ ಜೈನ್ ಅವರಲ್ಲಿ ಕಳೆದ ಐದು ವರ್ಷಗಳಿಂದ ಅಧ್ಯಯನ ಮಾಡಿದ ಅವರ ಶಿಷ್ಯರಿಗೆ ಕೇಮಾರು ಶ್ರೀ ಸಾಂದೀಪನೀ ಮಠದಲ್ಲಿ ಪ್ರಮಾಣ ಪತ್ರಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದ ಅವರು, ಕಲಿಕೆಗೆ ಅವಧಿ, ಪರಿಧಿ ಎಂಬುದಿಲ್ಲ. ಅದು ನಿರಂತರ ಜ್ಞಾನಯಜ್ಞವಾಗಿ ಮುಂದುವರಿಯಬೇಕು ಎಂದರು.
ಪ್ರೊ| ಶೈಲೇಶ್ ಜೈನ್ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೂಢನಂಬಿ ಕೆಗಳನ್ನು ತೆಗೆದುಹಾಕುವಲ್ಲಿ ಹಾಗೂ ಕಪಟ ಜೋತಿಷಿಗಳು ಮತ್ತು ಡೋಂಗಿ ವಾಸ್ತು ಸಲಹೆಗಾರರ ಬಣ್ಣ ಬಯಲು ಮಾಡುವಲ್ಲಿ ತಾನು ಬೋಧಿಸಿದ ವೈಜ್ಞಾನಿಕ ಜೋತಿಷ್ಯ ಮತ್ತು ವಾಸ್ತುಶಾಸ್ತ್ರದ ಮೂಲಕ ಸಮಾಜಕ್ಕೆ ಒಳಿತಿನ ದಾರಿತೋರಿ ಎಂದರು.
ಮಣಿಪಾಲದ ವೇ|ಮೂ| ಅಶೋಕ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಕೋರಿದರು. ಅಧ್ಯಯನಕಾರರ ಪರವಾಗಿ ಜಯಂತ ರಾವ್ ಬಂಟ್ವಾಳ, ಕಿರಣ್ ಕುಮಾರ್ ಮಣಿಪಾಲ, ಗಂಗಾಧರ ಶಿಬರೂರು, ದೇವಕುಮಾರ್ ಕೊಕ್ಕಡ, ಬಾಲಕೃಷ್ಣ ಮಂಗಳೂರು ಮತ್ತು ಕಾರ್ಯಕ್ರಮ ನಿರೂಪಕ ರಾಘವೇಂದ್ರ ಭಂಡಾರ್ಕರ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.