ಈಶ್ವರಮಂಗಲ ಪಶು ಚಿಕಿತ್ಸಾಲಯಕ್ಕೆ ಭಧ್ರತೆಇಲ್ಲ: ಕಟ್ಟಡ,ರಸ್ತೆಗೆಬೇಡಿಕೆ
Team Udayavani, Jun 2, 2018, 12:32 PM IST
ಈಶ್ವರಮಂಗಲ: ಕೇರಳ – ಕರ್ನಾಟಕದ ಗಡಿಭಾಗದಲ್ಲಿರುವ ಈಶ್ವರಮಂಗಲ ಪಶು ಚಿಕಿತ್ಸಾ ಕೇಂದ್ರ ಅಭದ್ರವಾಗಿದೆ. ಕಟ್ಟಡ ಐವತ್ತು ವರ್ಷಗಳಿಗೂ ಹೆಚ್ಚು ಹಳೆಯದು. ಕಿಟಿಕಿ, ಬಾಗಿಲುಗಳು ಹೆಸರಿಗಷ್ಟೇ ಇವೆ ಹೊರತು ಭದ್ರತೆ ಇಲ್ಲ.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕವೇ ಪಶು ಚಿಕಿತ್ಸಾಲಯಕ್ಕೆ ತೆರಳಬೇಕು. ಕೇಂದ್ರಕ್ಕೆ ಸರಿಯಾದ ರಸ್ತೆ ಮಾಡಲು ವ್ಯವಸ್ಥೆ ಇದ್ದರೂ ಪಶು ಪಾಲನೆ ಇಲಾಖೆ ಮೌನ ವಹಿಸಿದೆ. ಡಿ ಗ್ರೂಪ್ ನೌಕರ ಹುದ್ದೆ ಖಾಲಿ ಇರುವುದರಿಂದ ಸ್ವಚ್ಛತೆಗೂ ಸಮಸ್ಯೆಯಾಗಿದೆ. ಕೇಂದ್ರದ ಸುತ್ತ ಗಿಡ – ಬಳ್ಳಿಗಳು ಬೆಳೆದು ಕಟ್ಟಡವನ್ನು ಆವರಿಸಿವೆ. ಹಿರಿಯ ಪಶು ನಿರೀಕ್ಷಕರು ಪಶುಗಳ ಪರೀಕ್ಷೆಗೆ ಹೊರಗಡೆ ಹೋಗುವ ಸಂದರ್ಭದಲ್ಲಿ ಕೇಂದ್ರವನ್ನು ಬಂದ್ ಮಾಡಿಯೇ ತೆರಳಬೇಕಾಗುತ್ತಿದೆ.
ಕೇಂದ್ರದ ವ್ಯಾಪ್ತಿ
ಪಡುವನ್ನೂರು, ಬಡಗನ್ನೂರು ಹಾಗೂ ನೆಟ್ಟಣಿಗೆಮುಟ್ನೂರು ಗ್ರಾಮ ವ್ಯಾಪ್ತಿಯನ್ನು ಈ ಪಶು ಚಿಕಿತ್ಸಾಲಯ ಹೊಂದಿದೆ. ಪಶು ಔಷಧಕ್ಕಾಗಿ ಈ ಪ್ರದೇಶದಿಂದ ಗ್ರಾಮಸ್ಥರು ಹಾಗೂ ಗಡಿಭಾಗವಾಗಿರುವುದರಿಂದ ನೆರೆಯ ರಾಜ್ಯದ ರೈತರೂ ಬರುತ್ತಾರೆ. ಸಮರ್ಪಕ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿದ್ದಾರೆ.
ಸೌಲಭ್ಯಗಳು
ಪಶುಗಳಿಗೆ ಕೃತಕ ಗರ್ಭಧಾರಣೆ, ಜಂತುನಾಶಕ ಔಷಧಗಳು, ಸಮಯಕ್ಕೆ ಸರಿಯಾಗಿ ಲಸಿಕೆ ಕಾರ್ಯಕ್ರಮ, ಜಾನುವಾರುಗಳಿಗೆ ಬರುವ ಕಾಯಿಲೆಗಳ ಹತೋಟಿ ಇತ್ಯಾದಿ.
ಹುದ್ದೆ ಭರ್ತಿಯಾಗಲಿ
ಕೇಂದ್ರಕ್ಕೆ ಬಂದು 8 ತಿಂಗಳಷ್ಟೇ ಆಗಿವೆ. ದಿನಕ್ಕೆ 5ರಿಂದ 8 ಜನರು ಬರುತ್ತಾರೆ. ಔಷಧಗಳನ್ನು ಕೊಡುತ್ತೇವೆ. ರೈತರ ಮನೆಗಳಿಗೆ ಭೇಟಿ ಸಂದರ್ಭದಲ್ಲಿ ಕೇಂದ್ರವನ್ನು ಮುಚ್ಚಿ ಹೋಗುವ ಸ್ಥಿತಿ ಇದೆ. ಇದರಿಂದ ಉಳಿದ ರೈತರಿಗೆ ತೊಂದರೆಯಾಗುತ್ತಿದೆ. ಹುದ್ದೆಗಳು ಭರ್ತಿಯಾದರೆ ಸಮಸ್ಯೆ ಸರಿಯಾಗುತ್ತೆ.
– ಬಿ.ಕೆ. ಬಸವರಾಜು,
ಹಿರಿಯ ಪಶು ವೈದ್ಯಕೀಯ ಪರೀಕ್ಷಕ
ಕಟ್ಟಡಕ್ಕೆ ಮನವಿ
ಕಟ್ಟಡಕ್ಕೆ ಮನವಿ ಸಲ್ಲಿಸಲಾಗಿದೆ. ಸದ್ಯದಲ್ಲಿ ಮಂಜೂರು ಆಗುವ ನಿರೀಕ್ಷೆ ಇದೆ. ಡಿ ಗ್ರೂಪ್ ನೌಕರರ ಸಮಸ್ಯೆ ಎಲ್ಲ ಕಡೆ ಇದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಸುರೇಶ್ ಭಟ್,
ಸಹಾಯಕ ನಿರ್ದೇಶಕರು, ಪಶು ಇಲಾಖೆ, ಪುತ್ತೂರು
ಕೇಂದ್ರಕ್ಕೇನು ಬೇಕು?
. ಮುಖ್ಯ ರಸ್ತೆಯಿಂದ ಪಶು ಚಿಕಿತ್ಸಾಲಯಕ್ಕೆ ಸಮರ್ಪಕ ರಸ್ತೆ ಸೌಲಭ್ಯ.
.ಕೃತಕ ಗರ್ಭಧಾರಣ ಸಾಧನಕ್ಕೆ ಪೈಂಟ್ ಹಚ್ಚಬೇಕು ಅಥವಾ ಹೊಸ ಸಾಧನವನ್ನು ಆಳವಡಿಸಬೇಕು.
.ಕೇಂದ್ರದ ಸುತ್ತ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಬೇಕು.
. ಎರಡು ಕೋಣೆಗಳಿದ್ದು, ಕಿಟಕಿ-ಬಾಗಿಲು ದುರಸ್ತಿಯಾಗಬೇಕು.
. ಡಿ ಗ್ರೂಪ್ ನೌಕರನನ್ನು ನೇಮಿಸಿ, ಕೇಂದ್ರದ ಸ್ವಚ್ಛತೆ ಕಾಪಾಡಬೇಕು.
. ಲಸಿಕೆ, ಔಷಧ ಶೇಖರಿಸುವ ಪ್ರಿಜ್ ದುರಸ್ತಿಗೊಳಿಸಬೇಕು.
ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.