ಇಎಸ್‌ಐ ಮಂಗಳೂರು ಉಪಪ್ರಾದೇಶಿಕ ಕಚೇರಿಗೆ ಬೀಗ?


Team Udayavani, Nov 28, 2017, 8:27 AM IST

28-4.jpg

ಮಂಗಳೂರು: ಕರಾವಳಿ ಭಾಗದ ಲಕ್ಷಾಂತರ ಕಾರ್ಮಿಕರ ಪಾಲಿಗೆ ಅಪತ್ಭಾಂಧವವಾಗಿದ್ದ ಇಎಸ್‌ಐಸಿ  (ಕಾರ್ಮಿಕ ರಾಜ್ಯ ವಿಮಾ ನಿಗಮ) ಮಂಗಳೂರು ಉಪ ಪ್ರಾದೇಶಿಕ ಕಚೇರಿಯನ್ನು  ಮುಚ್ಚಲು ಇಎಸ್‌ಐ ನಿಗಮ ಮುಂದಾಗಿದೆ. ಇದರಿಂದ ಮಂಗಳೂರು ಕಚೇರಿ ವ್ಯವಹಾರಗಳು ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದ್ದು, ಇಎಸ್‌ಐಸಿಯ ಈ ನಡೆಯಿಂದಾಗಿ ಲಕ್ಷಾಂತರ ಮಂದಿ ಕಾರ್ಮಿಕರು ಹಾಗೂ ಸಾವಿರಾರು ಉದ್ಯೋಗದಾತರು ಆತಂಕಿತರಾಗಿದ್ದಾರೆ.  

ಕರಾವಳಿಯಲ್ಲಿ ಕಾರ್ಮಿಕರ ಆವಶ್ಯಕತೆ, ಬೆಂಗಳೂರು ಕಚೇರಿಯ ಮೇಲಿನ ಒತ್ತಡ ಪರಿಗಣಿಸಿ, ಬಹಳಷ್ಟು ಬೇಡಿಕೆ, ಮನವಿಗಳ ಬಳಿಕ 2013ರಲ್ಲಿ  ಮಂಗಳೂರಿನ ನವಭಾರತ ವೃತ್ತದಲ್ಲಿ ಇಎಸ್‌ಐ ಉಪಪ್ರಾದೇಶಿಕ ಕಚೇರಿ  ಕಾರ್ಯಾರಂಭ ಮಾಡಿತ್ತು. ಪ್ರಸ್ತುತ ಈ ಕಚೇರಿ ವ್ಯಾಪ್ತಿಯಲ್ಲಿ  ಎರಡು ಲಕ್ಷಕ್ಕೂ ಅಧಿಕ ಕಾರ್ಮಿಕರು ಹಾಗೂ ಸುಮಾರು 5,200 ಮಂದಿ ಉದ್ಯೋಗದಾತರು ಒಳಗೊಂಡಿದ್ದಾರೆ. ಆದರೆ ಕಚೇರಿ ಮುಚ್ಚುವ ಇಎಸ್‌ಐ ನಿಗಮದ ನಿರ್ಧಾರ ಕಾರ್ಮಿಕ ವರ್ಗವನ್ನು  ಇಎಸ್‌ಐ ಸೌಲಭ್ಯದಿಂದ ದೂರವಿರಿಸಲಿದೆ.  

ಬಹಳಷ್ಟು  ಪ್ರಯೋಜನ 
ಕಾರ್ಮಿಕರ ಆರೋಗ್ಯ ವಿಮೆಗೆ ಸಂಬಂಧಪಟ್ಟಂತೆ ಇರುವ ಸಮಸ್ಯೆ ಗಳನ್ನು ಬಗೆಹರಿಸುವುದು, ವೈದ್ಯಕೀಯ ಸೌಲಭ್ಯಗಳು ತುರ್ತಾಗಿ ದೊರೆಯುವ ನಿಟ್ಟಿನಲ್ಲಿ ಪೂರಕ ಕ್ರಮಗಳು, ಈ ಕುರಿತ ತಾಂತ್ರಿಕ ಸಮಸ್ಯೆಗಳ  ಪರಿಹಾರ, ಮಾಹಿತಿ ಸೇರಿದಂತೆ ಉಪ ಪ್ರಾದೇಶಿಕ ಕಚೇರಿ ಬಹುಮುಖ್ಯ ಕಾರ್ಯಗಳನ್ನು  ನಿರ್ವಹಿಸುತ್ತದೆ. ಕಾರ್ಮಿಕ ರಿಗೆ ಚಿಕಿತ್ಸಾ ವೆಚ್ಚ ಪಾವತಿ, ನಗದು ಸೌಲಭ್ಯಕ್ಕೆ ಸಂಬಂಧಪಟ್ಟಂತೆ ಯಾವುದೇ ದೃಢಪತ್ರಗಳಲ್ಲಿ ಸಮಸ್ಯೆ ಇದ್ದರೆ ಕಾರ್ಮಿಕರಿಗೆ ಅವುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ  ಸಂಬಂಧಪಟ್ಟ ಕಾರ್ಮಿಕರು ಉಪಪ್ರಾದೇಶಿಕ ಕಚೇರಿಗೆ ಬಂದು ಅದರಲ್ಲಿರುವ ನ್ಯೂನತೆಗಳನ್ನು  ಸರಿಪಡಿಸಬಹುದು. ಇದರೊಂದಿಗೆ ಕಚೇರಿ ಯಲ್ಲಿ ತಿಂಗಳಿಗೊಮ್ಮೆ ಸುವಿಧ ಸಮಾಗಮ ಕಾರ್ಯಕ್ರಮ ಆಯೋಜಿಸಿ ಫಲಾನುಭವಿಗಳ ದೂರು ಗಳನ್ನು ಪರಿಹರಿಸಲಾಗುತ್ತಿದೆ.  ಉದ್ಯೋಗ ದಾತರು ಇಎಸ್‌ಐ ದೇಣಿಗೆ ಪಾವತಿ ವಿಚಾರಗಳು, ಇರುವ ಸಮಸ್ಯೆಗಳು, ವಿವಾದಗಳನ್ನು  ಇಲ್ಲಿಯೇ ಬಗೆಹರಿಸಿ ಕೊಳ್ಳಬಹುದಾಗಿದೆ.

ಇನ್ನು  400 ಕಿ.ಮೀ. ಪ್ರಯಾಣಿಸಬೇಕು!
ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಫಲಾನುಭವಿಗಳು ತಮ್ಮ ಅಗತ್ಯಗಳಿಗೆ ಮಂಗಳೂರು ಉಪಪ್ರಾದೇಶಿಕ ಕಚೇರಿ ಯನ್ನೇ ಆಶ್ರಯಿಸುತ್ತಿದ್ದಾರೆ. ಇಲ್ಲಿ ಕಚೇರಿ ಮುಚ್ಚಿದರೆ, ಮುಂದೆ ಬೆಂಗಳೂರು ಕಚೇರಿಯನ್ನೇ ಆಶ್ರಯಿಸಬೇಕಾಗುತ್ತದೆ. ಒಂದೋ ಆನ್‌ಲೈನ್‌ ಇಲ್ಲವೆ ಪತ್ರ ವ್ಯವಹಾರ ನಡೆಸ ಬೇಕು ಇಲ್ಲವೆ  ವೈಯಕ್ತಿಕವಾಗಿ ಬೆಂಗಳೂರಿಗೆ ತೆರಳಿ ಪರಿಹಾರ ಕಂಡುಕೊಳ್ಳಬೇಕು. ಉಡುಪಿ ಶೀರೂರಿನ ಕಾರ್ಮಿಕರು 400 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಇಎಸ್‌ಐ ಸೌಲಭ್ಯದ ಫಲಾನುಭವಿಗಳು ಕಡಿಮೆ ವೇತನ ಪಡೆಯುವವರು. ಹೆಚ್ಚು ಶಿಕ್ಷಣ ಪಡೆಯದವರು ಬಹುಸಂಖ್ಯೆ ಲ್ಲಿದ್ದಾರೆ. ದೂರದ ಬೆಂಗಳೂರಿಗೆ ಹೋಗಿ ಅಥವಾ ಆನ್‌ಲೈನ್‌ ಮೂಲಕ ಪರಿಹಾರ ಕಂಡುಕೊಳ್ಳಲು ಕಷ್ಟಸಾಧ್ಯ. ಇದರ ಬಾಧಕಗಳನ್ನು ಅಧ್ಯಯನ ನಡೆಸದೆ ಏಕಾಏಕಿ  ನಿರ್ಧಾರ ಕೈಗೊಂಡಿದ್ದಕ್ಕೆ ಕಾರ್ಮಿಕರು, ಉದ್ಯೋಗ ದಾತರ ವರ್ಗದಿಂದ ಬಲ ವಾದ ಆಕ್ಷೇಪ ವ್ಯಕ್ತವಾಗಿದೆ.  

ಸ್ಥಳಾಂತರ ವಿರುದ್ಧ  ತೀವ್ರ ಹೋರಾಟಕ್ಕೆ ಸಿದ್ಧತೆ
2016ರ ಮೇನಿಂದ ಇಎಸ್‌ಐ ಸೌಲಭ್ಯ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಯಾಗಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಾದಂತೆ ಸೌಲಭ್ಯ ಸೇವಾ ಕೇಂದ್ರಗಳನ್ನು ಹೆಚ್ಚು ಮಾಡುವ ಬದಲು ಕಡಿಮೆ ಮಾಡುವುದು ವಿಪರ್ಯಾಸ ವಾಗಿದೆ. ಕಾರ್ಮಿಕ ವರ್ಗಕ್ಕೆ ಸೌಲಭ್ಯ, ಸಮಸ್ಯೆಗಳನ್ನು  ನಿವಾರಿಸಲು ಸುಲಭವಾಗಿರುವ ಮಂಗಳೂರು ಉಪ ಪ್ರಾದೇಶಿಕ ಕಚೇರಿಯನ್ನು  ಮುಚ್ಚುವ ವಿರುದ್ಧ  ತೀವ್ರ ಪ್ರತಿ ಭಟನೆಗೆ ಕಾರ್ಮಿಕರು ಹಾಗೂ ಉದ್ಯೋಗದಾತರು ಮುಂದಾಗಿದ್ದಾರೆ.  ಇಂಟಕ್‌, ಸಿಐಟಿಯು ಎಐಟಿಯುಸಿ, ಬಿಎಂಎಸ್‌, ಎಚ್‌ಎಂಎಸ್‌ ಸೇರಿದಂತೆ ಕಾರ್ಮಿಕ ಸಂಘಟನೆಗಳು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪ್ರಬಲ ವಿರೋಧ ವ್ಯಕ್ತಪಡಿಸಿವೆ. 

ಕಚೇರಿ ವರ್ಗಾಯಿಸಲು ಬಿಡುವುದಿಲ್ಲ
ಮಂಗಳೂರಿನಿಂದ ಇಎಸ್‌ಐಸಿ ಉಪಪ್ರಾದೇಶಿಕ ಕಚೇರಿ ಯನ್ನು  ಮುಚ್ಚು ಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಚೇರಿಯನ್ನು ಮಂಗಳೂರಿನಲ್ಲಿ  ಉಳಿಸಿಕೊಳ್ಳಬೇಕು ಎಂದು ಈಗಾಗಲೇ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆದಿದ್ದೇನೆ. ಹೊಸದಿಲ್ಲಿಯಲ್ಲಿ ಸಚಿವರನ್ನು  ಭೇಟಿಯಾಗಿ ಮಾತುಕತೆ ನಡೆಸುತ್ತೇನೆ.
ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.ಲೋಕಸಭಾ ಕ್ಷೇತ್ರ

ಇಎಸ್‌ಐಸಿ  ಉಪಪ್ರಾದೇಶಿಕ ಕಚೇರಿಯನ್ನು ಮುಚ್ಚುವುದಕ್ಕೆ  ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಕಚೇರಿಯನ್ನು ಮಂಗಳೂರಿನಲ್ಲೇ ಉಳಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಚಿವರು, ಸಂಸದರು ಹಾಗೂ ಇಎಸ್‌ಐ ನಿಗಮದ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ವತಿಕಾ ಪೈ, ಅಧ್ಯಕ್ಷರು ಕೆಸಿಸಿಐ
 
ಇಎಸ್‌ಐಸಿ ಉಪಪ್ರಾದೇಶಿಕ ಕಚೇರಿ ಮುಚ್ಚುವುದನ್ನು  ವಿರೋಧಿಸಿ  ನಾವು ಈಗಾಗಲೇ ಲಿಖೀತವಾಗಿ ಪ್ರತಿಭಟನೆ ವ್ಯಕ್ತ ಪಡಿಸಿ  ದ್ದೇವೆ. ಇಎಸ್‌ಐ ಸೌಲಭ್ಯದಿಂದ ಕಾರ್ಮಿಕರು ದೂರಸರಿಯುವಂತೆ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. 
ವಸಂತ ಆಚಾರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ
 
ಇಎಸ್‌ಐಸಿ ಮಂಗಳೂರು ಉಪಪ್ರಾದೇಶಿಕ ಕಚೇರಿ ಮುಚ್ಚುಗಡೆ ಮಾಡುವುದು ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ 2 ಲಕ್ಷ ಕಾರ್ಮಿಕರಿಗೆ ಮಾಡುವ ಅನ್ಯಾಯ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ.     
ಮನೋಹರ ಶೆಟ್ಟಿ , ಇಂಟಕ್‌ ದ.ಕ. ಜಿಲ್ಲಾಧ್ಯಕ್ಷ 
 
ಇಎಸ್‌ಐಸಿ  ಉಪಪ್ರಾದೇಶಿಕ ಕಚೇರಿ ಮುಚ್ಚುವುದನ್ನು  ನಾವು ತೀವ್ರವಾಗಿ ವಿರೋಧಿಸುತ್ತೇವೆ.ಇದರಿಂದ ಕಾರ್ಮಿಕ ವರ್ಗಕ್ಕೆ ಆಗುವ ಸಮಸ್ಯೆಗಳನ್ನು  ಕೇಂದ್ರ ಕಾರ್ಮಿಕ ಸಚಿವರ ಗಮನಕ್ಕೆ ತರುತ್ತೇನೆ.
ವಿಶ್ವನಾಥ ಶೆಟ್ಟಿ  ಕೆ., ಬಿಎಂಎಸ್‌ ರಾಜ್ಯಾಧ್ಯಕ್ಷರು

ಕೇಶವ ಕುಂದರ್‌

ಟಾಪ್ ನ್ಯೂಸ್

hk-patil

MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು‌ ಕಾನೂನು ಇದೆಯೇ?: ಎಚ್.ಕೆ.ಪಾಟೀಲ್

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

siddanna

MUDA; ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ: ಸಿಎಂ ಕಿಡಿ

Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ  

Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ  

1-reddd

BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ

Tiger

Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್‌

3

Bajpe: ಹಳ್ಳಿಯ ತೋಡು, ಗದ್ದೆ, ತೋಟಗಳನ್ನೂ ಬಿಡದ ಪ್ಲಾಸ್ಟಿಕ್‌!

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್‌

hk-patil

MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು‌ ಕಾನೂನು ಇದೆಯೇ?: ಎಚ್.ಕೆ.ಪಾಟೀಲ್

9

BTS Kannada Movie: ತೆರೆ ಹಿಂದಿನ ಕಥೆಗಳ ಬಿಟಿಎಸ್‌

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.