ಕರಾವಳಿಯಲ್ಲಿ ಸ್ಥಾಪನೆಯಾಗಲಿವೆ 26 ಸೈರನ್ ಟವರ್‌ಗಳು
Team Udayavani, Oct 30, 2020, 6:00 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಚಂಡಮಾರುತ, ಸುನಾಮಿ ಸಂದರ್ಭ ಮುನ್ನೆಚ್ಚರಿಕೆ ನೀಡಿ ಕ್ಷಿಪ್ರ ಗತಿ ಯಲ್ಲಿ ಪರಿಹಾರ ಕಾರ್ಯಾಚರಣೆ ನಡೆ ಸುವುದಕ್ಕೆ ಅನುವಾಗುವಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 26 ಮುನ್ನೆಚ್ಚರಿಕೆ ಸೈರನ್ ಟವರ್‌ಗಳು ಸ್ಥಾಪನೆಯಾಗಲಿವೆ.
ರಾಷ್ಟ್ರೀಯ ಚಂಡ ಮಾರುತ ಅಪಾಯ ಮುನ್ಸೂ ಚನೆ, ಉಪಶಮನ ಯೋಜನೆ (ಎನ್‌ಸಿಆರ್ ಎಂಪಿ) ಯಡಿ ಅನುಷ್ಠಾನ ಗೊಳ್ಳುವ ಯೋಜನೆಯ 26.92 ಕೋ.ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈಗ ಅನುಷ್ಠಾನದ ಹಂತ ತಲುಪಿದೆ.
ಅರಬಿ ಸಮುದ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಾಗ ಚಂಡಮಾರುತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತಗಳನ್ನು ಕಡಿಮೆಗೊಳಿಸಲು ಸೈರನ್ ಟವರ್ ನಿರ್ಮಾಣ ಯೋಜನೆಯನ್ನು ಎನ್‌ಸಿಆರ್‌ಎಂಪಿ ರೂಪಿಸಿತ್ತು. ಎರಡು ವರ್ಷಗಳ ಹಿಂದೆ ಸ್ಥಳ ಸಮೀಕ್ಷೆ ನಡೆಸಿ ಒಟ್ಟು 26 ಸ್ಥಳ ಆಯ್ಕೆ ಮಾಡಲಾಗಿತ್ತು.
ಆಶ್ರಯತಾಣಗಳು ಬಹುತೇಕ ಪೂರ್ಣ
ಚಂಡುಮಾರುತ ಸಹಿತ ಪ್ರಕೃತಿ ವಿಕೋಪಗಳು ತಲೆದೋರಿದಾಗ ಜನರಿಗೆ ತುರ್ತು ಆಶ್ರಯ ಕಲ್ಪಿಸಲು ದಕ್ಷಿಣ ಕನ್ನಡದಲ್ಲಿ ಉಳ್ಳಾಲ ಮತ್ತು ಹೊಸಬೆಟ್ಟು ಹಾಗೂ ಉಡುಪಿಯಲ್ಲಿ ತೆಕ್ಕಟ್ಟೆ ಮತ್ತು ಕಾಪುನಲ್ಲಿ ಬಹುಉದ್ದೇಶದ ಸಾವಿರ ಜನರ ಸಾಮರ್ಥ್ಯದ ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಇದರ ಜತೆಗೆ ತ್ವರಿತ ಕಾರ್ಯಾಚರಣೆಗೆ ನೆರವಾಗುವಂತೆ ಈ ಯೋಜನೆಯಡಿ ಕರಾವಳಿ ತೀರದಲ್ಲಿ ಸೇತುವೆ ಮತ್ತು ರಸ್ತೆಗಳನ್ನು ಕೂಡ ನಿರ್ಮಿಸಲಾಗಿದೆ.
ಸೈರನ್ ಮೂಲಕ ಎಚ್ಚರಿಕೆ
ಕರಾವಳಿಯಲ್ಲಿ ಚಂಡಮಾರುತ, ತ್ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆಗಳು ಹವಾಮಾನ ಇಲಾಖೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿ ಗಳಿಂದ ಲಭ್ಯವಾದ ಕೂಡಲೇ ಎಚ್ಚರಿಕೆ ಮತ್ತು ಸಂದೇಶ ವನ್ನು ಈ ಮೆಗಾ ಟವರ್‌ಗಳಿಗೆ ರವಾನಿಸ ಲಾಗುತ್ತದೆ. ಅಪಾಯದ ಮುನ್ನೆಚ್ಚರಿಕೆಯನ್ನು ಸೈರನ್ ಟವರ್ ಮೂಲಕ ಸುಮಾರು 10 ಕಿ.ಮೀ. ಸುತ್ತಳತೆಯ ವರೆಗೆ ನೀಡಲು ಸಾಧ್ಯವಾಗುತ್ತದೆ. ಇದು ಸ್ಥಳೀಯವಾಗಿ ತ್ವರಿತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಪರಿಹಾರ ತಂಡಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗುತ್ತದೆ.
ಆಯ್ಕೆಯಾಗಿರುವ ತಾಣಗಳು
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ತಲಾ 8 ಹಾಗೂ ಉ.ಕ.ದಲ್ಲಿ 10 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ದಕ್ಷಿಣ ಕನ್ನಡ
ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಬೀಚ್, ಹೊಸ ಬೆಟ್ಟು , ಡಿ.ಸಿ. ಕಚೇರಿ ಬಳಿ.
ಉಡುಪಿ
ಪಡುಬಿದ್ರಿ, ಕಾಪು, ಮಲ್ಪೆ, ಕೋಡಿ, ಮಟ್ಟು, ಮರವಂತೆ, ಶಿರೂರು ಬೀಚ್ ಬಳಿ ಮತ್ತು ತೆಕ್ಕಟ್ಟೆ ಪ್ರದೇಶ.
ಉತ್ತರ ಕನ್ನಡ
ಮುರುಡೇಶ್ವರ ಬೀಚ್, ಎಕೋ ಬೀಚ್ ಪಾರ್ಕ್, ಓಂ ಮತ್ತು ಕುಡ್ಲೆ ಬೀಚ್ ನಡುವಣ ಪ್ರದೇಶ, ಗೋಕರ್ಣ ಬೀಚ್, ಆರ್.ಟಿ. ಬೀಚ್, ಮಂಕಿ, ಬೇಲೇಕೇರಿ, ಪುಜಾಗೇರಿ ಕಾಲೇಜು ಆವರಣ, ಶಿರಾಲಿ, ಚಿಟ್ಟಕುಳ ಗ್ರಾಮ.
ಕರಾ ವಳಿಯಲ್ಲಿ ಸಂಭಾವ್ಯ ಪ್ರಕೃತಿ ವಿಕೋಪ ನಿರ್ವಹಣೆ ಯಲ್ಲಿ ಮುನ್ನೆಚ್ಚ ರಿಕೆ ಟವರ್‌ಗಳನ್ನು ನಿರ್ಮಿಸುವ ಯೋಜನೆ ಈ ಹಿಂದೆ ರೂಪಿತವಾಗಿದೆ. ಸರಕಾರ ದಿಂದ ಅನುಮೋದನೆ ಆಗಿರುವ ಬಗ್ಗೆ ಮಾಹಿತಿ ಇದ್ದು, ಅಧಿಕೃತವಾಗಿ ಜಿಲ್ಲಾಡಳಿತಕ್ಕೆ ಆದೇಶ ಬಂದಿಲ್ಲ. ಇದು ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ಕೆ.ವಿ. ರಾಜೇಂದ್ರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.